ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/02 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2002 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಮೇ 13ರಿಂದ ಆರಂಭವಾಗುವ ವಾರ
  • ಮೇ 20ರಿಂದ ಆರಂಭವಾಗುವ ವಾರ
  • ಮೇ 27ರಿಂದ ಆರಂಭವಾಗುವ ವಾರ
  • ಜೂನ್‌ 3ರಿಂದ ಆರಂಭವಾಗುವ ವಾರ
2002 ನಮ್ಮ ರಾಜ್ಯದ ಸೇವೆ
km 5/02 ಪು. 2

ಸೇವಾ ಕೂಟದ ಶೆಡ್ಯೂಲ್‌

ಮೇ 13ರಿಂದ ಆರಂಭವಾಗುವ ವಾರ

ಗೀತೆ 9 (37)

15 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 8ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್‌-ಜೂನ್‌ ಎಚ್ಚರ! ಪತ್ರಿಕೆಯನ್ನು (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿರುವ ಮೊದಲನೆಯದ್ದು) ಮತ್ತು ಮೇ 15ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡುವುದೆಂಬುದರ ಪ್ರತ್ಯೇಕ ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ “ನಾನು ಕಾರ್ಯಮಗ್ನನು” ಎಂಬ ಸಂಭಾಷಣಾ ತಡೆಗಟ್ಟನ್ನು ನಿರ್ವಹಿಸುವ ಬೇರೆ ಬೇರೆ ವಿಧಗಳನ್ನು ತೋರಿಸಿರಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ 11-12ನೆಯ ಪುಟಗಳನ್ನು ನೋಡಿರಿ.

10 ನಿ:  “ನಮ್ಮ ಸಾಹಿತ್ಯವನ್ನು ಅಮೂಲ್ಯವೆಂದೆಣಿಸುತ್ತೀರೊ?” ಒಬ್ಬ ಹಿರಿಯನಿಂದ ಪ್ರೋತ್ಸಾಹದಾಯಕ ಭಾಷಣ.

20 ನಿ:  “‘ಹುರುಪಿನ ರಾಜ್ಯ ಘೋಷಕರು’​—⁠2002ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ.”a ಸೆಕ್ರಿಟರಿಯು ನಿರ್ವಹಿಸುವ ಭಾಗ. ಬೈಬಲ್‌ ಕಾಲಗಳಿಂದ ಹಿಡಿದು ನಮ್ಮ ದಿನದ ವರೆಗೆ ದೇವರ ಜನರನ್ನು ಬಲಪಡಿಸುವುದರಲ್ಲಿ ದೊಡ್ಡ ಸಮ್ಮೇಳನಗಳು ಒಂದು ಪ್ರಧಾನ ಪಾತ್ರವನ್ನು ವಹಿಸಿವೆ. (ಘೋಷಕರು [ಇಂಗ್ಲಿಷ್‌] ಪುಸ್ತಕ, ಪುಟ 254, ಪ್ಯಾರಗ್ರಾಫ್‌ 1-3, ಮತ್ತು ಇನ್‌ಸೈಟ್‌ ಸಂಪುಟ 1, ಪುಟ 821 ಪ್ಯಾರಗ್ರಾಫ್‌ 5ನ್ನು ನೋಡಿರಿ.) ಈ ವರ್ಷದ ಜಿಲ್ಲಾ ಅಧಿವೇಶನದ ಎಲ್ಲ ಮೂರು ದಿನಗಳಿಗೆ ಹಾಜರಾಗಲಿಕ್ಕಾಗಿ ಈಗ ತಯಾರಿಗಳನ್ನು ಮಾಡಲಾರಂಭಿಸುವಂತೆ ಎಲ್ಲರನ್ನು ಉತ್ತೇಜಿಸಿರಿ.

ಗೀತೆ 23 (200) ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 20ರಿಂದ ಆರಂಭವಾಗುವ ವಾರ

ಗೀತೆ 1 (13)

12 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ. ಪ್ರಶ್ನಾ ರೇಖಾಚೌಕವನ್ನು ಪುನರ್ವಿಮರ್ಶಿಸಿರಿ.

10 ನಿ:  ನಮ್ಮ ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವುದು. ಒಬ್ಬ ಸಮರ್ಥ ಹಿರಿಯನಿಂದ ಭಾಷಣ. ದೇಶಭಕ್ತಿಯ ಪ್ರದರ್ಶನಗಳು ಶಾಲೆಯಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ನೆರೆಹೊರೆಯಲ್ಲಿ ಹೆಚ್ಚು ಸರ್ವಸಾಮಾನ್ಯವಾಗಿ ಬಿಟ್ಟಿವೆ. ಇದನ್ನು ಪ್ರೋತ್ಸಾಹಿಸುವವರಲ್ಲಿ ಅನೇಕರು, ರಾಷ್ಟ್ರೀಯ ದುರಂತಗಳಿಂದಾಗಿ ಉಂಟಾಗಿರುವ ಆತಂಕ ಮತ್ತು ದುಃಖವನ್ನು ನಿಭಾಯಿಸಲಿಕ್ಕಾಗಿರುವ ಒಂದು ಮಾರ್ಗವಾಗಿ ಹಾಗೆ ಮಾಡುತ್ತಾರೆ. ಜಗತ್ತಿನಲ್ಲಿ ಏನು ನಡೆಯುತ್ತಿದೆಯೊ ಅದನ್ನು ನೋಡಿ ನಾವು ಕೂಡ ದುಃಖಿತರಾಗುವುದಾದರೂ, ಇದಕ್ಕಿಂತಲೂ ಹೆಚ್ಚು ದೊಡ್ಡದಾಗಿರುವ ವಿಶ್ವ ಪರಮಾಧಿಕಾರದ ವಾದಾಂಶವು ನಮಗೆ ಅರ್ಥವಾಗುತ್ತದೆ ಮತ್ತು ನಾವು ರಾಜ್ಯ ಸಂದೇಶದಿಂದ ಸಂತೈಸಲ್ಪಡುತ್ತೇವೆ. ನಾವು ರಾಷ್ಟ್ರೀಯ ಚಟುವಟಿಕೆಗಳಲ್ಲಿ ಏಕೆ ಜೊತೆಗೂಡುವುದಿಲ್ಲ ಎಂಬುದನ್ನು ಇತರರಿಗೆ ಜಾಣ್ಮೆಯಿಂದ ವಿವರಿಸುತ್ತಿರುವಾಗ, ನಾವು ದೇವರ ವಾಕ್ಯದಲ್ಲಿ ಕಂಡುಕೊಂಡಿರುವ ಸಾಂತ್ವನ ಮತ್ತು ನಿರೀಕ್ಷೆಯನ್ನೂ ಅವರೊಂದಿಗೆ ಹಂಚಿಕೊಳ್ಳಬೇಕು. ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ ಎಂಬ ಬ್ರೋಷರ್‌ನ 20-4ನೆಯ ಪುಟಗಳಲ್ಲಿ, “ಧ್ವಜವಂದನೆ” ಎಂಬ ಉಪಶೀರ್ಷಿಕೆಯ ಕೆಳಗೆ, ನಾವು ದೇಶಭಕ್ತಿಯ ಸಮಾರಂಭಗಳಲ್ಲಿ ಏಕೆ ಪಾಲ್ಗೊಳ್ಳುವುದಿಲ್ಲವೆಂಬುದರ ಕಾರಣವು ವಿವರಿಸಲ್ಪಟ್ಟಿದೆ. ಮುಖ್ಯಾಂಶಗಳನ್ನು ಆವರಿಸಿರಿ ಮತ್ತು ಹೆತ್ತವರು ಈ ಮಾಹಿತಿಯನ್ನು ತಮ್ಮ ಮಕ್ಕಳೊಂದಿಗೆ ಜಾಗ್ರತೆಯಿಂದ ಚರ್ಚಿಸುವಂತೆ ಉತ್ತೇಜಿಸಿರಿ. ಆ ಬ್ರೋಷರಿನ ಪುಟ 20ರಲ್ಲಿ ಕಂಡುಬರುವ ಮತ್ತು ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಜನವರಿ 8, 1996ರ ಸಂಚಿಕೆಯಲ್ಲಿರುವ ಅನುಭವಗಳನ್ನು ತಿಳಿಸಿರಿ. ಯೆಹೋವನಿಗೆ ಅನನ್ಯ ಭಕ್ತಿಯನ್ನು ಕೊಡುವ, ಆದರೆ ಅದೇ ಸಮಯದಲ್ಲಿ ಸರಕಾರೀ ಅಧಿಕಾರಕ್ಕೆ ಗೌರವವನ್ನು ತೋರಿಸುವ ಅಗತ್ಯವನ್ನು ಒತ್ತಿ ಹೇಳಿರಿ.

8 ನಿ: ಸ್ಥಳಿಕ ಅಗತ್ಯಗಳು.

15 ನಿ:  “ಸ್ವಚ್ಛತೆಯು ದೇವರನ್ನು ಗೌರವಿಸುತ್ತದೆ.” ಹಿರಿಯನು ಸಭಿಕರೊಂದಿಗೆ ಲೇಖನವನ್ನು ಚರ್ಚಿಸುತ್ತಾನೆ. ಫೆಬ್ರವರಿ 1, 2002ರ ಕಾವಲಿನಬುರುಜು ಪತ್ರಿಕೆಯಲ್ಲಿ 6-7ನೆಯ ಪುಟಗಳಲ್ಲಿರುವ ಮಾಹಿತಿಯ ಸಂಕ್ಷಿಪ್ತ ಪುನರ್ವಿಮರ್ಶೆಯೊಂದಿಗೆ ಮುಕ್ತಾಯಗೊಳಿಸಿರಿ.

ಗೀತೆ 17 (187) ಮತ್ತು ಸಮಾಪ್ತಿಯ ಪ್ರಾರ್ಥನೆ.

ಮೇ 27ರಿಂದ ಆರಂಭವಾಗುವ ವಾರ

ಗೀತೆ 8 (53)

12 ನಿ:  ಸ್ಥಳಿಕ ಪ್ರಕಟನೆಗಳು. ಪ್ರಚಾರಕರು ಮೇ ತಿಂಗಳಿಗಾಗಿರುವ ತಮ್ಮ ಕ್ಷೇತ್ರ ಸೇವಾ ವರದಿಗಳನ್ನು ಕೊಡುವಂತೆ ಜ್ಞಾಪಕಹುಟ್ಟಿಸಿರಿ. ಪುಟ 8ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಒಬ್ಬ ಎಳೆಯ ಪ್ರಚಾರಕನು ಏಪ್ರಿಲ್‌-ಜೂನ್‌ ಎಚ್ಚರ! ಪತ್ರಿಕೆಯನ್ನು (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿರುವ ಮೂರನೆಯದ್ದು) ನೀಡುವುದು ಹೇಗೆಂಬುದನ್ನು ಪ್ರತ್ಯಕ್ಷಾಭಿನಯಿಸಲಿ ಮತ್ತು ಒಬ್ಬ ವೃದ್ಧ ಪ್ರಚಾರಕರು ಜೂನ್‌ 1ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬೇಕೆಂಬುದನ್ನು ತೋರಿಸಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದ ನಂತರ, ಎಷ್ಟು ಸುಲಭವಾಗಿ ಒಂದು ವಚನವನ್ನು ನಿರೂಪಣೆಯಲ್ಲಿ ಸೇರಿಸಲಾಯಿತು ಎಂಬುದರ ಬಗ್ಗೆ ಹೇಳಿಕೆ ನೀಡಿರಿ.

15 ನಿ:  “ನಿಮ್ಮ ಸಭೆಗೆ ಒಂದು ದೊಡ್ಡ ಟೆರಿಟೊರಿ ಇದೆಯೊ?” ಸೇವಾ ಮೇಲ್ವಿಚಾರಕನು ನಿರ್ವಹಿಸುವ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸಭೆಗೆ ಎಷ್ಟು ಟೆರಿಟೊರಿ ಇದೆಯೆಂಬುದನ್ನು ಮತ್ತು ಅದರಲ್ಲಿ ಎಷ್ಟನ್ನು ಗತ ವರ್ಷದಲ್ಲಿ ಆವರಿಸಲಾಗಿದೆಯೆಂಬುದನ್ನು ತಿಳಿಸಿರಿ. ನೀಡಲಾಗಿರುವ ಸಲಹೆಗಳನ್ನು ಹೇಗೆ ಸ್ಥಳಿಕವಾಗಿ ಅನ್ವಯಿಸಬಹುದೆಂಬುದನ್ನು ವಿವರಿಸಿರಿ. ತೀರ ಕಡಿಮೆ ಸಲ ಆವರಿಸಲ್ಪಟ್ಟಿರುವ ಟೆರಿಟೊರಿಯನ್ನು ಹತ್ತಿರದ ಭವಿಷ್ಯತ್ತಿನಲ್ಲಿ ಆವರಿಸಲಿಕ್ಕಾಗಿ ಮಾಡಲಾಗಿರುವ ಯೋಜನೆಗಳನ್ನು ಪುನರ್ವಿಮರ್ಶಿಸಿರಿ.

18 ನಿ:  “ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ನೀವು ಅಪೇಕ್ಷಿಸು ಬ್ರೋಷರನ್ನು ಉಪಯೋಗಿಸುತ್ತಿದ್ದೀರೊ?” (ಈ ಚರ್ಚೆಗಾಗಿ ಎಲ್ಲರ ಬಳಿ, ಜನವರಿ 2002ರ ನಮ್ಮ ರಾಜ್ಯದ ಸೇವೆಯ ಪುರವಣಿ ಇರತಕ್ಕದ್ದು.) ಚೆನ್ನಾಗಿ ತಯಾರಿ ಮಾಡಿರುವ ಒಬ್ಬ ಪ್ರಚಾರಕನು/ಳು, ಪ್ಯಾರಗ್ರಾಫ್‌ 3ರಲ್ಲಿರುವ ಉದಾಹರಣೆಯನ್ನು ಉಪಯೋಗಿಸುತ್ತಾ ಒಂದು ಅಧ್ಯಯನವನ್ನು ಆರಂಭಿಸುವುದು ಹೇಗೆಂಬುದನ್ನು ಪ್ರತ್ಯಕ್ಷಾಭಿನಯಿಸುವುದರೊಂದಿಗೆ ಆರಂಭಿಸಿರಿ. ತದನಂತರ, ಆ ಬ್ರೋಷರಿನ ಮುಖ್ಯಾಂಶಗಳನ್ನು ತಿಳಿಸಿರಿ, ಮತ್ತು ಅದು ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ಹೇಗೆ ಚೆನ್ನಾಗಿ ವಿನ್ಯಾಸಿಸಲ್ಪಟ್ಟಿದೆಯೆಂಬುದನ್ನು ವಿವರಿಸಿರಿ. ಜನವರಿ 2002ರ ಪುರವಣಿಯಲ್ಲಿ ಸೂಚಿಸಲ್ಪಟ್ಟಿರುವ ನಿರೂಪಣೆಗಳನ್ನು ಪುನರ್ವಿಮರ್ಶಿಸುವುದರ ಮೌಲ್ಯವನ್ನು ತೋರಿಸಿರಿ. ಯಾವ ನಿರೂಪಣೆಗಳು ಅವರಿಗೆ ಯಶಸ್ಸನ್ನು ತಂದಿವೆಯೆಂದು ಸಭಿಕರನ್ನು ಕೇಳಿರಿ. ಮೇಲೆ ಕೊಡಲ್ಪಟ್ಟಿರುವ ಪ್ರತ್ಯಕ್ಷಾಭಿನಯವನ್ನು ಪುನಃ ಮಾಡಿ ಸಮಾಪ್ತಿಗೊಳಿಸಿರಿ.

ಗೀತೆ 20 (93) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜೂನ್‌ 3ರಿಂದ ಆರಂಭವಾಗುವ ವಾರ

ಗೀತೆ 20 (93)

15 ನಿ:  ಸ್ಥಳಿಕ ಪ್ರಕಟನೆಗಳು. ಮಾರ್ಚ್‌, ಏಪ್ರಿಲ್‌, ಅಥವಾ ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಇಲ್ಲವೆ ರೆಗ್ಯುಲರ್‌ ಪಯನೀಯರ್‌ ಸೇವೆಯಲ್ಲಿ ಪಾಲ್ಗೊಂಡದ್ದರ ಫಲಿತಾಂಶವಾಗಿ ತಾವು ಅನುಭವಿಸಿರುವ ಆಶೀರ್ವಾದಗಳನ್ನು ಪ್ರಚಾರಕರು ತಿಳಿಸುವಂತೆ ಏರ್ಪಾಡು ಮಾಡಿರಿ.

15 ನಿ:  ತರ್ಕಿಸು# ಪುಸ್ತಕವು ಬೇರೆ ಬೈಬಲ್‌ ತರ್ಜುಮೆಗಳನ್ನು ಬಳಸುವ ವಿಧ. ಸಂಕ್ಷಿಪ್ತ ಭಾಷಣದ ನಂತರ ಸಭಿಕರೊಂದಿಗೆ ಚರ್ಚೆ. ತರ್ಕಿಸು ಪುಸ್ತಕದ ಪುಟ 8ರಲ್ಲಿರುವ ಪ್ಯಾರಗ್ರಾಫ್‌ 2ನ್ನು ಓದಿ, ನಮ್ಮ ಶುಶ್ರೂಷೆಯಲ್ಲಿ ಬೈಬಲನ್ನು ಏಕೆ ಮತ್ತು ಹೇಗೆ ಎತ್ತಿತೋರಿಸಬೇಕೆಂಬುದನ್ನು ವಿವರಿಸಿರಿ. ಪುಟ 6ರಲ್ಲಿರುವ ಬೈಬಲ್‌ ಸಂಕ್ಷಿಪ್ತನಾಮಗಳ ಪಟ್ಟಿಯನ್ನು ತೋರಿಸಿ, ನಾವು ಬೇರೆ ತರ್ಜುಮೆಗಳಿಂದ ಏಕೆ ಉಲ್ಲೇಖಿಸುತ್ತೇವೆಂಬುದನ್ನು ವಿವರಿಸಿರಿ. 1997, ಅಕ್ಟೋಬರ್‌ 1ರ ಕಾವಲಿನಬುರುಜು ಪತ್ರಿಕೆಯ ಪುಟ 16, ಪ್ಯಾರಗ್ರಾಫ್‌ 2 ಮತ್ತು ಪುಟ 20 ಪ್ಯಾರಗ್ರಾಫ್‌ 15ರಲ್ಲಿ ತಿಳಿಸಲ್ಪಟ್ಟಿರುವ ಎಚ್ಚರಿಕೆಗಳನ್ನು ಚರ್ಚಿಸಿರಿ. ತರ್ಕಿಸು ಪುಸ್ತಕದಲ್ಲಿರುವ “ಅಪೊಸ್ತಲಿಕ ಉತ್ತರಾಧಿಕಾರ” (Apostolic Succession), “ವಿಗ್ರಹಗಳು” (Images), ಮತ್ತು “ತ್ರಯೈಕ್ಯ” (Trinity) ಎಂಬ ವಿಷಯಗಳನ್ನು ಉಪಯೋಗಿಸುತ್ತಾ, ಬೇರೆ ಬೇರೆ ತರ್ಜುಮೆಗಳನ್ನು ಹೋಲಿಸಿ ನೋಡುವುದು, ಸತ್ಯವನ್ನು ಕಲಿಸುವುದರಲ್ಲಿ ಹೇಗೆ ಸಹಾಯಕಾರಿ ಆಗಿರಬಲ್ಲದೆಂಬುದನ್ನು ದೃಷ್ಟಾಂತಿಸುವಂತೆ ಸಭಿಕರನ್ನು ಆಮಂತ್ರಿಸಿರಿ.

15 ನಿ:  “ನಮ್ಮ ನಂಬಿಕೆಯು ನಮ್ಮನ್ನು ಸತ್ಕ್ರಿಯೆಗಳಿಗೆ ಪ್ರಚೋದಿಸುತ್ತದೆ.”b ಪ್ಯಾರಗ್ರಾಫ್‌ 2ನ್ನು ಚರ್ಚಿಸುವಾಗ, ಒಬ್ಬ ಹುರುಪಿನ ಸಾಕ್ಷಿಯನ್ನು ಚುಟುಕಾಗಿ ಇಂಟರ್‌ವ್ಯೂ ಮಾಡಿರಿ. ಬೇರೆಯವರಿಗೆ ಸಾಕ್ಷಿನೀಡುವುದು ಹೇಗೆ ತನ್ನ ನಂಬಿಕೆಯನ್ನು ಪ್ರದರ್ಶಿಸುತ್ತದೆ ಮತ್ತು ಬಲಪಡಿಸುತ್ತದೆಂಬುದನ್ನು ಅವನು ಅಥವಾ ಅವಳು ವ್ಯಕ್ತಪಡಿಸಲಿ.

ಗೀತೆ 4 (43) ಮತ್ತು ಸಮಾಪ್ತಿಯ ಪ್ರಾರ್ಥನೆ.

[ಅಧ್ಯಯನ ಪ್ರಶ್ನೆಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಕನ್ನಡದಲ್ಲಿ ಲಭ್ಯವಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ