ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2005ರ ಜೂನ್ 27ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2005ರ ಮೇ 2ರಿಂದ ಜೂನ್ 27ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ಉಲ್ಲೇಖಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಉಪಮಾಲಂಕಾರಗಳು ಮತ್ತು ರೂಪಕಾಲಂಕಾರಗಳು ಏಕೆ ಪ್ರಬಲವಾದ ಬೋಧನಾ ವಿಧಾನಗಳಾಗಿವೆ? (ಆದಿ. 22:17; ಕೀರ್ತ. 1:3; ಯಾಕೋ. 3:6) [be-KA ಪು. 240 ಪ್ಯಾರ. 2-4, ಚೌಕ]
2. ಅತ್ಯುಪಯುಕ್ತವಾದ ಪಾಠಗಳನ್ನು ಕಲಿಸುವ ಉದಾಹರಣೆಗಳನ್ನು ನಾವು ಎಲ್ಲಿ ಕಂಡುಕೊಳ್ಳಬಲ್ಲೆವು, ಆದರೆ ಈ ವಿಷಯದಲ್ಲಿ ಯಾವ ಜಾಗ್ರತೆಯನ್ನು ವಹಿಸಬೇಕು? [be-KA ಪು. 242 ಪ್ಯಾರ. 1-2]
3. ನಾವು ದೃಷ್ಟಾಂತಗಳನ್ನು ಆರಿಸಿಕೊಳ್ಳುವಾಗ ಅವು ಅತಿ ಹೆಚ್ಚು ಪರಿಣಾಮಕಾರಿಯಾಗಿರಬೇಕಾದರೆ ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು? [be-KA ಪು. 244 ಪ್ಯಾರ. 1-2]
4. ನಾವು ನಮ್ಮ ಬೋಧಿಸುವಿಕೆಯಲ್ಲಿ ದೃಶ್ಯ ಸಾಧನಗಳನ್ನು ಏಕೆ ಉಪಯೋಗಿಸಬೇಕು, ಮತ್ತು ಇದನ್ನು ಯೆಹೋವನು ಹೇಗೆ ಮಾಡಿದ್ದಾನೆ? [be-KA ಪು. 247 ಪ್ಯಾರ. 1-2, ಚೌಕ]
5. ನಾವು ಕ್ಷೇತ್ರ ಶುಶ್ರೂಷೆಯಲ್ಲಿ ದೃಶ್ಯ ಸಾಧನಗಳನ್ನು ಹೇಗೆ ಉಪಯೋಗಿಸಬಲ್ಲೆವು? [be-KA ಪು. 248 ಪ್ಯಾರ. 1-ಪು. 249 ಪ್ಯಾರ. 2]
ನೇಮಕ ನಂ. 1
6. ಮಕ್ಕಳ ಶಿಕ್ಷಣದ ವಿಷಯದಲ್ಲಿ ದೇವರ ವಾಕ್ಯದಲ್ಲಿ ಯಾವ ನಿರ್ದೇಶನವಿದೆ? [w-KA03 3/15 ಪು. 12 ಪ್ಯಾರ. 2; ಪು. 14 ಪ್ಯಾರ. 4]
7. ಯೆಹೋವನು ಯುವ ದಾವೀದನಲ್ಲಿ ಆಸಕ್ತಿಯನ್ನು ತೋರಿಸಿದ್ದು ಹೇಗೆ, ಮತ್ತು ದಾವೀದನು ಯೆಹೋವನಲ್ಲಿ ಆಸಕ್ತಿಯನ್ನು ತೋರಿಸಿದ್ದು ಹೇಗೆ? [w-KA03 4/15 ಪು. 29 ಪ್ಯಾರ. 4; ಪು. 30 ಪ್ಯಾರ. 3]
8. ಯೆಹೋವನು ಹೇಬೆಲನ ಯಜ್ಞವನ್ನು ಗಮನಿಸಿ ಮೆಚ್ಚಿದ್ದೇಕೆ, ಮತ್ತು ಇದು ನಮಗೆ ಯಾವ ಖಾತ್ರಿಯನ್ನು ಕೊಡುತ್ತದೆ? (ಆದಿ. 4:4) [w-KA03 5/1 ಪು. 28 ಪ್ಯಾರ. 4-ಪು. 29 ಪ್ಯಾರ. 1]
9. ಜ್ಞಾನೋಕ್ತಿ 3:11ರಲ್ಲಿ ನಾವು ತಾತ್ಸಾರಮಾಡಬಾರದೆಂದು ಉತ್ತೇಜಿಸಲ್ಪಟ್ಟಿರುವ “ಯೆಹೋವನ ಶಿಸ್ತು” (NW) ಯಾವುದಾಗಿದೆ? [w-KA03 10/1 ಪು. 20 ಪ್ಯಾರ. 2-4]
10. ಒಂದನೇ ತಿಮೊಥೆಯ 6:6-8ರಲ್ಲಿ ಉಪಯೋಗಿಸಲ್ಪಟ್ಟಿರುವ “[ಸ್ವ]ಸಂತುಷ್ಟಿ” ಎಂಬುದರ ಅರ್ಥವೇನಾಗಿದೆ? [w-KA03 6/1 ಪು. 9 ಪ್ಯಾರ. 1-2; ಪು. 10 ಪ್ಯಾರ. 1]
ಸಾಪ್ತಾಹಿಕ ಬೈಬಲ್ ವಾಚನ
11. ಯೋನಾತಾನ ಮತ್ತು ದಾವೀದನ ಮಧ್ಯೆಯಿದ್ದ ಪ್ರೀತಿಯ ಐಕ್ಯಗೊಳಿಸುವ ಬಂಧವು ಏನನ್ನು ಮುನ್ಚಿತ್ರಿಸಿತು? (2 ಸಮು. 1:26) [w-KA89 6/1 ಪು. 26 ಪ್ಯಾರ. 13]
12. ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ತರಿಸುವ ದಾವೀದನ ಮೊದಲ ಯತ್ನದಿಂದ ನಾವೇನನ್ನು ಕಲಿಯಬಲ್ಲೆವು? (2 ಸಮು. 6:2-9)
13. ತಂದೆಯ ಪಾಪದ ದೆಸೆಯಿಂದ ಮಗನು ಸಾಯಬಾರದು ಎಂದು ಧರ್ಮೋಪದೇಶಕಾಂಡ 24:16 ಮತ್ತು ಯೆಹೆಜ್ಕೇಲ 18:20 ಹೇಳುವುದಾದರೂ, ದಾವೀದ ಮತ್ತು ಬತ್ಷೆಬೆಯು ಪಾಪಮಾಡಿದ ಅನಂತರ ಅವರಿಗೆ ಹುಟ್ಟಿದ ಮಗು ಏಕೆ ಸಾಯಬೇಕಾಯಿತು? (2 ಸಮು. 12:14; 22:31)
14. ಮೆಫೀಬೋಶೆತನ ಬಗ್ಗೆ ಚೀಬನು ಹೇಳಿದ ವಿಷಯವು ಸುಳ್ಳಾಗಿತ್ತು ಎಂಬುದು ನಮಗೆ ಹೇಗೆ ಗೊತ್ತು? (2 ಸಮು. 16:1-4)
15. ಚೀಬನಿಂದಾಗಿ ಎದುರಾದ ಸನ್ನಿವೇಶಕ್ಕೆ ಮೆಫೀಬೋಶೆತನು ತೋರಿಸಿದ ಪ್ರತಿಕ್ರಿಯೆಯು ನಮಗೆ ಹೇಗೆ ಒಂದು ಉತ್ತಮ ಮಾದರಿಯಾಗಿದೆ? (2 ಸಮು. 19:24-30)