ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ನೀವು ಅಪೇಕ್ಷಿಸು ಬ್ರೋಷರನ್ನು ಉಪಯೋಗಿಸುತ್ತಿದ್ದೀರೊ?
1 ಸಂಸ್ಥೆಯು ಶಿಫಾರಸ್ಸು ಮಾಡಿರುವ ಪ್ರಕಾಶನಗಳೊಂದರ ವಿಷಯವನ್ನು ಆವರಿಸುತ್ತಾ, ಒಬ್ಬ ಆಸಕ್ತ ವ್ಯಕ್ತಿಯೊಂದಿಗೆ ನೀವು ಸ್ವಲ್ಪ ಸಮಯಕ್ಕಾದರೂ ಸರಿ, ಆದರೆ ಕ್ರಮವಾಗಿ ಮತ್ತು ವ್ಯವಸ್ಥಿತವಾಗಿ ಬೈಬಲ್ ಚರ್ಚೆಗಳನ್ನು ಮಾಡುತ್ತಿರುವುದಾದರೆ, ನೀವು ಒಂದು ಬೈಬಲ್ ಅಧ್ಯಯನವನ್ನು ನಡೆಸುತ್ತಿದ್ದೀರೆಂಬುದು ನಿಮಗೆ ಗೊತ್ತಿದೆಯೊ? ಹೌದು, ನೀವು ಮನೆಬಾಗಲಲ್ಲಿ ನಿಂತುಕೊಂಡು ಇದನ್ನು ಮಾಡುತ್ತಿರಲಿ ಇಲ್ಲವೆ ಟೆಲಿಫೋನಿನ ಮುಖಾಂತರ ಇದನ್ನು ಮಾಡುತ್ತಿರಲಿ, ಇದೊಂದು ಬೈಬಲ್ ಅಧ್ಯಯನವಾಗಿದೆ. ಮೇ ಮತ್ತು ಜೂನ್ ತಿಂಗಳಲ್ಲಿ, ಅಪೇಕ್ಷಿಸು ಬ್ರೋಷರನ್ನು ಉಪಯೋಗಿಸುತ್ತಾ ನೀವು ಒಂದು ಅಧ್ಯಯನವನ್ನು ಆರಂಭಿಸಲಿಕ್ಕಾಗಿ ವಿಶೇಷ ಪ್ರಯತ್ನವನ್ನು ಏಕೆ ಮಾಡಬಾರದು?
2 ಯಶಸ್ಸನ್ನು ಪಡೆಯಲಿಕ್ಕಾಗಿ ತಯಾರಿಸಿರಿ: ಅಪೇಕ್ಷಿಸು ಬ್ರೋಷರನ್ನು ನೀಡುತ್ತಿರುವಾಗ, ನೀವೇನು ಚರ್ಚಿಸಲು ಬಯಸುತ್ತೀರೆಂಬುದನ್ನು ಮೊದಲು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟಪಡಿಸಿಕೊಳ್ಳಿರಿ. ನೀವೊಂದು ಪುನರ್ಭೇಟಿಯನ್ನು ಮಾಡುತ್ತಿರುವಲ್ಲಿ, ಮೊದಲನೆಯ ಭೇಟಿಯಲ್ಲಿ ನಡೆದಂಥ ಸಂಭಾಷಣೆಯ ಬಗ್ಗೆ ಯೋಚಿಸಿರಿ. ನಿಮ್ಮನ್ನೇ ಹೀಗೆ ಪ್ರಶ್ನಿಸಿಕೊಳ್ಳಿ: ‘ಆ ಚರ್ಚೆಯನ್ನೇ ಮುಂದುವರಿಸಿಕೊಂಡು, ಒಂದು ಬೈಬಲ್ ಅಧ್ಯಯನಕ್ಕೆ ನಡೆಸಲಿಕ್ಕಾಗಿ ಬ್ರೋಷರಿನಲ್ಲಿರುವ ಯಾವ ಪ್ಯಾರಗ್ರಾಫ್ಗಳಿಗೆ ನಾನು ವಿಶೇಷ ಗಮನವನ್ನು ಕೊಡಬಲ್ಲೆ?’ ನೀವು ಮನೆಯಿಂದ ಮನೆಗೆ ಹೋಗುತ್ತಿರುವಲ್ಲಿ, ಒಬ್ಬ ಹದಿವಯಸ್ಕನಿಗೆ, ಒಬ್ಬ ವೃದ್ಧ ವ್ಯಕ್ತಿಗೆ, ಒಬ್ಬ ಪುರುಷನಿಗೆ, ಇಲ್ಲವೆ ಒಬ್ಬ ಸ್ತ್ರೀಗೆ ಯಾವ ವಿಷಯಗಳು ಆಕರ್ಷಣೀಯವಾಗಿರುವವು ಎಂಬುದನ್ನು ಪರಿಗಣಿಸಿರಿ. ಬ್ರೋಷರಿನ ವಿಷಯಗಳನ್ನು ಪುನರ್ವಿಮರ್ಶಿಸಿರಿ ಮತ್ತು ಆಸಕ್ತಿಕರವಾದ ಒಂದು ವಿಷಯವನ್ನು ಗುರುತಿಸಿರಿ. ಅದನ್ನು ಹೇಗೆ ಪ್ರಸ್ತಾಪಿಸುವಿರಿ ಎಂಬುದನ್ನು ನಿರ್ಣಯಿಸಿದ ಬಳಿಕ, ಹಲವಾರು ಬಾರಿ ಪ್ರ್ಯಾಕ್ಟಿಸ್ ಮಾಡಿರಿ. ಇದು ಯಶಸ್ಸನ್ನು ನೀಡುವ ಕೀಲಿ ಕೈಗಳಲ್ಲಿ ಒಂದಾಗಿದೆ.
3 ಜನವರಿ 2002ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ, “ಅಪೇಕ್ಷಿಸು ಬ್ರೋಷರನ್ನು ನೀಡಲಿಕ್ಕಾಗಿ ಸಲಹೆಗಳು” ಎಂಬ ಲೇಖನವು ಎಂಟು ಸಲಹೆಗಳನ್ನು ಕೊಡುತ್ತದೆ. “ನೇರವಾದ ಪ್ರಸ್ತಾವ” ಎಂಬ ರೇಖಾಚೌಕವು, ನಾವು ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ಬ್ರೋಷರನ್ನು ಹೇಗೆ ಉಪಯೋಗಿಸಬಹುದೆಂಬುದನ್ನು ತೋರಿಸುತ್ತದೆ. ನೀವು ಮೊದಲನೆಯ ಸಲಹೆಯನ್ನು ಹೀಗೆ ಅಳವಡಿಸಿಕೊಳ್ಳಬಹುದು:
◼ “ಕೇವಲ ಕೆಲವೇ ನಿಮಿಷಗಳಲ್ಲಿ, ಪ್ರಾಮುಖ್ಯವಾದ ಒಂದು ಬೈಬಲ್ ಪ್ರಶ್ನೆಗೆ ನೀವು ಉತ್ತರವನ್ನು ಪಡೆಯಬಲ್ಲಿರೆಂಬುದು ನಿಮಗೆ ತಿಳಿದಿತ್ತೋ? ಉದಾಹರಣೆಗಾಗಿ, ಕ್ರೈಸ್ತರೆಂದು ಹೇಳಿಕೊಳ್ಳುವ ಇಷ್ಟೊಂದು ಧರ್ಮಗಳು ಏಕಿವೆ? ನೀವು ಇದರ ಬಗ್ಗೆ ಎಂದಾದರೂ ಆಲೋಚಿಸಿದ್ದೀರೊ?” ಆ ವ್ಯಕ್ತಿಯು ಪ್ರತಿಕ್ರಿಯಿಸಿದ ನಂತರ, ಪಾಠ 13ಕ್ಕೆ ತಿರುಗಿಸಿ, ಮೊದಲನೆಯ ಎರಡು ಪ್ಯಾರಗ್ರಾಫ್ಗಳನ್ನು ಚರ್ಚಿಸಿರಿ. ಸಮಯವು ಅನುಮತಿಸಿದಂತೆ ಒಂದೆರಡು ವಚನಗಳನ್ನು ಓದಿ ಚರ್ಚಿಸಿರಿ. ಆಮೇಲೆ, ಪುಟದ ಮೇಲಿನ ಭಾಗದಲ್ಲಿರುವ ಕೊನೆಯ ಪ್ರಶ್ನೆಯನ್ನು ಓದಿ ಹೀಗೆ ಹೇಳಿರಿ: “ಈ ಪಾಠದಲ್ಲಿರುವ ಉಳಿದ ಭಾಗವು, ಸತ್ಯ ಧರ್ಮದ ಐದು ಗುರುತುಗಳನ್ನು ಎತ್ತಿತೋರಿಸುತ್ತದೆ. ನಾನು ಪುನಃ ಒಮ್ಮೆ ಬಂದು, ಅವುಗಳನ್ನು ನಿಮ್ಮೊಂದಿಗೆ ಚರ್ಚಿಸಲು ಇಷ್ಟಪಡುತ್ತೇನೆ.”
4 ಪಟ್ಟುಹಿಡಿಯಿರಿ: ಅಪೇಕ್ಷಿಸು ಬ್ರೋಷರಿನಲ್ಲಿ ಬೈಬಲ್ ಅಧ್ಯಯನವನ್ನು ಹೇಗೆ ನಡೆಸಲಾಗುತ್ತದೆಂದು ಪ್ರದರ್ಶಿಸಲು ಸಿಗುವ ಪ್ರತಿಯೊಂದು ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಿರಿ. ಯೆಹೋವನ ಆಶೀರ್ವಾದಕ್ಕಾಗಿ ಬೇಡಿಕೊಳ್ಳಿರಿ. (ಮತ್ತಾ. 21:22) ನಿಮ್ಮ ಪ್ರಯತ್ನಗಳಲ್ಲಿ ಪಟ್ಟುಹಿಡಿಯುವ ಮೂಲಕ, ಯಾರಾದರೊಬ್ಬರು ಸುವಾರ್ತೆಗೆ ಪ್ರತಿಕ್ರಿಯೆ ತೋರಿಸುವಂತೆ ಸಹಾಯಮಾಡುವ ಆನಂದವನ್ನು ನೀವು ಆನುಭವಿಸಬಹುದು!