ನಿಮ್ಮ ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರಿಗೆ ನೆರವು ನೀಡಿರಿ
1 ನಮ್ಮಲ್ಲಿ ಪ್ರತಿಯೊಬ್ಬರೂ ಸಭಾ ಪುಸ್ತಕ ಅಧ್ಯಯನದಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇವೆ. ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರು ಯಾವ ರೀತಿಯಲ್ಲಿ ತಮ್ಮ ಪಾತ್ರವನ್ನು ನಿಭಾಯಿಸುತ್ತಾರೆ ಎಂಬುದರ ಕುರಿತು ನಾವು ಕಳೆದ ತಿಂಗಳು ಚರ್ಚಿಸಿದೆವು. ಆದರೆ ಅವರಿಗೆ ನೆರವಾಗಲಿಕ್ಕಾಗಿ ನಾವೇನು ಮಾಡಸಾಧ್ಯವಿದೆ ಮತ್ತು ಹೀಗೆ ಸ್ವತಃ ನಮಗೂ ಇತರರಿಗೂ ಪ್ರಯೋಜನಗಳನ್ನು ತರಸಾಧ್ಯವಿದೆ?
2 ಪ್ರತಿ ವಾರ ಹಾಜರಾಗಿ: ಪುಸ್ತಕ ಅಧ್ಯಯನ ಗುಂಪುಗಳನ್ನು ತುಂಬ ಚಿಕ್ಕದಾಗಿ ಇಟ್ಟಿರುವುದರಿಂದ, ನಿಮ್ಮ ಉಪಸ್ಥಿತಿಯು ಅತಿ ಪ್ರಾಮುಖ್ಯವಾದದ್ದಾಗಿದೆ. ಪ್ರತಿ ವಾರ ಹಾಜರಾಗುವುದನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಿರಿ. ನೀವು ಸಮಯಕ್ಕೆ ಸರಿಯಾಗಿ ಬರುವವರಾಗಿರುವುದರಿಂದಲೂ ನೆರವನ್ನು ನೀಡಸಾಧ್ಯವಿದೆ. ಏಕೆಂದರೆ ಇದು ಮೇಲ್ವಿಚಾರಕನು ಸುವ್ಯವಸ್ಥಿತ ರೀತಿಯಲ್ಲಿ ಕೂಟವನ್ನು ಆರಂಭಿಸಲು ಸಮಯಾವಕಾಶವನ್ನು ನೀಡುತ್ತದೆ.—1 ಕೊರಿಂ. 14:40.
3 ಭಕ್ತಿವೃದ್ಧಿಮಾಡುವಂಥ ಹೇಳಿಕೆಗಳು: ನೀವು ನೆರವು ನೀಡಸಾಧ್ಯವಿರುವಂಥ ಇನ್ನೊಂದು ವಿಧವು, ಚೆನ್ನಾಗಿ ತಯಾರಿಮಾಡಿ ಭಕ್ತಿವೃದ್ಧಿಮಾಡುವಂಥ ಹೇಳಿಕೆಗಳನ್ನು ಕೊಡುವುದೇ ಆಗಿದೆ. ಒಂದೇ ಒಂದು ಅಂಶದ ಮೇಲೆ ಕೇಂದ್ರೀಕೃತವಾಗಿರುವಂಥ ಹೇಳಿಕೆಗಳು ಸಾಮಾನ್ಯವಾಗಿ ಅತ್ಯುತ್ತಮವಾಗಿರುತ್ತವೆ, ಮತ್ತು ಇದು ಇತರರು ಸಹ ಉತ್ತರ ನೀಡುವಂತೆ ಉತ್ತೇಜಿಸುತ್ತದೆ. ಒಂದು ಪ್ಯಾರಗ್ರಾಫ್ನಲ್ಲಿರುವ ಎಲ್ಲ ವಿಷಯಗಳ ಕುರಿತು ಹೇಳಿಕೆ ನೀಡಲು ಪ್ರಯತ್ನಿಸದಿರಿ. ವಿಷಯಭಾಗದಲ್ಲಿರುವ ಯಾವುದಾದರೊಂದು ಅಂಶವು ನಿಮ್ಮ ಮನಸ್ಸನ್ನು ಸ್ಪರ್ಶಿಸುವಲ್ಲಿ, ನಿಮ್ಮ ಆಲೋಚನೆಯನ್ನು ಒಂದು ಹೇಳಿಕೆಯ ರೂಪದಲ್ಲಿ ಹಂಚಿಕೊಳ್ಳುವ ಮೂಲಕ ಚರ್ಚೆಯನ್ನು ಪುಷ್ಟೀಕರಿಸಿರಿ.—1 ಪೇತ್ರ 4:10.
4 ಗುಂಪಿನ ಪ್ರಯೋಜನಕ್ಕಾಗಿ ಪ್ಯಾರಗ್ರಾಫ್ಗಳನ್ನು ಓದುವಂಥ ಸುಯೋಗವು ನಿಮಗೆ ಕೊಡಲ್ಪಡುವಲ್ಲಿ, ಆ ನೇಮಕವನ್ನು ಶ್ರದ್ಧೆಯಿಂದ ಪೂರೈಸಿರಿ. ಒಳ್ಳೇ ವಾಚನವು ಅಧ್ಯಯನದ ಯಶಸ್ಸಿಗೆ ಸಹಾಯಕರವಾಗಿರುತ್ತದೆ.—1 ತಿಮೊ. 4:13.
5 ಗುಂಪು ಸಾಕ್ಷಿಕಾರ್ಯ: ಅನೇಕ ಪುಸ್ತಕ ಅಧ್ಯಯನ ಸ್ಥಳಗಳಲ್ಲಿ ಕ್ಷೇತ್ರ ಸೇವೆಗಾಗಿರುವ ಕೂಟಗಳು ನಡೆಸಲ್ಪಡುತ್ತವೆ, ಮತ್ತು ಸೌವಾರ್ತಿಕ ಕೆಲಸದಲ್ಲಿ ಮೇಲ್ವಿಚಾರಕರು ನಾಯಕತ್ವವನ್ನು ವಹಿಸುವಾಗ, ಈ ಏರ್ಪಾಡುಗಳಿಗಾಗಿರುವ ನಿಮ್ಮ ಬೆಂಬಲವು ಅವರಿಗೆ ಬಹಳಷ್ಟು ನೆರವು ನೀಡುವುದು. ನೀವು ಈ ಏರ್ಪಾಡುಗಳನ್ನು ನಿಮ್ಮ ಸಹೋದರರಿಗೆ ಹೆಚ್ಚು ನಿಕಟವಾಗುವ ಹಾಗೂ ಅವರನ್ನು ಪ್ರೋತ್ಸಾಹಿಸುವ ಸದವಕಾಶಗಳಾಗಿ ಪರಿಗಣಿಸಿರಿ.
6 ಕ್ಷೇತ್ರ ಸೇವಾ ವರದಿಗಳು: ಪ್ರತಿ ತಿಂಗಳ ಅಂತ್ಯದಲ್ಲಿ ನಿಮ್ಮ ಕ್ಷೇತ್ರ ಸೇವಾ ವರದಿಗಳನ್ನು ತಪ್ಪದೆ ನೀಡುವುದು ಸಹ ಮೇಲ್ವಿಚಾರಕರಿಗೆ ನೆರವು ನೀಡುವ ಇನ್ನೊಂದು ವಿಧವಾಗಿದೆ. ನೀವು ನಿಮ್ಮ ವರದಿಯನ್ನು ನೇರವಾಗಿ ಅವನ ಕೈಗೇ ಒಪ್ಪಿಸಬಹುದು ಅಥವಾ ರಾಜ್ಯ ಸಭಾಗೃಹದಲ್ಲಿ ಸೇವಾ ವರದಿಗಳಿಗಾಗಿ ನಿಗದಿಪಡಿಸಲ್ಪಟ್ಟಿರುವ ಪೆಟ್ಟಿಗೆಯಲ್ಲಿ ಹಾಕಬಹುದು. ಪುಸ್ತಕ ಅಧ್ಯಯನ ಮೇಲ್ವಿಚಾರಕರಿಂದ ಸಂಗ್ರಹಿಸಲ್ಪಡುವ ಕ್ಷೇತ್ರ ಸೇವಾ ವರದಿಗಳನ್ನು ಒಟ್ಟುಗೂಡಿಸಿಕೊಳ್ಳಲಿಕ್ಕಾಗಿ ಸೆಕ್ರಿಟರಿಯು ಈ ಪೆಟ್ಟಿಗೆಯನ್ನು ಉಪಯೋಗಿಸಸಾಧ್ಯವಿದೆ.
7 ನಿಮ್ಮ ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರೊಂದಿಗಿನ ನಿಮ್ಮ ಸಹಕಾರವು ಗಣ್ಯಮಾಡಲ್ಪಡದೆ ಹೋಗುವುದಿಲ್ಲ. ಎಲ್ಲಕ್ಕಿಂತಲೂ ಮಿಗಿಲಾಗಿ, ಯೆಹೋವನು ‘ನೀವು ತೋರಿಸುವ ಆತ್ಮದೊಂದಿಗೆ’ ಇರುವನು ಎಂಬ ಆಶ್ವಾಸನೆ ನಿಮಗಿರಬಲ್ಲದು.—ಫಿಲಿ. 4:23.