ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ. - ಜೂನ್
“ದೈಹಿಕ ಶ್ರಮದ ಕೆಲಸವು ತಮ್ಮ ಅಂತಸ್ತಿಗೆ ಕಡಿಮೆಯಾಗಿದೆ ಎಂದು ಅನೇಕರು ನೆನಸುತ್ತಾರೆ. ಆದರೆ, ನಾವು ಪ್ರಯಾಸಪಟ್ಟು ಕೆಲಸಮಾಡಬೇಕೆಂದು ಶಾಸ್ತ್ರವಚನಗಳು ನಮ್ಮನ್ನು ಉತ್ತೇಜಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ಅನಂತರ ಪ್ರಸಂಗಿ 2:24ನ್ನು ಓದಿ. ಪುಟ 20ರಲ್ಲಿರುವ ಲೇಖನವನ್ನು ತೆರೆಯಿರಿ.] ಪ್ರಯಾಸಪಟ್ಟು ಕೆಲಸಮಾಡುವುದು ಮತ್ತು ದೈಹಿಕ ಶ್ರಮದ ಬಗ್ಗೆ ಪ್ರಾಮುಖ್ಯವಾಗಿ ಯುವ ಜನರಿಗಿರಬೇಕಾದ ದೃಷ್ಟಿಕೋನವನ್ನು ಈ ಲೇಖನವು ಚರ್ಚಿಸುತ್ತದೆ.”
ಕಾವಲಿನಬುರುಜು ಜೂನ್15
“ನಮ್ಮಲ್ಲಿ ಹೆಚ್ಚಿನವರು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಕೆಲಸಮಾಡುವುದರಲ್ಲಿಯೇ ಕಳೆಯುತ್ತೇವೆ. ಕೆಲವರು ಇದನ್ನು ಆಶೀರ್ವಾದವೆಂದು ಭಾವಿಸುತ್ತಾರೆ; ಇತರರು ಇದನ್ನು ಶಾಪವೆಂದು ನೆನಸುತ್ತಾರೆ. ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಪ್ರಸಂಗಿ 2:24ನ್ನು ಓದಿ.] ಕೆಲಸದ ಬಗ್ಗೆ ಒಂದು ಸಮತೂಕ ದೃಷ್ಟಿಕೋನವನ್ನು ಇಟ್ಟುಕೊಳ್ಳುವಂತೆ ಬೈಬಲ್ ನಮಗೆ ಹೇಗೆ ಸಹಾಯಮಾಡುತ್ತದೆ ಎಂಬುದನ್ನು ಈ ಪತ್ರಿಕೆಯು ತಿಳಿಸುತ್ತದೆ. ಕೆಲಸಕ್ಕೆ ಸಂಬಂಧಿಸಿದ ಒತ್ತಡವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಸಹ ಇದು ಚರ್ಚಿಸುತ್ತದೆ.”
ಎಚ್ಚರ! ಜುಲೈ - ಸೆಪ್ಟೆಂ.
“ತಮ್ಮ ಮಕ್ಕಳಿಗೆ ಏನನ್ನು ವೀಕ್ಷಿಸಲು ಅನುಮತಿಸಬೇಕು ಎಂಬ ವಿಷಯದಲ್ಲಿ ಹೆಚ್ಚಿನ ಹೆತ್ತವರು ಆಯ್ಕೆಮಾಡುವವರಾಗಿರುತ್ತಾರೆ. ನಿಮ್ಮ ಕುಟುಂಬವು ವೀಕ್ಷಿಸಲು ಯೋಗ್ಯವಾಗಿರುವ ಚಲನಚಿತ್ರವನ್ನು ಕಂಡುಕೊಳ್ಳುವುದು ಒಂದು ಪಂಥಾಹ್ವಾನವಾಗಿದೆಯೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ ಎಫೆಸ 4:17ನ್ನು ಓದಿ.] ಯೋಗ್ಯವಾದ ಮನೋರಂಜನೆಯನ್ನು ಆಯ್ಕೆಮಾಡುವಂತೆ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯಮಾಡಸಾಧ್ಯವಿದೆ ಎಂಬುದನ್ನು ಈ ಪತ್ರಿಕೆಯು ಪರಿಗಣಿಸುತ್ತದೆ.”
ಕಾವಲಿನಬುರುಜು ಜುಲೈ1
“ಯಶಸ್ವಿಕರವಾದ ಜೀವನವನ್ನು ನಡೆಸುತ್ತಿರುವವರಂತೆ ತೋರಿದರೂ ತಮ್ಮ ಜೀವನದಲ್ಲಿ ಏನನ್ನೊ ಕಳೆದುಕೊಂಡವರಂತಿರುವ ಜನರನ್ನು ನಾವೆಲ್ಲರು ತಿಳಿದಿದ್ದೇವೆ. ಅವರು ಏನನ್ನು ಹುಡುಕುತ್ತಿದ್ದಾರೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಮತ್ತಾಯ 5:3ನ್ನು ಓದಿ.] ಆಂತರಿಕ ಶಾಂತಿಯನ್ನು ಗಳಿಸಲು ಪ್ರಾಮುಖ್ಯವಾಗಿರುವ ಕೀಲಿಕೈಯ ಕುರಿತು ಈ ಪತ್ರಿಕೆಯು ಚರ್ಚಿಸುತ್ತದೆ. ಆ ಕೀಲಿಕೈ, ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸುವುದೇ ಆಗಿದೆ.”