ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/02 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2002 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜುಲೈ 8ರಿಂದ ಆರಂಭವಾಗುವ ವಾರ
  • ಜುಲೈ 15ರಿಂದ ಆರಂಭವಾಗುವ ವಾರ
  • ಜುಲೈ 22ರಿಂದ ಆರಂಭವಾಗುವ ವಾರ
  • ಜುಲೈ 29ರಿಂದ ಆರಂಭವಾಗುವ ವಾರ
  • ಆಗಸ್ಟ್‌ 5ರಿಂದ ಆರಂಭವಾಗುವ ವಾರ
2002 ನಮ್ಮ ರಾಜ್ಯದ ಸೇವೆ
km 7/02 ಪು. 2

ಸೇವಾ ಕೂಟದ ಶೆಡ್ಯೂಲ್‌

ಜುಲೈ 8ರಿಂದ ಆರಂಭವಾಗುವ ವಾರ

ಗೀತೆ 8 (53)

15 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 4ನೇ ಪುಟದಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೊದಲನೆಯದ್ದು.) ಮತ್ತು ಜುಲೈ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡುವುದು ಎಂಬುದರ ಕುರಿತಾದ ಎರಡು ಪ್ರತ್ಯೇಕ ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ, “ನಾವಿಲ್ಲಿ ಈವಾಗಲೇ ಕ್ರೈಸ್ತರು” ಎಂಬ ಸಂಭಾಷಣಾ ತಡೆಗಟ್ಟನ್ನು ನಿಭಾಯಿಸುವ ಭಿನ್ನವಾದ ವಿಧಾನವನ್ನು ತೋರಿಸಿರಿ.​—⁠ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯ 11ನೆಯ ಪುಟವನ್ನು ನೋಡಿರಿ.

15 ನಿ:  “ಮಳೆಗಾಲದಲ್ಲಿ ‘ದೇವರ ವಾಕ್ಯವನ್ನು ಸಾರು.’”a ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡತಕ್ಕದ್ದು. ಮಳೆಗಾಲದ ಸಾಕ್ಷಿ ನೀಡುವಿಕೆಗಾಗಿ ಯಾವ ಟೆರಿಟೊರಿಗಳನ್ನು ಏರ್ಪಡಿಸಲಾಗಿದೆ ಎಂಬುದನ್ನು ವಿವರಿಸಿ. ಮಳೆಗಾಲದ ತಿಂಗಳುಗಳಲ್ಲಿ ತಮ್ಮಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ಶುಶ್ರೂಷೆಯಲ್ಲಿ ಭಾಗವಹಿಸುವಂತಾಗಲು ಎಲ್ಲರೂ ಒಂದು ಪ್ರಾಯೋಗಿಕ ಶೆಡ್ಯೂಲನ್ನು ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಿರಿ.

15 ನಿ:  ಅವಿಧಿಯಾಗಿ [ಅನೌಪಚಾರಿಕವಾಗಿ] ಸಾಕ್ಷಿಕೊಡಲಿಕ್ಕಾಗಿ ನಮ್ಮನ್ನೇ ಸಂಘಟಿಸಿಕೊಳ್ಳುವುದು. ನಮ್ಮ ಶುಶ್ರೂಷೆ ಪುಸ್ತಕದ 93-4ನೇ ಪುಟಗಳ ಕುರಿತು ಸಭಿಕರೊಂದಿಗೆ ಚರ್ಚೆ. ಜನವರಿ 2002ರ ನಮ್ಮ ರಾಜ್ಯದ ಸೇವೆಯ ಪುರವಣಿಯ ಮುಖಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಒಬ್ಬ ಅಪರಿಚಿತನಿಗೆ, ಒಬ್ಬ ನೆರೆಯವನಿಗೆ, ಒಬ್ಬ ಸಂಬಂಧಿಕನಿಗೆ, ಅಥವಾ ಒಬ್ಬ ಪರಿಚಯಸ್ಥನಿಗೆ ಅನೌಪಚಾರಿಕವಾಗಿ ಸಾಕ್ಷಿಕೊಡುವುದರ ಎರಡು ಅಥವಾ ಮೂರು ವಿಧಾನಗಳನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ.

ಗೀತೆ 16 (143) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 15ರಿಂದ ಆರಂಭವಾಗುವ ವಾರ

ಗೀತೆ 4 (43)

10 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ.

15 ನಿ:  ಸ್ಥಳಿಕ ಅಗತ್ಯಗಳು.

20 ನಿ:  ನಮ್ಮ ಶುಶ್ರೂಷೆಯಲ್ಲಿ ಬೈಬಲನ್ನು ಉಪಯೋಗಿಸಲಿಕ್ಕಾಗಿ ಸಕಾರಣಗಳು. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಯೇಸುವಿಗೆ ಶಾಸ್ತ್ರವಚನಗಳ ಪರಿಚಯವಿತ್ತು ಮತ್ತು ಅವನು ತನ್ನ ಬೋಧಿಸುವಿಕೆಯಲ್ಲಿ ಅವುಗಳನ್ನು ಆಗಿಂದಾಗ್ಗೆ ಉಲ್ಲೇಖಿಸಿದನು. (ಲೂಕ 24:27, 44-47) ಅವನು ಏನನ್ನು ಬೋಧಿಸಿದನೋ ಅದು ಅವನ ಸ್ವಂತ ಮೂಲದಿಂದ ಬಂದದ್ದಾಗಿರಲಿಲ್ಲ. (ಯೋಹಾ. 7:16-18) ನಾವು ಕೂಡ ದೇವರ ವಾಕ್ಯವನ್ನು ಉಪಯೋಗಿಸುವುದು ಪ್ರಾಮುಖ್ಯವಾಗಿದೆ. ನಾವು ವೈಯಕ್ತಿಕವಾಗಿ ಹೇಳುವ ಯಾವುದೇ ವಿಷಯಕ್ಕಿಂತ ಅದಕ್ಕೆ ಹೆಚ್ಚಿನ ಶಕ್ತಿಯಿದೆ. (ಯೋಹಾ. 12:49, 50; ಇಬ್ರಿ. 4:12) ಯಥಾರ್ಥಮನಸ್ಕರು ಶಾಸ್ತ್ರವಚನಗಳು ಒದಗಿಸುವ ಸಾಂತ್ವನ ಮತ್ತು ನಿರೀಕ್ಷೆಯಿಂದ ಆಕರ್ಷಿತರಾಗುತ್ತಾರೆ. ನಿಮ್ಮ ನಿರೂಪಣೆಗಳಲ್ಲಿ ಕಡಿಮೆಪಕ್ಷ ಒಂದು ಬೈಬಲ್‌ ವಚನವನ್ನಾದರೂ ಓದುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ. ಈ ತಿಂಗಳಿನ ಸೂಚಿತ ಪತ್ರಿಕಾ ನಿರೂಪಣೆಗಳಲ್ಲಿ ಶಾಸ್ತ್ರವಚನಗಳು ಸೇರಿಸಲ್ಪಟ್ಟಿವೆ ಎಂಬುದನ್ನು ಸೂಚಿಸಿ ಹೇಳಿರಿ. ಸಭಿಕರು ಶುಶ್ರೂಷೆಯಲ್ಲಿ ಬೈಬಲನ್ನು ಹೇಗೆ ಉಪಯೋಗಿಸುತ್ತಿದ್ದಾರೆ ಮತ್ತು ಇದು ಸ್ವತಃ ಅವರ ಮೇಲೆ ಮತ್ತು ಅವರು ಯಾರಿಗೆ ಸಾರಿದರೋ ಅಂಥವರ ಮೇಲೆ ಯಾವ ಪರಿಣಾಮವನ್ನು ಬೀರಿದೆ ಎಂಬ ವಿಷಯದಲ್ಲಿ ಹೇಳಿಕೆಗಳನ್ನು ಮಾಡುವಂತೆ ಕೇಳಿಕೊಳ್ಳಿ.

ಗೀತೆ 22 (130) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 22ರಿಂದ ಆರಂಭವಾಗುವ ವಾರ

ಗೀತೆ 11 (85)

10 ನಿ:  ಸ್ಥಳಿಕ ಪ್ರಕಟನೆಗಳು. ಸೇವೆಯಲ್ಲಿ ಜೊತೆಯಾಗಿ ಕೆಲಸಮಾಡುತ್ತಿರುವ ಒಬ್ಬ ಹೆತ್ತವರು ಮತ್ತು ಮಗು, ಜುಲೈ-ಸೆಪ್ಟೆಂಬರ್‌ (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೂರನೆಯದ್ದು.) ಮತ್ತು ಆಗಸ್ಟ್‌ 1ರ ಪತ್ರಿಕೆಗಳನ್ನು ನೀಡಲಿಕ್ಕಾಗಿ 4ನೇ ಪುಟದಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸುತ್ತಾರೆ. ಒಂದು ಪ್ರತ್ಯಕ್ಷಾಭಿನಯವು ಎಚ್ಚರ! ಪತ್ರಿಕೆಯನ್ನು ನೀಡುವುದರ ಕುರಿತಾಗಿರುವುದು ಮತ್ತು ಇನ್ನೊಂದು ಕಾವಲಿನಬುರುಜು ಪತ್ರಿಕೆಯನ್ನು ನೀಡುವುದರ ಕುರಿತಾಗಿರುವುದು. ತಮ್ಮ ಮಕ್ಕಳನ್ನು ಶುಶ್ರೂಷೆಯಲ್ಲಿ ಪ್ರಗತಿಪರವಾಗಿ ತರಬೇತುಗೊಳಿಸುವಂತೆ ಹೆತ್ತವರನ್ನು ಪ್ರೋತ್ಸಾಹಿಸಿರಿ.

17 ನಿ:  ಇಸ್ಲಾಮ್‌ ಮತದ ಬಗ್ಗೆ ಕೇಳುವ ಒಬ್ಬನಿಗೆ ನೀವೇನು ಹೇಳುವಿರಿ? ಭಾಷಣ ಮತ್ತು ಪ್ರತ್ಯಕ್ಷಾಭಿನಯ. ದೇವರಿಗಾಗಿ ಮಾನವಕುಲದ ಅನ್ವೇಷಣೆ,# ಅಧ್ಯಾಯ 12, (ಪುಟ 285ರಲ್ಲಿರುವ ರೇಖಾಚೌಕವನ್ನು ನೋಡಿರಿ) ಅಥವಾ ದೇವರ ಮಾರ್ಗದರ್ಶನ​—⁠ಪರದೈಸಕ್ಕೆ ನಡೆಸುವ ಮಾರ್ಗ ಎಂಬ ಬ್ರೋಷರಿನ ಪುಟ 30, ಪ್ಯಾರಗ್ರಾಫ್‌ 7ನ್ನು ಉಪಯೋಗಿಸುತ್ತಾ, ಪವಿತ್ರ ಶಾಸ್ತ್ರಗಳ ಕುರಿತು ಕುರಾನ್‌ ಏನು ಹೇಳುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ. ಮಾತ್ರವಲ್ಲದೆ, ಪರದೈಸಿಗೆ ಹೋಗುವ ಹಾದಿಯನ್ನು ಕಂಡುಕೊಳ್ಳುವ ವಿಧ ಎಂಬ ಟ್ರ್ಯಾಕ್ಟನ್ನು ಉಪಯೋಗಿಸುತ್ತಾ, ಪರದೈಸಿನ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ಒಬ್ಬ ಹೊಸ ಆಸಕ್ತ ವ್ಯಕ್ತಿಗೆ ಹೇಗೆ ವಿವರಿಸುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

18 ನಿ:  ಇಂಟರ್‌ನೆಟ್‌ನ ಅಪಾಯಗಳಿಂದ ನಾನು ಹೇಗೆ ದೂರವಿರಬಲ್ಲೆ? ಫೆಬ್ರವರಿ 8, 2000ದ ಎಚ್ಚರ! ಪತ್ರಿಕೆಯ 19-21ನೆಯ ಪುಟಗಳ ಮೇಲಾಧಾರಿತ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಇಂಟರ್‌ನೆಟ್‌ನ ಅನಿರ್ಬಂಧಿತ ಉಪಯೋಗದಲ್ಲಿರುವ ಅಪಾಯಗಳನ್ನು ಸೂಚಿಸಿರಿ ಮತ್ತು ಇದರಲ್ಲಿ ಸಿಕ್ಕಿಕೊಳ್ಳುವುದರಿಂದ ಹೇಗೆ ದೂರವಿರಬಹುದು ಎಂಬುದನ್ನು ವಿವರಿಸಿರಿ. ಈ ಸಲಹೆಯನ್ನು ಅನ್ವಯಿಸಿಕೊಳ್ಳುವುದರಿಂದ ಹೇಗೆ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ಹೇಳಿಕೆ ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.

ಗೀತೆ 16 (143) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 29ರಿಂದ ಆರಂಭವಾಗುವ ವಾರ

ಗೀತೆ 1 (13)

10 ನಿ:  ಸ್ಥಳಿಕ ಪ್ರಕಟನೆಗಳು. ಜುಲೈ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ.

10 ನಿ:  ಪ್ರಶ್ನಾ ರೇಖಾಚೌಕ. ವಿಷಯಭಾಗವನ್ನು ಸ್ಥಳಿಕವಾಗಿ ಅನ್ವಯಿಸುತ್ತಾ, ಒಬ್ಬ ಹಿರಿಯನಿಂದ ಭಾಷಣ.

25 ನಿ:  “ಐಕ್ಯಭಾವದಿಂದ ಜೋಡಿಸಲ್ಪಟ್ಟವರಾಗಿರ್ರಿ.”b ಪ್ಯಾರಗ್ರಾಫ್‌ 3ನ್ನು ಚರ್ಚಿಸುವಾಗ, ಏಪ್ರಿಲ್‌ 22, 2000ದ ಎಚ್ಚರ!# ಪತ್ರಿಕೆಯ 9-10ನೆಯ ಪುಟಗಳ ಕುರಿತು ಹೇಳಿಕೆಗಳನ್ನು ಸೇರಿಸಿಕೊಳ್ಳಿ. ಪ್ಯಾರಗ್ರಾಫ್‌ 4ರೊಂದಿಗೆ, ಏಪ್ರಿಲ್‌ 1, 1995ರ ಕಾವಲಿನಬುರುಜುವಿನ 16-17ನೆಯ ಪುಟಗಳಲ್ಲಿರುವ 4-6ನೆಯ ಪ್ಯಾರಗ್ರಾಫ್‌ಗಳ ಕುರಿತು ಹೇಳಿಕೆಗಳನ್ನು ಸೇರಿಸಿಕೊಳ್ಳಿ.

ಗೀತೆ 26 (212) ಮತ್ತು ಸಮಾಪ್ತಿಯ ಪ್ರಾರ್ಥನೆ.

ಆಗಸ್ಟ್‌ 5ರಿಂದ ಆರಂಭವಾಗುವ ವಾರ

ಗೀತೆ 3 (32)

10 ನಿ:  ಸ್ಥಳಿಕ ಪ್ರಕಟನೆಗಳು.

20 ನಿ:  “ವಿವಿಧಭಾಷೆಗಳ ಜನರನ್ನು ಒಟ್ಟುಗೂಡಿಸುವುದು.”c ಏಪ್ರಿಲ್‌ 1, 2002ರ ಕಾವಲಿನಬುರುಜು ಪತ್ರಿಕೆಯ 24ನೆಯ ಪುಟದ ಕುರಿತು ಹೇಳಿಕೆಗಳನ್ನು ಸೇರಿಸಿಕೊಳ್ಳಿ. ಸೂಕ್ತವಾಗಿರುವಲ್ಲಿ, ಸ್ಥಳಿಕ ಟೆರಿಟೊರಿಯಲ್ಲಿ ಬೇರೆ ಭಾಷೆಗಳನ್ನಾಡುವ ಜನರಿಗೆ ಸಹಾಯವನ್ನು ನೀಡಲಿಕ್ಕಾಗಿ ಏನು ಮಾಡಲಾಗಿದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ, ಮತ್ತು ಬೇರೊಂದು ಭಾಷೆಯಲ್ಲಿ ಒಂದು ಸರಳವಾದ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ:  ಸ್ಥಳಿಕ ಅನುಭವಗಳು. ಬೇಸಗೆ ತಿಂಗಳುಗಳಲ್ಲಿ ಸಮ್ಮೇಳನಗಳಿಗೆ ಹಾಜರಾಗುವಾಗ, ಆಕ್ಸಿಲಿಯರಿ ಪಯನೀಯರ್‌ ಸೇವೆಮಾಡುವಾಗ, ಅಥವಾ ಇತರ ಆತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಾಗ ಪಡೆದುಕೊಂಡ ಕೆಲವು ಉತ್ತೇಜನದಾಯಕ ಅನುಭವಗಳನ್ನು ಹೇಳುವಂತೆ ಸಭಿಕರನ್ನು ಕೇಳಿಕೊಳ್ಳಿ.

ಗೀತೆ 28 (224) ಮತ್ತು ಸಮಾಪ್ತಿಯ ಪ್ರಾರ್ಥನೆ.

[ಅಧ್ಯಯನ ಪ್ರಶ್ನೆಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಕನ್ನಡದಲ್ಲಿ ಲಭ್ಯವಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ