ಸೇವಾ ಕೂಟದ ಶೆಡ್ಯೂಲ್
ಜೂನ್ 9ರಿಂದ ಆರಂಭವಾಗುವ ವಾರ
ಗೀತೆ 26 (212)
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 8ನೇ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಜೂನ್ 15ರ ಕಾವಲಿನಬುರುಜುವನ್ನು ಹೇಗೆ ನೀಡುವುದು ಎಂಬುದರ ಕುರಿತಾದ ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿಯೂ ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುತ್ತದಾದರೂ, ಜೋಡಿಯಾಗಿ ಎರಡೂ ಪತ್ರಿಕೆಗಳು ನೀಡಲ್ಪಡಬೇಕು. ಪ್ರತಿಯೊಂದು ನಿರೂಪಣೆಯಲ್ಲೂ ಒಂದು ಶಾಸ್ತ್ರವಚನವನ್ನು ಸೇರಿಸಿರಿ.
15 ನಿ: “ಕ್ರೈಸ್ತ ಶುಶ್ರೂಷೆ—ನಮ್ಮ ಪ್ರಧಾನ ಕೆಲಸ”a ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸುವುದರ ಮೂಲಕ ಅವರು ಆನಂದಿಸಬಲ್ಲ ಆಶೀರ್ವಾದಗಳ ಕುರಿತು ಪರಿಗಣಿಸುವಂತೆ ಯುವ ಜನರನ್ನು ಪ್ರೋತ್ಸಾಹಿಸಿರಿ. 2000, ನವೆಂಬರ್ 1ರ ಕಾವಲಿನಬುರುಜುವಿನ 19-20ನೇ ಪುಟದಲ್ಲಿ “ಸಂಸ್ಕೃತಿ ಹಾಗೂ ಮನಸ್ಸಾಕ್ಷಿಯ ನಡುವೆ ಸಂಘರ್ಷವಿರುವಾಗ” ಎಂಬ ಉಪಶೀರ್ಷಿಕೆಯ ಕೆಳಗಿರುವ ವಿಷಯಭಾಗದ ಮೇಲೆ ಕೆಲವು ಹೇಳಿಕೆಗಳನ್ನು ಸೇರಿಸಿಕೊಳ್ಳಿರಿ.
20 ನಿ: “ನಿವೃತ್ತಿ—ವರ್ಧಿಸಿದ ಕಾರ್ಯಕ್ಕೆ ಅನುಕೂಲವಾದ ಸಂದರ್ಭವೋ?”b ಸಾಧ್ಯವಿರುವಲ್ಲಿ, ಐಹಿಕ ಕೆಲಸದಿಂದ ನಿವೃತ್ತಿಯನ್ನು ಪಡೆದ ಬಳಿಕ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲಿಕ್ಕಾಗಿ ಸಮಯವನ್ನು ಉಪಯೋಗಿಸಿಕೊಂಡ ಒಬ್ಬ ಪ್ರಚಾರಕನ ಸಂಕ್ಷಿಪ್ತವಾದ ಇಂಟರ್‌ವ್ಯೂ ಅನ್ನು ಸೇರಿಸಿರಿ. ಅವರು ಯಾವ ಹೊಂದಾಣಿಕೆಗಳನ್ನು ಮಾಡಿದ್ದಾರೆ ಮತ್ತು ಅದರ ಪರಿಣಾಮವಾಗಿ ಯಾವ ಆಶೀರ್ವಾದಗಳನ್ನು ಅನುಭವಿಸಿದ್ದಾರೆ ಎಂದು ಕೇಳಿರಿ.
ಗೀತೆ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 16ರಿಂದ ಆರಂಭವಾಗುವ ವಾರ
ಗೀತೆ 1 (13)
8 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ.
37 ನಿ: ನಮ್ಮ ಕೆಲಸವು ತಪ್ಪು ತಿಳಿವಳಿಕೆಗೆ ತುತ್ತಾಗುವಾಗ. ಒಬ್ಬ ಸಮರ್ಥ ಹಿರಿಯನಿಂದ ನಿರ್ವಹಿಸಲ್ಪಡಬೇಕು, ಮತ್ತು ಬ್ರಾಂಚ್ ಆಫೀಸ್‌ನಿಂದ ಒದಗಿಸಲ್ಪಟ್ಟಿರುವ ಹೊರಮೇರೆಯ ಮೇಲೆ ಆಧಾರಿತವಾಗಿರಬೇಕು.
ಗೀತೆ 22 (130) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 23ರಿಂದ ಆರಂಭವಾಗುವ ವಾರ
ಗೀತೆ 28 (224)
10 ನಿ: ಸ್ಥಳಿಕ ಪ್ರಕಟನೆಗಳು. 8ನೇ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಏಪ್ರಿಲ್-ಜೂನ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಜುಲೈ 1ರ ಕಾವಲಿನಬುರುಜುವನ್ನು ಹೇಗೆ ನೀಡುವುದು ಎಂಬುದರ ಕುರಿತಾದ ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿಯೂ ಒಂದೇ ಪತ್ರಿಕೆಯ ಕುರಿತು ಮಾತಾಡಲ್ಪಡುವುದಾದರೂ, ಜೋಡಿಯಾಗಿ ಎರಡೂ ಪತ್ರಿಕೆಗಳು ನೀಡಲ್ಪಡಬೇಕು. ಒಂದು ಪ್ರತ್ಯಕ್ಷಾಭಿನಯದಲ್ಲಿ, ಪ್ರಚಾರಕನು ಬೀದಿ ಸಾಕ್ಷಿಕಾರ್ಯದಲ್ಲಿ ಒಳಗೂಡಿರುವುದನ್ನು ತೋರಿಸಿರಿ.
20 ನಿ: “‘ಸಮಗ್ರವಾಗಿ ಸಾಕ್ಷಿಯನ್ನು ನೀಡು’ವುದರಲ್ಲಿ ಶ್ರದ್ಧೆಯುಳ್ಳವರಾಗಿರಿ.”c ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. 5 ಮತ್ತು 6ನೇ ಪ್ಯಾರಗ್ರಾಫ್‌ಗಳನ್ನು ಚರ್ಚಿಸಿದ ನಂತರ, ಒಂದು ಸ್ಟೋರ್‌ನ ಗುಮಾಸ್ತನಿಗೆ ಅನೌಪಚಾರಿಕವಾಗಿ ಸಾಕ್ಷಿಯನ್ನು ನೀಡಿ, ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುತ್ತೀರೋ? ಎಂಬ ಟ್ರ್ಯಾಕ್ಟನ್ನು ನೀಡುವ ಒಂದು ಚಿಕ್ಕ ಪ್ರತ್ಯಕ್ಷಾಭಿನಯವನ್ನು ಸೇರಿಸಿರಿ. 7 ಮತ್ತು 8ನೇ ಪ್ಯಾರಗ್ರಾಫ್‌ಗಳನ್ನು ಚರ್ಚಿಸುವ ಮುನ್ನ, ಅವನ್ನು ಗಟ್ಟಿಯಾಗಿ ಓದಿಸಿರಿ. ಸಮಾಪ್ತಿಯಲ್ಲಿ, “ಅವರನ್ನು ಮರೆಯಬೇಡಿ!” ಎಂಬ ಚೌಕವನ್ನು ಓದಿ ಚರ್ಚಿಸಿರಿ.
15 ನಿ: “ಸತತವಾಗಿ ಬದಲಾಗುತ್ತಿರುವ ಒಂದು ಲೋಕದಲ್ಲಿ ಸಾರುವುದು.”d 2-3ನೆಯ ಪ್ಯಾರಗ್ರಾಫ್‌ಗಳನ್ನು ಚರ್ಚಿಸುತ್ತಿರುವಾಗ, ಸ್ಥಳಿಕ ಟೆರಿಟೊರಿಯಲ್ಲಿ ಸಂಭಾಷಣೆಗಳನ್ನು ಆರಂಭಿಸಲಿಕ್ಕಾಗಿ ಪ್ರಚಲಿತ ಯಾವ ಘಟನೆಗಳನ್ನು ಉಪಯೋಗಿಸಬಹುದು ಎಂದು ಸಭಿಕರನ್ನು ಕೇಳಿರಿ. 4ನೇ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, ಸೂಚಿತ ನಿರೂಪಣೆಯೊಂದನ್ನು ಉಪಯೋಗಿಸುತ್ತಾ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ನೀಡಿರಿ.
ಗೀತೆ 2 (15) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 30ರಿಂದ ಆರಂಭವಾಗುವ ವಾರ
ಗೀತೆ 16 (143)
10 ನಿ: ಸ್ಥಳಿಕ ಪ್ರಕಟನೆಗಳು. ಜೂನ್ ತಿಂಗಳ ಸೇವಾ ವರದಿಗಳನ್ನು ಹಾಕುವಂತೆ ಸಭಿಕರಿಗೆ ಜ್ಞಾಪಕ ಹುಟ್ಟಿಸಿರಿ. ಜುಲೈ ಮತ್ತು ಆಗಸ್ಟ್ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯನ್ನು ಪುನರ್ವಿಮರ್ಶಿಸಿರಿ. ಸ್ಥಳಿಕವಾಗಿ ಸ್ಟಾಕ್‌ನಲ್ಲಿರುವ ಎರಡು ಬ್ರೋಷರ್‌ಗಳನ್ನು ಪ್ರಸ್ತುತಪಡಿಸಿರಿ. ಅವನ್ನು ಶುಶ್ರೂಷೆಯಲ್ಲಿ ಹೇಗೆ ನೀಡಬಹುದು ಎಂಬುದರ ಕುರಿತು ಚೆನ್ನಾಗಿ ತಯಾರಿಸಲ್ಪಟ್ಟ ಪ್ರತ್ಯಕ್ಷಾಭಿನಯಗಳಿರಲಿ. ಸೂಚಿತ ನಿರೂಪಣೆಗಳಿಗಾಗಿ, ಜುಲೈ 1998ರ ನಮ್ಮ ರಾಜ್ಯದ ಸೇವೆಯ 8ನೇ ಪುಟವನ್ನು ನೋಡಿರಿ. ಹೆಚ್ಚಿನ ನಿರೂಪಣೆಗಳನ್ನು, ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್‌ನಲ್ಲಿ “ನಿರೂಪಣೆಗಳು” (Presentations) ಮತ್ತು “ಪ್ರಕಾಶನಗಳ ಅನುಕ್ರಮದಲ್ಲಿ” (List by Publication) ಎಂಬ ಕಾಲಮ್‌ನ ಮಧ್ಯದಲ್ಲಿ ಕೊಡಲ್ಪಟ್ಟಿರುವ ಉಪಶೀರ್ಷಿಕೆಯ ಕೆಳಗೆ ಕಂಡುಕೊಳ್ಳಬಹುದು.
15 ನಿ: ನಿರುತ್ಸಾಹವನ್ನು ಹೇಗೆ ನಿಭಾಯಿಸಸಾಧ್ಯವಿದೆ? 1999, ನವೆಂಬರ್ 15ರ ಕಾವಲಿನಬುರುಜುವಿನ 28-9 ಪುಟಗಳಲ್ಲಿರುವ “ಉತ್ತಮ ಮನೋಭಾವವನ್ನು ಕಾಪಾಡಿಕೊಳ್ಳುವುದು” ಎಂಬ ಉಪಶೀರ್ಷಿಕೆಯ ಕೆಳಗೆ ಅಡಕವಾಗಿರುವ ಮೂರು ಪ್ಯಾರಗ್ರಾಫ್‌ಗಳ ಮೇಲೆ ಆಧರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಶಾಸ್ತ್ರೀಯ ಬುದ್ಧಿವಾದದೊಂದಿಗೆ ಪ್ರಾಯೋಗಿಕ ಸಲಹೆಗಳನ್ನು ಪುನರ್ವಿಮರ್ಶಿಸಿರಿ. ತಮ್ಮ ಶುಶ್ರೂಷೆಯಲ್ಲಿ ಆನಂದವನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಯಾವುದು ಸಹಾಯಮಾಡುತ್ತದೆ ಎಂಬುದನ್ನು ವಿವರಿಸಲಿಕ್ಕಾಗಿ, ಒಬ್ಬರು ಅಥವಾ ಇಬ್ಬರು ಪರಿಣಾಮಕಾರಿ ಪ್ರಚಾರಕರೊಂದಿಗೆ ಮುಂಚಿತವಾಗಿಯೇ ಏರ್ಪಾಡನ್ನು ಮಾಡಿರಿ.
20 ನಿ: ರಾಜ್ಯವನ್ನು ಸಾರಲಿಕ್ಕಾಗಿ ದೇವರ ವಾಕ್ಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರಿ. ಸೇವಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡಬೇಕಾದ ಸಭಿಕರೊಂದಿಗಿನ ಚರ್ಚೆ. ನಮ್ಮ ಶುಶ್ರೂಷೆಯಲ್ಲಿ ನಾವು ಭೇಟಿಯಾಗುವ ಪ್ರತಿಯೊಬ್ಬನೊಂದಿಗೂ, ರಾಜ್ಯದ ಕುರಿತಾದ ಒಂದು ಉತ್ತೇಜನದಾಯಕ ಶಾಸ್ತ್ರೀಯ ಅಂಶವನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ. ಆದರೂ, ಬೈಬಲ್ ವಚನಗಳನ್ನು ಕೇವಲ ಓದುವುದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕಾಗಿದೆ. ಅವನ್ನು ವಿವರಿಸಿ, ದೃಷ್ಟಾಂತಿಸಿ, ಅನ್ವಯಿಸಬೇಕಾಗಿದೆ. ಇದನ್ನು ಹೇಗೆ ಮಾಡಬಹುದು ಎಂಬುದನ್ನು, ತರ್ಕಿಸು# ಪುಸ್ತಕದ 154-5ನೆಯ ಪುಟಗಳಲ್ಲಿರುವ “ಮಾನವಕುಲಕ್ಕೆ ಜರೂರಿಯಾಗಿ ಬೇಕಾಗಿರುವುದನ್ನು ಮಾನವ ಅಧಿಪತಿಗಳು ಒದಗಿಸುತ್ತಿಲ್ಲ” (Human rulers are not providing what mankind urgently needs) ಎಂಬ ಓರೆ ಅಕ್ಷರದ ಉಪಶೀರ್ಷಿಕೆಯ ಕೆಳಗೆ ಉದ್ಧರಿಸಲ್ಪಟ್ಟಿರುವ ಕೆಲವು ಶಾಸ್ತ್ರವಚನಗಳನ್ನು ಉದಾಹರಣೆಗಳಾಗಿ ಉಪಯೋಗಿಸುತ್ತಾ ತೋರಿಸಿರಿ. ಚರ್ಚೆಯನ್ನು ಹಿಂಬಾಲಿಸುತ್ತಾ, ಚೆನ್ನಾಗಿ ತಯಾರಿ ಮಾಡಿರುವಂಥ ಒಬ್ಬ ಪ್ರಚಾರಕನು ಒಂದು ಪುನರ್ಭೇಟಿಯಲ್ಲಿ ಚುಟುಕಾದ ವಿವರಣೆಯನ್ನು, ಒಂದು ಸರಳವಾದ ದೃಷ್ಟಾಂತವನ್ನು, ಮತ್ತು ರಾಜ್ಯ ಆಳ್ವಿಕೆಯು ಮನೆಯವನಿಗೆ ವೈಯಕ್ತಿಕವಾಗಿ ಹೇಗೆ ಪ್ರಯೋಜನಕಾರಿಯಾಗಿರುವುದು ಎಂಬುದನ್ನು ತೋರಿಸಲಿಕ್ಕಾಗಿ, ಒಂದು ಸಂಕ್ಷಿಪ್ತ ಅನ್ವಯವನ್ನು ಕೊಡುತ್ತಾ ಹೇಗೆ ಒಂದು ಶಾಸ್ತ್ರವಚನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿರಿ. ಪ್ರತ್ಯಕ್ಷಾಭಿನಯವನ್ನು ಪ್ರಚಾರಕನು ಶಾಸ್ತ್ರವಚನವನ್ನು ಓದುವುದರಿಂದ ಆರಂಭಿಸಲಿ. ಪ್ರತ್ಯಕ್ಷಾಭಿನಯವನ್ನು ಹಿಂಬಾಲಿಸುತ್ತಾ, ವಚನವು ಹೇಗೆ ವಿವರಿಸಲ್ಪಟ್ಟಿತು, ದೃಷ್ಟಾಂತಿಸಲ್ಪಟ್ಟಿತು, ಮತ್ತು ಅನ್ವಯಿಸಲ್ಪಟ್ಟಿತು ಎಂಬುದನ್ನು ಪುನರ್ವಿಮರ್ಶಿಸಿರಿ. ದೇವರ ವಾಕ್ಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.
ಗೀತೆ 11 (85) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 7ರಿಂದ ಆರಂಭವಾಗುವ ವಾರ
ಗೀತೆ 20 (93)
5 ನಿ: ಸ್ಥಳಿಕ ಪ್ರಕಟನೆಗಳು.
15 ನಿ: ಸ್ಥಳಿಕ ಅನುಭವಗಳು. ಸ್ಥಳಿಕ ಪ್ರಚಾರಕರು (1) ಬೇರೊಂದು ಭಾಷೆಯನ್ನಾಡುವ ಜನರಿಗೆ ಸಾಕ್ಷಿಕೊಡುತ್ತಿರುವಾಗ ಅಥವಾ (2) ಮನೆಯಿಂದ ಮನೆ ಮತ್ತು ಬೀದಿ ಸಾಕ್ಷಿಕಾರ್ಯದ ಹೊರತು ಬೇರೆ ಸನ್ನಿವೇಶಗಳಲ್ಲಿ ಸಾಕ್ಷಿಯನ್ನು ಕೊಡುತ್ತಿರುವಾಗ ಆದ ಅನುಭವವನ್ನು ವಿವರಿಸಿರಿ ಅಥವಾ ಪುನರಭಿನಯಿಸಿರಿ. ಬೇರೊಂದು ಭಾಷೆಯನ್ನಾಡುವ ಜನರನ್ನು ಭೇಟಿಯಾಗುವಾಗ ಗುಡ್ ನ್ಯೂಸ್ ಫಾರ್ ಆಲ್ ನೇಷನ್ಸ್ ಪುಸ್ತಿಕೆ ಮತ್ತು ಪ್ಲೀಸ್ ಫಾಲೊ ಅಪ್ (S-43) ಫಾರ್ಮ್‌ನ ಒಳ್ಳೇ ಉಪಯೋಗವನ್ನು ಮಾಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.—ಜುಲೈ 2002ರ ನಮ್ಮ ರಾಜ್ಯದ ಸೇವೆಯ ಪುಟ 1ನ್ನು ನೋಡಿರಿ.
25 ನಿ: “ದೈವಿಕ ನಾಮವನ್ನು ಪ್ರಕಟಪಡಿಸುವುದು.”e ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಪ್ಯಾರಗ್ರಾಫ್ 4ನ್ನು ಚರ್ಚಿಸುತ್ತಿರುವಾಗ, ಘೋಷಕರು# ಪುಸ್ತಕದ 124ನೇ ಪುಟದಲ್ಲಿರುವ “ದೇವರ ಹೆಸರನ್ನು ಪ್ರಕಟಪಡಿಸುವುದು” (Making Known the Name of God) ಎಂಬ ಚೌಕದ ಕುರಿತಾದ ಹೇಳಿಕೆಗಳನ್ನು ಸೇರಿಸಿರಿ. ಒಬ್ಬ ಸಮರ್ಥ ಪ್ರಚಾರಕನು ಒಂದು ಪುನರ್ಭೇಟಿಯನ್ನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ. ತರ್ಕಿಸು# ಪುಸ್ತಕದ 196-7ನೇ ಪುಟಗಳಲ್ಲಿರುವ ಎರಡು ಅಥವಾ ಮೂರು ಶಾಸ್ತ್ರವಚನಗಳನ್ನು ಉಪಯೋಗಿಸುತ್ತಾ, ದೇವರ ವೈಯಕ್ತಿಕ ನಾಮವನ್ನು ತಿಳಿದುಕೊಂಡು ಅದನ್ನು ಉಪಯೋಗಿಸುವುದು ಏಕೆ ಪ್ರಾಮುಖ್ಯವಾಗಿದೆ ಎಂಬುದನ್ನು ತೋರಿಸಿರಿ.
ಗೀತೆ 6 (45) ಮತ್ತು ಸಮಾಪ್ತಿಯ ಪ್ರಾರ್ಥನೆ.
[ಅಧ್ಯಯನ ಪ್ರಶ್ನೆಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.