ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?
ಎಂಬ ಬ್ರೋಷರನ್ನು ನೀಡಲು ಸಲಹೆಗಳು
ವಾರ್ತಾಪತ್ರಿಕೆಯಲ್ಲಿ ಬಂದಿರುವ ಯಾವುದಾದರೊಂದು ದುಃಖಕರ ಸಂಗತಿಯನ್ನು ತಿಳಿಸಿದ ನಂತರ ನೀವು ಹೀಗೆ ಹೇಳಬಹುದು:
“ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುವುದಾದರೆ ಮನುಷ್ಯರು ಕಷ್ಟಾನುಭವಿಸುವಂತೆ ಏಕೆ ಅನುಮತಿಸಿದ್ದಾನೆ ಎಂಬುದಾಗಿ ನೀವು ಎಂದಾದರೂ ಯೋಚಿಸಿದ್ದೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಆ ಪ್ರಶ್ನೆಗೆ ತೃಪ್ತಿಕರವಾದ ಉತ್ತರವನ್ನು ಈ ಬ್ರೋಷರ್ ಒದಗಿಸುತ್ತದೆ ಮತ್ತು ಹತ್ತಿರದ ಭವಿಷ್ಯತ್ತಿನಲ್ಲಿ ದೇವರು ಏನು ಮಾಡಲಿದ್ದಾನೆ ಎಂಬುದನ್ನು ತಿಳಿಸುತ್ತದೆ. [ಪುಟ 27ರಲ್ಲಿರುವ ಚಿತ್ರವನ್ನು ತೋರಿಸಿರಿ ಮತ್ತು ಪ್ಯಾರಗ್ರಾಫ್ 22ರಲ್ಲಿರುವ ಕೀರ್ತನೆ 145:16ನ್ನು ಓದಿ.] ಮಾನವಕುಲವು ಈಗಾಗಲೇ ಅನುಭವಿಸಿರುವ ಕಷ್ಟಸಂಕಟಗಳನ್ನು ದೇವರು ಹೇಗೆ ತೆಗೆದುಹಾಕುವನು? ಈ ಪ್ರಶ್ನೆಯನ್ನು ನಾನು ನನ್ನ ಮುಂದಿನ ಭೇಟಿಯಲ್ಲಿ ಉತ್ತರಿಸಲು ಬಯಸುತ್ತೇನೆ.” ಬ್ರೋಷರನ್ನು ನೀಡಿ, ಪುನರ್ಭೇಟಿಗಾಗಿ ಏರ್ಪಡು ಮಾಡಿರಿ.
ಪುನರ್ಭೇಟಿಯ ಸಮಯದಲ್ಲಿ, ನೀವು ಹೀಗೆ ಹೇಳಬಹುದು:
“ಹಿಂದಿನ ಬಾರಿ ನಾನು ನಿಮ್ಮನ್ನು ಭೇಟಿಮಾಡಿದಾಗ ನಾವು ಈ ವಚನವನ್ನು ಓದಿದೆವು. [ಕೀರ್ತನೆ 145:16ನ್ನು ಓದಿ ಅಥವಾ ಉಲ್ಲೇಖಿಸಿ.] ನಂತರ ನಾನು ಈ ಪ್ರಶ್ನೆಯನ್ನು ನಿಮಗೆ ಕೇಳಿದ್ದೆ: ಮಾನವಕುಲವು ಈಗಾಗಲೇ ಅನುಭವಿಸಿರುವ ಕಷ್ಟಸಂಕಟಗಳನ್ನು ದೇವರು ಹೇಗೆ ತೆಗೆದುಹಾಕುವನು?” ಮನೆಯವನು ತನ್ನ ಬ್ರೋಷರನ್ನು ತರುವಂತೆ ಹೇಳಿ. ನಂತರ 27-8ನೇ ಪುಟಗಳಿಗೆ ತಿರುಗಿಸಿರಿ ಮತ್ತು 23-5ನೇ ಪ್ಯಾರಗ್ರಾಫ್ಗಳನ್ನು ಪರಿಗಣಿಸಿರಿ. ಬೈಬಲ್ ಅಧ್ಯಯನದ ಪ್ರಸ್ತಾಪವನ್ನು ಮಾಡಿ, ಅಥವಾ ಮುಂದಿನ ಭೇಟಿಯಲ್ಲಿ 26-7ನೇ ಪ್ಯಾರಗ್ರಾಫ್ಗಳನ್ನು ಪರಿಗಣಿಸಲು ಏರ್ಪಾಡು ಮಾಡಿರಿ.
ಒಬ್ಬ ಹದಿವಯಸ್ಕ ಪ್ರಚಾರಕನು ಹೀಗೆ ಹೇಳಬಹುದು:
“ಮುಂದೆ 10 ಅಥವಾ 15 ವರುಷಗಳ ನಂತರ ಲೋಕವು ಹೇಗಿರಬಹುದು ಎಂಬುದರ ಕುರಿತು ನನ್ನ ವಯಸ್ಸಿನ ಅನೇಕ ಜನರು ಚಿಂತಿಸುತ್ತಾರೆ. ನಿಮಗೆ ಏನನಿಸುತ್ತದೆ? ಆಗ ಜೀವನವು ಹೇಗಿರಬಹುದು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇಂದು ನಾವು ನೋಡುತ್ತಿರುವ ಸಮಸ್ಯೆಗಳು, ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ. [2 ತಿಮೊಥೆಯ 3:1-3ನ್ನು ಓದಿ.] ಇಲ್ಲಿರುವ ಪ್ರಶ್ನೆಗಳಿಗೆ ಈ ಬ್ರೋಷರ್ ಉತ್ತರಗಳನ್ನು ಒದಗಿಸುತ್ತದೆ. [ಮುಖ ಪುಟದಲ್ಲಿರುವ ಪ್ರಶ್ನೆಗಳನ್ನು ಓದಿ, ಬ್ರೋಷರನ್ನು ನೀಡಿರಿ.] ಮುಂದಿನ ಬಾರಿ ನಾನು ನಿಮ್ಮನ್ನು ಭೇಟಿಯಾಗುವಾಗ ನೀವು ಕೆಲವು ನಿಮಿಷಗಳನ್ನು ನೀಡುವುದಾದರೆ, ರೋಗ ಮತ್ತು ವೃದ್ಧಾಪ್ಯವು ಹೇಗೆ ಇಲ್ಲದೆ ಹೋಗಲಿದೆ ಎಂಬುದರ ಬಗ್ಗೆ ಉತ್ತೇಜನದಾಯಕ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ.” ಪುನರ್ಭೇಟಿಗಾಗಿ ಏರ್ಪಾಡು ಮಾಡಿರಿ.
ನೀವು ಹಿಂದಿರುಗಿದಾಗ ಹೀಗೆ ಹೇಳಬಹುದು:
“ಹಿಂದಿನ ಬಾರಿ ನಾವು ಮಾತಾಡಿದಾಗ, ರೋಗ ಮತ್ತು ವೃದ್ಧಾಪ್ಯವು ಹೇಗೆ ಇಲ್ಲದೆ ಹೋಗಲಿದೆ ಎಂಬುದರ ಬಗ್ಗೆ ಉತ್ತೇಜನದಾಯಕ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ನಾನು ಹೇಳಿದ್ದೆ. ಆ ವಿಚಾರಗಳು ಇಲ್ಲಿವೆ.” ಮನೆಯವನು ತನ್ನ ಬ್ರೋಷರನ್ನು ತರುವಂತೆ ಹೇಳಿ ಮತ್ತು 23-4ನೇ ಪುಟಗಳಲ್ಲಿರುವ 6-7ನೇ ಪ್ಯಾರಗ್ರಾಫ್ಗಳನ್ನು ಓದಿ, ಚರ್ಚಿಸಿರಿ. ಮುಂದಿನ ಭೇಟಿಯಲ್ಲಿ 8-9ನೇ ಪ್ಯಾರಗ್ರಾಫ್ಗಳನ್ನು ಪರಿಗಣಿಸಲು ಏರ್ಪಾಡು ಮಾಡಿರಿ.
ಚಿಕ್ಕ ಹುಡುಗನೊಂದಿಗೆ (ಹುಡುಗಿಗೂ ಅನ್ವಯಿಸುತ್ತದೆ) ಕೆಲಸಮಾಡುತ್ತಿರುವಾಗ, ವಯಸ್ಕನು ತಮ್ಮಿಬ್ಬರನ್ನು ಮನೆಯವನಿಗೆ ಪರಿಚಯಪಡಿಸಿದ ನಂತರ ಹೀಗೆ ಹೇಳಬಹುದು:
“ನೀವು ಅನುಮತಿಸುವುದಾದರೆ, ________ ನಿಮಗಾಗಿ ಒಂದು ವಚನವನ್ನು ಓದಲು ಬಯಸುತ್ತಾನೆ. [ಹುಡುಗನು ಕೀರ್ತನೆ 37:29ನ್ನು ಓದಿ, ಸಂಕ್ಷಿಪ್ತ ಹೇಳಿಕೆಯನ್ನು ನೀಡುತ್ತಾನೆ.] ಮಾನವಕುಲಕ್ಕಾಗಿ ಮತ್ತು ಈ ಭೂಮಿಗಾಗಿರುವ ತನ್ನ ಉದ್ದೇಶವನ್ನು ದೇವರು ಹೇಗೆ ನೆರವೇರಿಸುವನು ಎಂಬುದರ ಕುರಿತು ಈ ಬ್ರೋಷರ್ ಚರ್ಚಿಸುತ್ತದೆ. [24-7ನೇ ಪುಟಗಳಲ್ಲಿರುವ ಚಿತ್ರಗಳನ್ನು ತೋರಿಸಿರಿ.] ನಾವು ಮುಂದಿನ ಬಾರಿ ನಿಮ್ಮನ್ನು ಭೇಟಿಮಾಡುವಾಗ, ಪುನರುತ್ಥಾನದ ಕುರಿತಾದ ಬೈಬಲಿನ ಅದ್ಭುತಕರ ವಾಗ್ದಾನವನ್ನು ನಾನು ನಿಮಗೆ ತೋರಿಸಲು ಬಯಸುತ್ತೇನೆ.” ಬ್ರೋಷರನ್ನು ನೀಡಿ, ಪುನರ್ಭೇಟಿಗಾಗಿ ಏರ್ಪಾಡು ಮಾಡಿರಿ.
ಪುನರ್ಭೇಟಿಯ ಸಮಯದಲ್ಲಿ, ವಯಸ್ಕನು ಹೀಗೆ ಹೇಳಬಹುದು:
“ನನ್ನ ಹಿಂದಿನ ಭೇಟಿಯಲ್ಲಿ, ನಾವು ಕೀರ್ತನೆ 37:29ನ್ನು ಓದಿದ್ದೆವು ಮತ್ತು ಪುನರುತ್ಥಾನದ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದನ್ನು ನಾನು ನಿಮಗೆ ತೋರಿಸಲು ಬಯಸುತ್ತೇನೆ ಎಂದು ಹೇಳಿದ್ದೆ. ಅದರ ಕುರಿತು ಇಲ್ಲಿ ಏನು ಹೇಳಿದೆಯೆಂದು ಗಮನಿಸಿ.” ಮನೆಯವನು ತನ್ನ ಬ್ರೋಷರನ್ನು ತರುವಂತೆ ಹೇಳಿ ಮತ್ತು 24-5ನೇ ಪುಟಗಳಲ್ಲಿರುವ 12-14ನೇ ಪ್ಯಾರಗ್ರಾಫ್ಗಳನ್ನು ಪರಿಗಣಿಸಿ. ಬೈಬಲ್ ಅಧ್ಯಯನದ ಪ್ರಸ್ತಾಪವನ್ನು ಮಾಡಿ, ಅಥವಾ ಮುಂದಿನ ಭೇಟಿಯಲ್ಲಿ 15-16ನೇ ಪ್ಯಾರಗ್ರಾಫ್ಗಳನ್ನು ಪರಿಗಣಿಸಲು ಏರ್ಪಾಡು ಮಾಡಿರಿ.