ಸೇವಾ ಕೂಟದ ಶೆಡ್ಯೂಲ್
ಜನವರಿ 13ರಿಂದ ಆರಂಭವಾಗುವ ವಾರ
ಗೀತೆ 9 (37)
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 4ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳಲ್ಲಿ ಜನವರಿ-ಮಾರ್ಚ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು)ವನ್ನು ಮತ್ತು ಜನವರಿ 15ರ ಕಾವಲಿನಬುರುಜುವನ್ನು ಹೇಗೆ ನೀಡುವುದು ಎಂಬುದನ್ನು ತೋರಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ, ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುವುದಾದರೂ, ಜೋಡಿಯಾಗಿ ಎರಡೂ ಪತ್ರಿಕೆಗಳು ನೀಡಲ್ಪಡಬೇಕು.
15 ನಿ: ಒಂದೂ ಮಾತನ್ನಾಡದೆ ಜಯ. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಒಳ್ಳೆಯ ಕ್ರೈಸ್ತ ನಡತೆ ಒಂದು ಬಲವತ್ತಾದ ಸಾಕ್ಷಿಯಾಗಿದೆ. ಇದು ಕೆಲವು ಅವಿಶ್ವಾಸಿ ಸಂಗಾತಿಗಳು ಯೆಹೋವನ ಆರಾಧಕರಾಗಲು ಪ್ರೇರಿಸಿವೆ. (1 ಪೇತ್ರ 3:1, 2) 1999, ಜನವರಿ 1, ಕಾವಲಿನಬುರುಜುವಿನ ಪುಟ 4; 1995, ಅಕ್ಟೋಬರ್ 1, ಕಾವಲಿನಬುರುಜುವಿನ 10-11ನೇ ಪುಟಗಳು; ಮತ್ತು 1995 ವರ್ಷಪುಸ್ತಕದ ಪುಟ 46ರಲ್ಲಿ ಕಂಡುಬರುವ ಅನುಭವಗಳನ್ನು ತಿಳಿಸಿರಿ. ಈ ಕ್ಷೇತ್ರದಲ್ಲಿ ಬೈಬಲ್ ಸಲಹೆಯನ್ನು ಹಿಂಬಾಲಿಸುವ ಮೂಲಕ ಪಡೆದುಕೊಂಡ ಸಕಾರಾತ್ಮಕ ಪರಿಣಾಮಗಳ ಕುರಿತು ಹೇಳಿಕೆ ನೀಡುವಂತೆ ಮುಂಚಿತವಾಗಿಯೇ ಇಬ್ಬರು ಅಥವಾ ಮೂವರೊಂದಿಗೆ ಏರ್ಪಾಡು ಮಾಡಿರಿ.
20 ನಿ: “ನಮ್ಮ ಸಮರ್ಪಣೆಯ ಪ್ರತಿಜ್ಞೆಗನುಸಾರ ಜೀವಿಸುವುದು.”a ಪ್ಯಾರಗ್ರಾಫ್ 3ನ್ನು ಪರಿಗಣಿಸಿದ ನಂತರ, ದೀಕ್ಷಾಸ್ನಾನ ಹೊಂದಿರುವ ಒಬ್ಬ ಯುವಕ ಅಥವಾ ಹದಿಪ್ರಾಯದ ವ್ಯಕ್ತಿಯನ್ನು ಸಂಕ್ಷಿಪ್ತವಾಗಿ ಇಂಟರ್‌ವ್ಯೂ ಮಾಡಿ. ದೀಕ್ಷಾಸ್ನಾನ ಹೊಂದಿದಾಗಿನಿಂದ ಅವನು ಯಾವ ಪಂಥಾಹ್ವಾನಗಳನ್ನು ಎದುರಿಸಿದ್ದಾನೆ? ಆ ಪಂಥಾಹ್ವಾನಗಳನ್ನು ಯಶಸ್ವಿಕರವಾಗಿ ಎದುರಿಸಲು ಯಾವುದು ಅವನಿಗೆ ಸಹಾಯಮಾಡಿತು? ಯೆಹೋವನಿಗೆ ತನ್ನ ಜೀವನವನ್ನು ಸಮರ್ಪಿಸಿಕೊಳ್ಳುವ ಮೂಲಕ ಅವನು ಹೇಗೆ ಪ್ರಯೋಜನವನ್ನು ಪಡೆದಿದ್ದಾನೆ?
ಗೀತೆ 16 (143) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 20ರಿಂದ ಆರಂಭವಾಗುವ ವಾರ
ಗೀತೆ 6 (45)
8 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ.
15 ನಿ: ನೀವು ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುತ್ತೀರೋ? ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು—2003 ಪುಸ್ತಿಕೆಯನ್ನು ಸದುಪಯೋಗಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ. 3-4ನೆಯ ಪುಟಗಳಲ್ಲಿರುವ ಮುನ್ನುಡಿಯಿಂದ ಹೇಳಿಕೆಗಳನ್ನು ಚರ್ಚಿಸಿರಿ. ಕುಟುಂಬಗಳು ಹೇಗೆ ವಚನವನ್ನು ಒಟ್ಟಿಗೆ ಚರ್ಚಿಸಬಹುದೆಂಬ ವಿಷಯದಲ್ಲಿ ಸಲಹೆಗಳನ್ನು ಕೊಡಿರಿ. ವಚನವನ್ನು ಪ್ರತಿನಿತ್ಯ ಪರಿಶೀಲಿಸುವುದರ ಪ್ರಯೋಜನವನ್ನು ತೋರಿಸಲಿಕ್ಕಾಗಿ, ಮುಂದಿನ ತಿಂಗಳಿನಲ್ಲಿ ಚರ್ಚೆಗಾಗಿರುವ ವಚನ ಮತ್ತು ಹೇಳಿಕೆಗಳ ಎರಡು ಅಥವಾ ಮೂರು ಉದಾಹರಣೆಗಳನ್ನು ಚರ್ಚಿಸಿರಿ. ನಂತರ ಒಬ್ಬ ಗಂಡ ಮತ್ತು ಹೆಂಡತಿ ಇಂದಿನ ವಚನ ಮತ್ತು ಹೇಳಿಕೆಗಳನ್ನು ಒಟ್ಟಿಗೆ ಪರಿಶೀಲಿಸುತ್ತಿರುವ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಒಳಗೂಡಿಸಿರಿ.
22 ನಿ: “ಇತರರಿಗೆ ಶುದ್ಧ ಭಾಷೆಯನ್ನು ಕಲಿಸಿರಿ.”b ಪ್ಯಾರಗ್ರಾಫ್ 6ನ್ನು ಪರಿಶೀಲಿಸಿದ ನಂತರ, ಜನವರಿ 2002ರ ನಮ್ಮ ರಾಜ್ಯದ ಸೇವೆಯ ಪುರವಣಿಯ ಪುಟ 4ರಲ್ಲಿರುವ ನಿರೂಪಣೆಗಳಲ್ಲೊಂದನ್ನು ಉಪಯೋಗಿಸುತ್ತಾ, ಪುನರ್ಭೇಟಿಯನ್ನು ಮಾಡುವಾಗ ಬಾಗಿಲ ಬಳಿಯಲ್ಲಿ ಹೇಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಬಹುದು ಎಂಬುದನ್ನು ಒಬ್ಬ ಸಮರ್ಥ ಪ್ರಚಾರಕನು ಪ್ರತ್ಯಕ್ಷಾಭಿನಯಿಸಲಿ. ಅಪೇಕ್ಷಿಸು ಬ್ರೋಷರಿನಲ್ಲಿನ ಒಂದು ಪ್ಯಾರಗ್ರಾಫಿನ ಪರಿಗಣನೆಯನ್ನು ಒಳಗೂಡಿಸಿರಿ. ಪ್ರಚಾರಕನು ಮುಂದಿನ ಪ್ಯಾರಗ್ರಾಫ್‌ನ ಮೇಲೆ ಒಂದು ಪ್ರಶ್ನೆಯನ್ನು ಎಬ್ಬಿಸಿ ಮುಂದಿನ ಭೇಟಿಯಲ್ಲಿ ಅದನ್ನು ಉತ್ತರಿಸುವೆನೆಂದು ಹೇಳುವ ಮೂಲಕ ಪ್ರತ್ಯಕ್ಷಾಭಿನಯವನ್ನು ಕೊನೆಗೊಳಿಸಲಿ. ಬೈಬಲನ್ನು ಈ ರೀತಿಯಲ್ಲಿ ಅಧ್ಯಯನ ಮಾಡಲು ತಾವು ಭೇಟಿಮಾಡುವ ಯಾರಾದರೂ ಬಯಸುವರೋ ಎಂದು ಪರಿಗಣಿಸಿ ನೋಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.
ಗೀತೆ 23 (200) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 27ರಿಂದ ಆರಂಭವಾಗುವ ವಾರ
ಗೀತೆ 18 (162)
10 ನಿ: ಸ್ಥಳಿಕ ಪ್ರಕಟನೆಗಳು. ತಮ್ಮ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಪುಟ 4ರಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯದಲ್ಲಿ ಜನವರಿ-ಮಾರ್ಚ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು)ವನ್ನು ಮತ್ತು ಫೆಬ್ರವರಿ 1ರ ಕಾವಲಿನಬುರುಜುವನ್ನು ಹೇಗೆ ನೀಡುವುದು ಎಂಬುದನ್ನು ತೋರಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ ಪ್ರಚಾರಕನು, ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟನ್ನು—ಒಂದು ಪತ್ರಿಕೆಗಳನ್ನು ಸ್ವೀಕರಿಸದ ಮನೆಯವನಿಗೆ ಮತ್ತು ಮತ್ತೊಂದನ್ನು ಪತ್ರಿಕೆಗಳನ್ನು ಸ್ವೀಕರಿಸುವ ಮನೆಯವನಿಗೆ ನೀಡುವ ಮೂಲಕ ಕೊನೆಗೊಳಿಸಲಿ. ನಾವು ಟ್ರ್ಯಾಕ್ಟನ್ನು ನೀಡಿದಾಗ ಪತ್ರಿಕೆಯನ್ನು ತೆಗೆದುಕೊಂಡವರನ್ನು ಪುನಃ ಹೇಗೆ ಸಂಪರ್ಕಿಸಬಹುದು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರಿ.—ನವೆಂಬರ್ 2001ರ ನಮ್ಮ ರಾಜ್ಯದ ಸೇವೆಯ ಪು. 4, ಪ್ಯಾರ. 10ನ್ನು ನೋಡಿರಿ.
35 ನಿ: “‘ಹುರುಪಿನ ರಾಜ್ಯ ಘೋಷಕರು’ ಜಿಲ್ಲಾ ಅಧಿವೇಶನದಿಂದ ಪೂರ್ಣವಾಗಿ ಪ್ರಯೋಜನ ಪಡೆಯುವುದು.” ಕಾವಲಿನಬುರುಜು ಅಧ್ಯಯನ ಚಾಲಕನಿಂದ ನಿರ್ವಹಿಸಲ್ಪಡತಕ್ಕದ್ದು. ಒಂದು ನಿಮಿಷದ ಪೀಠಿಕೆಯ ನಂತರ, ಲೇಖನದಲ್ಲಿ ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಸಭಿಕರೊಂದಿಗೆ ಜಿಲ್ಲಾ ಅಧಿವೇಶನ ಕಾರ್ಯಕ್ರಮದ ಕುರಿತು ಚರ್ಚೆಯನ್ನು ನಡೆಸಿರಿ. ನಿಮ್ಮ ಸಮಯವನ್ನು ಜಾಗರೂಕತೆಯಿಂದ ಪಾಲುಮಾಡಿರಿ. ಮುಖ್ಯವಾದ ಅಂಶಗಳನ್ನು ಜ್ಞಾಪಕಕ್ಕೆ ತರುವಂತೆ ಚುಟುಕಾದ ಹೇಳಿಕೆಗಳನ್ನು ಸೇರಿಸಿಕೊಳ್ಳಬಹುದು. ಸೂಕ್ತವಾಗಿರುವಾಗ, ತಾವು ಕಲಿತುಕೊಂಡದ್ದನ್ನು ಅವರು ಹೇಗೆ ಅನ್ವಯಿಸುತ್ತಿದ್ದಾರೆ ಮತ್ತು ಹೀಗೆ ಮಾಡಿದ್ದರಿಂದ ಯಾವ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆಂದು ಸಭಿಕರನ್ನು ಕೇಳಿರಿ.
ಗೀತೆ 20 (93) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 3ರಿಂದ ಆರಂಭವಾಗುವ ವಾರ
ಗೀತೆ 22 (130)
5 ನಿ: ಸ್ಥಳಿಕ ಪ್ರಕಟನೆಗಳು.
10 ನಿ: ಸ್ಥಳಿಕ ಅಗತ್ಯಗಳು.
12 ನಿ: ಅವರ ನಂಬಿಕೆಯನ್ನು ಅನುಕರಿಸಿರಿ. ದೀನತೆಯಿಂದ ಮತ್ತು ನಂಬಿಗಸ್ತಿಕೆಯಿಂದ ಯೆಹೋವನನ್ನು ಅನೇಕ ವರ್ಷಗಳಿಂದ ಸೇವಿಸಿರುವ ಒಬ್ಬ ಹಿರಿಯನನ್ನು ಇಂಟರ್‌ವ್ಯೂ ಮಾಡಿ. (ಇಬ್ರಿ. 13:7) ಅವರು ಸತ್ಯವನ್ನು ಹೇಗೆ ಕಲಿತರು? ತಮ್ಮ ನಿಲುವನ್ನು ತೆಗೆದುಕೊಳ್ಳುವುದರಲ್ಲಿ ಯಾವ ಅಡಚಣೆಗಳನ್ನು ಅವರು ಜಯಿಸಬೇಕಾಗಿದೆ? ಯಾವ ಆತ್ಮಿಕ ಒದಗಿಸುವಿಕೆಗಳು ಅಥವಾ ಪ್ರೋತ್ಸಾಹನೆಯು ಪ್ರಗತಿಯನ್ನು ಮಾಡಲು ಅವರಿಗೆ ಸಹಾಯಮಾಡಿತು? ಸಭೆಯಲ್ಲಿ ಮೇಲ್ವಿಚಾರಕರಾಗಲು ಅವರು ಯಾವ ಪ್ರಯತ್ನಗಳನ್ನು ಮಾಡಿದರು? (1 ತಿಮೊ. 3:1) ಆರ್ಥಿಕ ಮತ್ತು ಕೌಟುಂಬಿಕ ಕರ್ತವ್ಯಗಳೊಂದಿಗೆ ಸಭೆಯ ಜವಾಬ್ದಾರಿಗಳನ್ನು ಸರಿದೂಗಿಸಲು ಅವರಿಗೆ ಯಾವುದು ಸಹಾಯಮಾಡಿದೆ? (1 ತಿಮೊ. 5:8) ಸಭೆಯಲ್ಲಿ ಇತರರಿಗೆ ಬೆಂಬಲ ನೀಡುವ ಸುಯೋಗದ ಕುರಿತು ಅವರಿಗೆ ಹೇಗನಿಸುತ್ತದೆ?
18 ನಿ: “ದೀನಭಾವವನ್ನು ಅವಶ್ಯಪಡಿಸುವಂಥ ಕೆಲಸ.”c ಪ್ಯಾರಗ್ರಾಫ್ 3ನ್ನು ಚರ್ಚಿಸುತ್ತಿರುವಾಗ, ಕ್ಷೇತ್ರದಲ್ಲಿ ಯಾರಾದರೊಬ್ಬರು ನಮಗೆ ಗೇಲಿಮಾಡುವುದಾದರೆ ಅಥವಾ ನಮ್ಮೊಂದಿಗೆ ಒರಟಾಗಿ ವರ್ತಿಸುವುದಾದರೆ, ವಾದಮಾಡುವುದಾದರೆ ಅಥವಾ ಕೋಪಗೊಳ್ಳುವುದಾದರೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬ ವಿಷಯದಲ್ಲಿ ಸಲಹೆಗಳನ್ನು ನೀಡುವಂತೆ ಸಭಿಕರಿಗೆ ಕರೆಕೊಡಿರಿ. ಪ್ಯಾರಗ್ರಾಫ್ 4ನ್ನು ಚರ್ಚಿಸುತ್ತಿರುವಾಗ, ಒಳನೋಟ (ಇಂಗ್ಲಿಷ್), ಸಂಪುಟ 1, ಪುಟ 1160, ಪ್ಯಾರಗ್ರಾಫ್ 3ರ ಕುರಿತಾದ ಹೇಳಿಕೆಗಳನ್ನು ಒಳಗೂಡಿಸಿರಿ.
ಗೀತೆ 3 (32) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.