ನಮ್ಮ ಸಹೋದರರ ಇಡೀ ಬಳಗವನ್ನು ನಾವು ಪ್ರೀತಿಸಲು ಕಾರಣ
ಇಂದಿನ ಪ್ರೀತಿರಹಿತ ಲೋಕದಲ್ಲಿ, ನಮ್ಮ ಆತ್ಮಿಕ ಸಹೋದರರ ಕಡೆಗೆ ಆಳವಾದ ಪ್ರೀತಿಯನ್ನು ನಾವು ಹೇಗೆ ತೋರಿಸುತ್ತಾ ಮುಂದುವರಿಯಸಾಧ್ಯವಿದೆ? (1 ಪೇತ್ರ 2:17) ನಮ್ಮ ನೈಜವಾದ, ಭೌಗೋಲಿಕ ಸಹೋದರತ್ವವು ನಿಜವಾಗಿಯೂ ಅಸ್ತಿತ್ವದಲ್ಲಿದೆ ಎಂಬುದನ್ನು ಇತರರಿಗೆ ನಾವು ಹೇಗೆ ತೋರಿಸಸಾಧ್ಯವಿದೆ? (ಮತ್ತಾ. 23:8) ನಮ್ಮ ಸಹೋದರರ ಇಡೀ ಬಳಗ ಎಂಬ ವಿಡಿಯೋದ ಮೂಲಕವೇ. ನಾವು ಒಬ್ಬರನ್ನೊಬ್ಬರು ಪ್ರೀತಿಸಲು ಕಾರಣವೇನೆಂಬುದನ್ನು ಅದು ತಿಳಿಸುತ್ತದೆ. ನೀವು ಈ ಪ್ರಶ್ನೆಗಳನ್ನು ಉತ್ತರಿಸಸಾಧ್ಯವಿದೆಯೆ ಎಂದು ನೋಡಿರಿ:
(1) ನಮ್ಮ ಲೋಕವ್ಯಾಪಕ ಸಹೋದರತ್ವದೊಂದಿಗೆ ಯಾವ ಮೂರು ಚಟುವಟಿಕೆಗಳಲ್ಲಿ ನಾವು ಸಮಾನವಾಗಿ ಭಾಗಿಗಳಾಗಿದ್ದೇವೆ? (2) ನಮ್ಮ ಸಹೋದರರು, (ಎ) ಅಲಾಸ್ಕದ ನಿರ್ಜನ ಪ್ರದೇಶದಲ್ಲಿ, (ಬಿ) ಯೂರೋಪಿನ ದೊಡ್ಡ ದೊಡ್ಡ ಬಂದರುಗಳಲ್ಲಿ, ಮತ್ತು (ಸಿ) ಪೆರೂವಿನ ದಟ್ಟ ಕಾಡುಗಳಲ್ಲಿ ಸಾರಲು ತಮಗಿರುವ ದೃಢಸಂಕಲ್ಪವನ್ನು ಹೇಗೆ ತೋರಿಸುತ್ತಿದ್ದಾರೆ? (3) ಸಾಕ್ಷಿಕಾರ್ಯದಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿರುವ ಒಂದು ಸಾಧನವು ಯಾವುದು? (4) ಸಾರುವ ಕೆಲಸವು ಒಂದು ಸಾಧಾರಣವಾದ ಕೆಲಸವೆಂದು ನಾವು ಎಂದಿಗೂ ಭಾವಿಸಬಾರದು ಏಕೆ? (5) ಭೂಕಂಪಗಳು, ಚಂಡಮಾರುತಗಳು, ಮತ್ತು ಆಂತರಿಕ ಯುದ್ಧಗಳಂಥ ಆಪತ್ತಿನ ಸಮಯದಲ್ಲಿ ಯೆಹೋವನ ಸಾಕ್ಷಿಗಳು ಪರಸ್ಪರರನ್ನು ಹೇಗೆ ಸಾಂತ್ವನಗೊಳಿಸಿದರು ಮತ್ತು ಬೆಂಬಲಿಸಿದರು ಎಂಬುದಕ್ಕೆ ಉದಾಹರಣೆಗಳನ್ನು ಕೊಡಿರಿ. (ಸೆಪ್ಟೆಂಬರ್ 8, 1995ರ ಎಚ್ಚರ! ಪತ್ರಿಕೆಯ ಪುಟ 13ರಲ್ಲಿ ಟಾಕಾವೊವಿನ, ಹಾಗೂ ನವೆಂಬರ್ 8, 1996ರ ಎಚ್ಚರ! ಪತ್ರಿಕೆಯ ಪುಟ 14ರಲ್ಲಿ ಕೊಟೊಯೊವಿನ ಹೇಳಿಕೆಗಳನ್ನು ನೋಡಿರಿ.) (6) ನಮ್ಮ ಕ್ರೈಸ್ತ ಸಹೋದರತ್ವದ ಮಹಾ ಗುರುತು ಚಿಹ್ನೆಯನ್ನು ನಾವೆಲ್ಲರೂ ಯಾವ ಪ್ರಾಯೋಗಿಕ ರೀತಿಗಳಲ್ಲಿ ಪ್ರದರ್ಶಿಸಸಾಧ್ಯವಿದೆ? (ಯೋಹಾ. 13:35) (7) ನಮ್ಮ ಸಭಾ ಕೂಟಗಳನ್ನು ನಾವು ಎಷ್ಟರ ಮಟ್ಟಿಗೆ ಮೌಲ್ಯವಾದದ್ದಾಗಿ ಪರಿಗಣಿಸಬೇಕು? (8) ಈ ಮುಂಚೆ ತಮ್ಮದೇ ಆದ ರಾಜ್ಯ ಸಭಾಗೃಹವಿಲ್ಲದಿದ್ದವರು, ಈಗ ಸಭೆಯಾಗಿ ಸೇರಲು ಒಂದು ರಾಜ್ಯ ಸಭಾಗೃಹವನ್ನು ಹೊಂದಿರುವುದು ಅವರನ್ನು ಯಾವ ರೀತಿಯಲ್ಲಿ ಪ್ರಭಾವಿಸಿದೆ? (9) ನಿಷೇಧದ ಕೆಳಗಿರುವಾಗ ಪೂರ್ವ ಯೂರೋಪ್ ಮತ್ತು ರಷ್ಯದಲ್ಲಿದ್ದ ನಮ್ಮ ಸಹೋದರರು ಆತ್ಮಿಕವಾಗಿ ಹೇಗೆ ಬದುಕಿ ಉಳಿದರು? (10) ಈಗಲೂ, ಸಮ್ಮೇಳನಗಳಿಗೆ ಹಾಜರಾಗಲು ಅನೇಕ ಸಾಕ್ಷಿಗಳು ಯಾವ ಅಸಾಧಾರಣವಾದ ಪ್ರಯತ್ನವನ್ನು ಮಾಡುತ್ತಿದ್ದಾರೆ, ಮತ್ತು ಏಕೆ? ಇದು ನಿಮ್ಮ ಹೃದಯವನ್ನು ಯಾವ ರೀತಿಯಲ್ಲಿ ಸ್ಪರ್ಶಿಸಿದೆ? (11) ಐಕ್ಯಭಾವದಿಂದ ಒಟ್ಟಿಗೆ ಆರಾಧಿಸಲು, ಅಗತ್ಯದ ಸಮಯಗಳಲ್ಲಿ ಇತರರಿಗೆ ಸಹಾಯಮಾಡಲು, ಮತ್ತು ನಿಮ್ಮಿಂದ ಸಾಧ್ಯವಾದಾಗಲೆಲ್ಲಾ ಹಾಗೂ ಹೇಗಾದರೂ ನಂಬಿಗಸ್ತಿಕೆಯಿಂದ ಸಾರುತ್ತಿರಲು ನೀವು ಏಕೆ ದೃಢನಿಶ್ಚಿತರಾಗಿದ್ದೀರಿ? (12) ಸಾಧ್ಯವಿರುವಷ್ಟು ಹೆಚ್ಚು ಆಸಕ್ತ ಜನರಿಗೆ ಈ ವಿಡಿಯೋವನ್ನು ತೋರಿಸುವುದು ಏಕೆ ಒಳ್ಳೇದು?