ಸೇವಾ ಕೂಟದ ಶೆಡ್ಯೂಲ್
ಜೂನ್ 14ರಿಂದ ಆರಂಭವಾಗುವ ವಾರ
ಗೀತೆ 168
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಜೂನ್ 15ರ ಕಾವಲಿನಬುರುಜುವನ್ನೂ ಏಪ್ರಿಲ್-ಜೂನ್ ಎಚ್ಚರ!ವನ್ನೂ ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 4ರಲ್ಲಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವಲ್ಲಿ) ಉಪಯೋಗಿಸಿರಿ. ಒಂದು ನಿರೂಪಣೆಯಲ್ಲಿ, ಪ್ರಚಾರಕನು ವ್ಯಾಪಾರ ಕ್ಷೇತ್ರದಲ್ಲಿ ಸಾಕ್ಷಿ ನೀಡುತ್ತಿರುವಂತೆ ತೋರಿಸಿರಿ. ಇತರ ವಾಸ್ತವಿಕ ನಿರೂಪಣೆಗಳನ್ನು ಉಪಯೋಗಿಸಬಹುದು.
20 ನಿ: “ತನ್ನಲ್ಲಿ ಭರವಸೆಯಿಡುವವರಿಗೆ ಯೆಹೋವನು ಸಹಾಯಮಾಡುತ್ತಾನೆ.”a ನಾಲ್ಕನೆಯ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, 2000ದ ಮೇ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 3ರಲ್ಲಿರುವ 4, 5ನೇ ಪ್ಯಾರಗ್ರಾಫ್‌ಗಳಿಂದ ಮತ್ತು ಶುಶ್ರೂಷಾ ಶಾಲೆ ಪುಸ್ತಕದ ಪುಟ 67ರ 2ನೇ ಪ್ಯಾರಗ್ರಾಫ್‌ಗಳಿಂದ ಹೇಳಿಕೆಗಳನ್ನು ಒಳಗೂಡಿಸಿರಿ.
15 ನಿ: ಅಮಲೌಷಧಗಳ ದುರುಪಯೋಗದಿಂದ ಏಕೆ ದೂರವಿರಬೇಕು? ತರ್ಕಿಸುವುದು (ಇಂಗ್ಲಿಷ್) ಪುಸ್ತಕದ 106- 9ನೇ ಪುಟಗಳ ಮೇಲಾಧಾರಿಸಿ ಸಭಿಕರೊಂದಿಗೆ ಚರ್ಚೆ. “ಮನಃಸ್ಥಿತಿಯನ್ನು ಬದಲಾಯಿಸುವಂಥ” ಅಮಲೌಷಧಗಳ ಉಪಯೋಗವು ಸರ್ವಸಾಮಾನ್ಯವಾಗಿದೆ. ಅಮಲೌಷಧವನ್ನು ಈ ರೀತಿ ಉಪಯೋಗಿಸುವುದು ಹಾನಿಕರವಲ್ಲ ಎಂದು ಅನೇಕರು ಹೇಳುತ್ತಾರೆ; ಇನ್ನು ಕೆಲವರು ಅಮಲೌಷಧಗಳನ್ನು ನ್ಯಾಯಬದ್ಧಗೊಳಿಸುವುದನ್ನೂ ಶಿಫಾರಸ್ಸು ಮಾಡುತ್ತಾರೆ. ಅಂಥವರೊಂದಿಗೆ ನಾವು ಹೇಗೆ ತರ್ಕಿಸಬಹುದು ಎಂಬುದನ್ನು ಚರ್ಚಿಸಿರಿ. 1999, ನವೆಂಬರ್ 8ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯ 10ನೇ ಪುಟದಲ್ಲಿರುವ ಚೌಕದಿಂದ ತೆಗೆದ ಹೇಳಿಕೆಗಳನ್ನು ಒಳಗೂಡಿಸಿರಿ.
ಗೀತೆ 179 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 21ರಿಂದ ಆರಂಭವಾಗುವ ವಾರ
ಗೀತೆ 29
10 ನಿ: ಸ್ಥಳಿಕ ಪ್ರಕಟನೆಗಳು.
15 ನಿ: “ದೇವದೂತರು ನಮಗೆ ಸಹಾಯಮಾಡುತ್ತಿದ್ದಾರೆ.”b ಸಮಯವು ಅನುಮತಿಸಿದಂತೆ, ಉದ್ಧೃತ ಶಾಸ್ತ್ರವಚನಗಳ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಆಮಂತ್ರಿಸಿರಿ.
20 ನಿ: ಮೇಲಣಿಂದ ಬರುವ ವಿವೇಕವು ತರ್ಕಸಮ್ಮತವಾದದ್ದಾಗಿದೆ. (ಯಾಕೋ. 3:17, NW) ಶುಶ್ರೂಷಾ ಶಾಲೆ ಪುಸ್ತಕದ 251-2ನೇ ಪುಟಗಳ ಮೇಲಾಧಾರಿತ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ತರ್ಕಸಮ್ಮತವಾಗಿರುವುದು ಏನನ್ನು ಅರ್ಥೈಸುತ್ತದೆ? ಇದು ನಮ್ಮ ಶುಶ್ರೂಷೆಯಲ್ಲಿ ಏಕೆ ಪ್ರಾಮುಖ್ಯವಾಗಿದೆ? ಅಪೊಸ್ತಲ ಪೌಲನ ಮಾದರಿಯಿಂದ ನಾವು ಏನನ್ನು ಕಲಿಯಸಾಧ್ಯವಿದೆ? ಪ್ರಚಾರಕರು ಸ್ಥಳಿಕ ಟೆರಿಟೊರಿಯಲ್ಲಿರುವ ಜನರ ಹಿನ್ನೆಲೆಯನ್ನು ಹೇಗೆ ಗಣನೆಗೆ ತೆಗೆದುಕೊಳ್ಳಸಾಧ್ಯವಿದೆ? ತರ್ಕಸಮ್ಮತತೆಯನ್ನು ತೋರಿಸುವಂತೆ ನಾವು ಬೈಬಲ್ ವಿದ್ಯಾರ್ಥಿಗಳಿಗೆ ಹೇಗೆ ಸಹಾಯಮಾಡಸಾಧ್ಯವಿದೆ? ತರ್ಕಸಮ್ಮತವಾದ ಸಮೀಪಿಸುವಿಕೆಯ ಪ್ರಯೋಜನಗಳನ್ನು ತೋರಿಸುವಂಥ ಅನುಭವಗಳನ್ನು ಒಬ್ಬರು ಅಥವಾ ಇಬ್ಬರು ತಿಳಿಸುವಂತೆ ಮುಂಚಿತವಾಗಿಯೇ ಏರ್ಪಡಿಸಿರಿ.
ಗೀತೆ 53 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 28ರಿಂದ ಆರಂಭವಾಗುವ ವಾರ
ಗೀತೆ 139
12 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ. ಜೂನ್ ತಿಂಗಳಿಗಾಗಿರುವ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ನೆನಪು ಹುಟ್ಟಿಸಿರಿ. ಪುಟ 4ರಲ್ಲಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವಲ್ಲಿ) ಉಪಯೋಗಿಸುತ್ತಾ, ಜುಲೈ 1ರ ಕಾವಲಿನಬುರುಜುವನ್ನೂ ಏಪ್ರಿಲ್-ಜೂನ್ ಎಚ್ಚರ!ವನ್ನೂ ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲಿ, ಆರಂಭದಲ್ಲೇ ಪ್ರಚಾರಕನು ಒಂದು ಸಂಕ್ಷಿಪ್ತವಾದ, ಸ್ನೇಹಪರ ಹೇಳಿಕೆಯನ್ನು ತಿಳಿಸುವಂತೆ ಮಾಡಿರಿ. ಹೀಗೆ ಮಾಡುವುದರಿಂದ ಮನೆಯವರು ಹಾಯಾಗಿ ಮಾತಾಡುವಂತೆ ಮಾಡಸಾಧ್ಯವಿದೆ ಎಂದು ತಿಳಿಸಿರಿ.
15 ನಿ: ಸ್ಥಳಿಕ ಅಗತ್ಯಗಳು.
18 ನಿ: “ಸಭಾ ಪುಸ್ತಕ ಅಧ್ಯಯನ—ನಮಗೆ ಇದರ ಆವಶ್ಯಕತೆ ಏಕಿದೆ?” c ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. 2002ರ ನವೆಂಬರ್ ತಿಂಗಳ ನಮ್ಮ ರಾಜ್ಯದ ಸೇವೆಯ 1ನೇ ಪುಟದಲ್ಲಿ ಕಂಡುಬರುವ “ನಿಮ್ಮ ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರಿಗೆ ನೆರವು ನೀಡಿರಿ” ಎಂಬ ಲೇಖನದಲ್ಲಿರುವ ಹೇಳಿಕೆಗಳನ್ನು ಒಳಗೂಡಿಸಿರಿ.
ಗೀತೆ 20 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 5ರಿಂದ ಆರಂಭವಾಗುವ ವಾರ
ಗೀತೆ 3
10 ನಿ: ಸ್ಥಳಿಕ ಪ್ರಕಟನೆಗಳು.
15 ನಿ: ನೀವೇನು ಹೇಳುವಿರಿ? ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ನಾವು ಬ್ರೋಷರುಗಳನ್ನು ನೀಡಲಿದ್ದೇವೆ. ಸ್ಥಳಿಕ ಟೆರಿಟೊರಿಯಲ್ಲಿ ಪ್ರಚಾರಕರು ಯಾವ ಬ್ರೋಷರುಗಳನ್ನು ಪರಿಣಾಮಕಾರಿಯಾಗಿ ಕಂಡುಕೊಂಡಿದ್ದಾರೆ? 1998ರ ಜುಲೈ ತಿಂಗಳ ನಮ್ಮ ರಾಜ್ಯದ ಸೇವೆಯ 8ನೇ ಪುಟದಿಂದ ಅಥವಾ ಇತರ ಹಳೆಯ ಸಂಚಿಕೆಗಳಿಂದ ಸೂಚಿತ ನಿರೂಪಣೆಗಳನ್ನು ಪುನರ್ವಿಮರ್ಶಿಸಿರಿ. ಪ್ರತಿಯೊಂದು ನಿರೂಪಣೆಯಲ್ಲಿ (1) ಒಂದು ಪ್ರಶ್ನೆ, (2) ಒಂದು ಶಾಸ್ತ್ರವಚನ, ಮತ್ತು (3) ಪ್ರಕಾಶನದಿಂದ ತೋರಿಸಲಿಕ್ಕಾಗಿ ಒಂದು ಅಂಶವು ಒಳಗೂಡಿರಬೇಕು ಎಂಬುದನ್ನು ಒತ್ತಿಹೇಳಿರಿ. ಒಂದೆರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ. ಸುವಾರ್ತೆಯನ್ನು ಸಾರುವಾಗ ಬೈಬಲನ್ನು ಉಪಯೋಗಿಸುವಂತೆ ಎಲ್ಲರನ್ನು ಉತ್ತೇಜಿಸಿರಿ.
20 ನಿ: ಹೆತ್ತವರಿಂದ ಮಕ್ಕಳಿಗೆ ಯಾವುದರ ಆವಶ್ಯಕತೆಯಿದೆ? ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್) ಎಂಬ ಪುಸ್ತಕದ 6-7ನೇ ಪುಟಗಳ ಮೇಲಾಧಾರಿತವಾದ ಭಾಷಣ. ಮಕ್ಕಳು ಸತ್ಯಾರಾಧನೆಯ ಹಿಂದಿರುವ ಬೈಬಲ್ ಮೂಲತತ್ತ್ವಗಳನ್ನು ಕಲಿಯುವುದು ಮತ್ತು ತರಬೇತುಗೊಳಿಸುವ ಕಾರ್ಯಗತಿಯಲ್ಲಿ ಹೆತ್ತವರಿಂದ ವಹಿಸಲ್ಪಡುವ ಪ್ರಮುಖ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಅತ್ಯಾವಶ್ಯಕವಾದದ್ದಾಗಿದೆ. ಪುಸ್ತಕದ ಅಧ್ಯಯನ ಮಾಡಲಿಕ್ಕಾಗಿರುವ ಸೂಚನೆಗಳನ್ನು ಚರ್ಚಿಸಿರಿ. ಹೆತ್ತವರು ಈ ಅಧ್ಯಯನ ಸಹಾಯಕವನ್ನು ಹೇಗೆ ಉಪಯೋಗಿಸುತ್ತಿದ್ದಾರೆ ಎಂಬುದರ ಕುರಿತು ಹೇಳಿಕೆ ನೀಡುವಂತೆ ಅವರನ್ನು ಆಮಂತ್ರಿಸಿರಿ. ತಮಗೆ ಈ ಪ್ರಕಾಶನವು ಏಕೆ ತುಂಬ ಹಿಡಿಸುತ್ತದೆ ಎಂಬುದನ್ನು ಒಬ್ಬರು ಅಥವಾ ಇಬ್ಬರು ಮಕ್ಕಳು ತಿಳಿಸುವಂತೆ ಏರ್ಪಡಿಸಿರಿ.
ಗೀತೆ 65 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.