ಜೋಪಾನವಾಗಿಡಿ
ಸೂಚಿತ ಬ್ರೋಷರ್ ನಿರೂಪಣೆಗಳು
ಬ್ರೋಷರ್ಗಳನ್ನು ನೀಡಲಿಕ್ಕಾಗಿ ನಿರೂಪಣೆಗಳನ್ನು ತಯಾರಿಸಲು ನಿಮಗೆ ಸಹಾಯಮಾಡುವ ಸಲುವಾಗಿ ಈ ಪುರವಣಿಯಲ್ಲಿ ಅನೇಕ ಸೂಚನೆಗಳು ನೀಡಲ್ಪಟ್ಟಿವೆ. ಸ್ಥಳಿಕ ಸನ್ನಿವೇಶಗಳಿಗನುಸಾರ ಇವುಗಳನ್ನು ಹೊಂದಿಸಿಕೊಳ್ಳಬಹುದು. ಇತರ ನಿರೂಪಣೆಗಳನ್ನು ಸಹ ಉಪಯೋಗಿಸಬಹುದು. ಮಾತ್ರವಲ್ಲದೆ, ಇಲ್ಲಿ ಸೂಚಿಸಲ್ಪಟ್ಟಿರುವ ನಿರೂಪಣೆಗಳನ್ನು ಮಾದರಿಯಾಗಿ ಉಪಯೋಗಿಸುತ್ತಾ ಈ ಪುರವಣಿಯಲ್ಲಿ ಕೊಡಲ್ಪಟ್ಟಿರದ ಬ್ರೋಷರ್ಗಳ ನಿರೂಪಣೆಗಳನ್ನು ಸಹ ತಯಾರಿಸಸಾಧ್ಯವಿದೆ.—ಜನವರಿ 2005ರ ನಮ್ಮ ರಾಜ್ಯದ ಸೇವೆ ಪುಟ 8ನ್ನು ನೋಡಿ.
ಈ ಪುಟದಲ್ಲಿರುವ ಪ್ರತಿಯೊಂದು ಸೂಚಿತ ನಿರೂಪಣೆಗಳಲ್ಲಿಯೂ, (1) ಸಂಭಾಷಣೆಯನ್ನು ಆರಂಭಿಸಲು ಒಂದು ವಿಚಾರಪ್ರೇರಕ ಪ್ರಶ್ನೆ, (2) ಮಾತಾಡಲು ಬೇಕಿರುವ ಹೆಚ್ಚಿನ ಅಂಶಗಳು ಬ್ರೋಷರಿನಲ್ಲಿ ಎಲ್ಲಿ ಕಂಡುಕೊಳ್ಳಬಲ್ಲೆವೆಂಬ ಸೂಚನೆ ಮತ್ತು (3) ಚರ್ಚೆಯ ಸಮಯದಲ್ಲಿ ಓದಸಾಧ್ಯವಿರುವ ಒಂದು ಸೂಕ್ತವಾದ ವಚನ ಇದೆ. ನಿರೂಪಣೆಯ ಉಳಿದ ಭಾಗವನ್ನು, ವ್ಯಕ್ತಿಯ ಪ್ರತಿಕ್ರಿಯೆಗೆ ಹೊಂದಿಕೆಯಲ್ಲಿ ನೀವು ನಿಮ್ಮ ಸ್ವಂತ ಮಾತುಗಳಲ್ಲಿ ಹೇಳಬಹುದು.
ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್)
“ನಮ್ಮ ಪ್ರಿಯ ಜನರು ಸತ್ತಾಗ, ಅವರು ಎಲ್ಲಿದ್ದಾರೆ ಮತ್ತು ಮುಂದೆಂದಾದರೂ ನಾವು ಅವರನ್ನು ಪುನಃ ನೋಡುವೆವೊ ಎಂದು ನೆನಸುವುದು ಸ್ವಾಭಾವಿಕ. ಈ ರೀತಿಯ ಪ್ರಶ್ನೆಗಳು ನಿಮ್ಮ ಮನಸ್ಸಿಗೆ ಬಂದಿವೆಯೊ?”—ಕೊನೆಯ ಪುಟದಲ್ಲಿರುವ ಪ್ರಶ್ನೆಗಳು; ಯೋಬ 14:14, 15.
ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್)
“ನಮ್ಮಲ್ಲಿ ಹೆಚ್ಚಿನವರಿಗೆ, ‘ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ’ ಎಂದು ಆರಂಭವಾಗುವ ಪ್ರಾರ್ಥನೆಯು ತಿಳಿದಿದೆ. (ಮತ್ತಾ. 6:10) ನಮ್ಮ ರಕ್ಷಣೆಯು ಆ ನಾಮವನ್ನು ತಿಳಿದುಕೊಳ್ಳುವುದರ ಮೇಲೆ ಅವಲಂಬಿಸಿದೆ ಎಂಬುದು ನಿಮಗೆ ತಿಳಿದಿದೆಯೊ?”—ಪು. 28, ಪ್ಯಾರ. 1; ರೋಮಾ. 10:13.
ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ . . .
“ಮರಣದಲ್ಲಿ ತಮ್ಮ ಪ್ರಿಯ ಜನರನ್ನು ಕಳೆದುಕೊಂಡ ಕೋಟ್ಯಂತರ ಜನರಿಗೆ ಸಾಂತ್ವನ ಮತ್ತು ನಿರೀಕ್ಷೆಯನ್ನು ನೀಡಿರುವ ಈ ಬ್ರೋಷರನ್ನು ನಾವು ಇಂದು ಹಂಚುತ್ತಿದ್ದೇವೆ. ಸತ್ತವರಿಗೆ ಯಾವ ನಿರೀಕ್ಷೆಯಿದೆ ಎಂಬುದರ ಕುರಿತು ನೀವೆಂದಾದರೂ ಯೋಚಿಸಿದ್ದುಂಟೊ?”—ಪು. 27, ಪ್ಯಾರ. 3; ಯೋಹಾ. 5:28, 29.
“ಮರಣದಲ್ಲಿ ತಮ್ಮ ಪ್ರಿಯ ವ್ಯಕ್ತಿಗಳನ್ನು ಕಳೆದುಕೊಂಡಿರುವವರಿಗೆ ಹೇಗೆ ಸಾಂತ್ವನ ನೀಡುವುದು ಎಂಬುದರ ಕುರಿತು ನೀವು ಎಂದಾದರೂ ಯೋಚಿಸಿದ್ದೀರೊ?”—ಪು. 20, ಪ್ಯಾರ. 1; ಜ್ಞಾನೋ. 17:17.
ನೀವು ತ್ರಯೈಕ್ಯವನ್ನು ನಂಬ ಬೇಕೋ?
“ದೇವರ ಕುರಿತಾಗಿ ಜನರಿಗೆ ವಿಭಿನ್ನ ದೃಷ್ಟಿಕೋನಗಳಿವೆ. ನಾವು ಏನನ್ನು ನಂಬುತ್ತೇವೊ ಅದು ನಿಜವಾಗಿಯೂ ಪ್ರಾಮುಖ್ಯವಾಗಿದೆ ಎಂದು ನೀವು ನೆನಸುತ್ತೀರೊ?”—ಪು. 3, ಪ್ಯಾರ. 3, 7-8; ಯೋಹಾ. 17:3.
ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್)
“ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಕಂಡುಕೊಳ್ಳಲಿಕ್ಕಾಗಿ ಅನೇಕ ಜನರು ಹಾತೊರೆಯುತ್ತಾರೆ. ಆದರೆ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಲ್ಲ ಒಂದು ಸರಕಾರವು ಎಂದಾದರೂ ಸ್ಥಾಪನೆಯಾಗಬಹುದೆಂದು ನೀವು ನೆನಸುತ್ತೀರೊ?”—ಪು. 3, ಪ್ಯಾರ. 1; ಮತ್ತಾ. 6:9, 10.
ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!
“ನಿತ್ಯಜೀವವನ್ನು ಆನಂದಿಸಲು ಸ್ವರ್ಗಕ್ಕೆ ಹೋಗಬೇಕಾಗಿದೆ ಎಂದು ಅನೇಕರು ನೆನಸುತ್ತಾರೆ. ಆದರೆ ಭೂಮಿಯಲ್ಲಿಯೇ ಸದಾಜೀವಿಸುವ ಕುರಿತಾಗಿ ನೀವು ಏನು ನೆನಸುತ್ತೀರಿ?”—ಆವರಣ ಪುಟದಲ್ಲಿನ ಚಿತ್ರ; ಪ್ರಕ. 21:4.
ಸಂತೃಪ್ತಿಕರವಾದ ಜೀವನ —ಲಭ್ಯವಾಗುವ ವಿಧ
“ಲೋಕದ ಸುತ್ತಲೂ ಇರುವ ಜನರು ಒಂದು ಉತ್ತಮ ಜೀವನಕ್ಕಾಗಿ ಹುಡುಕುತ್ತಿದ್ದಾರೆ. ಆದರೆ, ನಿಜವಾಗಿಯೂ ಸಂತೃಪ್ತಿಕರವಾದ ಜೀವನವನ್ನು ಗಳಿಸಲು ಸಾಧ್ಯವಿದೆ ಎಂದು ನೀವು ನೆನಸುತ್ತೀರೊ?”—ಪು. 29, ಪ್ಯಾರ. 6; 2 ಪೇತ್ರ 3:13.
ಸಕಲ ಜನರಿಗಾಗಿರುವ ಒಂದು ಗ್ರಂಥ
“ಬೈಬಲಿನಲ್ಲಿ ನಮ್ಮ ದಿನಕ್ಕೆ ಪ್ರಾಯೋಗಿಕವಾಗಿರುವ ಸಲಹೆಗಳಿವೆ ಎಂದು ನೀವು ನೆನಸುತ್ತೀರೊ?”—ಪು. 22, ಶೀರ್ಷಿಕೆ ಬರಹ; ಪು. 23, ಚೌಕದಲ್ಲಿರುವ 3ನೇ ಪ್ಯಾರಗ್ರಾಫ್; ಜ್ಞಾನೋ. 25:11.