ಕ್ರೈಸ್ತೇತರರಿಗೆ ನೀಡಬಹುದಾದ ಬ್ರೋಷರ್ಗಳು
“ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ”
ಬೌದ್ಧ ಧರ್ಮದವನಾದ ಒಬ್ಬ ಹಿರಿಯ ವ್ಯಕ್ತಿಗೆ ನೀವು ಹೀಗೆ ಹೇಳಬಹುದು:
“ಈಗೀಗ ಹೆಚ್ಚಾಗುತ್ತಿರುವ ಕೀಳ್ಮಟ್ಟದ ವಿಚಾರಗಳು ಮತ್ತು ಅದರಿಂದ ನಮ್ಮ ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮದ ಕುರಿತು ನನ್ನಂತೆಯೇ ನೀವು ಸಹ ಚಿಂತಿತರಾಗಿರಬಹುದು. ಯುವ ಜನರ ಮಧ್ಯೆ ಅನೈತಿಕತೆಯು ಏಕೆ ಹೆಚ್ಚುತ್ತಿದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮುಸ್ಲಿಮ್, ಕ್ರಿಶ್ಚಿಯನ್, ಮತ್ತು ಹಿಂದೂ ಧರ್ಮಗಳು ಸ್ಥಾಪನೆಯಾಗುವ ಬಹಳ ಸಮಯದ ಹಿಂದೆಯೇ ಬರೆಯಲ್ಪಡಲು ಆರಂಭಿಸಲ್ಪಟ್ಟ ಪುಸ್ತಕವೊಂದರಲ್ಲಿ ಇದು ಮುಂತಿಳಿಸಲ್ಪಟ್ಟಿದೆ ಎಂಬುದು ನಿಮಗೆ ಗೊತ್ತಿದೆಯೊ? [2 ತಿಮೊಥೆಯ 3:1-3ನ್ನು ಓದಿರಿ.] ವಿದ್ಯೆಯನ್ನು ಅಥವಾ ಉಪದೇಶವನ್ನು ಪಡೆದುಕೊಳ್ಳಲಾಗುತ್ತಿರುವುದಾದರೂ, ಇಂತಹ ಪರಿಸ್ಥಿತಿಗಳು ಈಗಲೂ ಇವೆ. [ವಚನ 7ನ್ನು ಓದಿರಿ.] ಅನೇಕ ಜನರು ಎಂದಿಗೂ ಕಲಿಯದಿರುವಂತಹ ಸತ್ಯವನ್ನು ಅರ್ಥಮಾಡಿಕೊಳ್ಳಲು ಈ ಸಾಹಿತ್ಯವು ನನಗೆ ಸಹಾಯಮಾಡಿತು. ನೀವು ಇದನ್ನು ಓದಲು ಇಷ್ಟಪಡುತ್ತೀರೊ?”—km-KA 8/99 ಪುಟ 8.
ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ
ಒಬ್ಬ ಮುಸ್ಲಿಮ್ ವ್ಯಕ್ತಿಯೊಂದಿಗೆ ಮಾತಾಡುವಾಗ ನೀವು ಹೀಗೆ ಹೇಳಬಹುದು:
“ಮುಸ್ಲಿಮರೊಂದಿಗೆ ಮಾತಾಡುವ ವಿಶೇಷ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಮುಸ್ಲಿಮರು ಒಬ್ಬನೇ ಸತ್ಯ ದೇವರಲ್ಲಿ ಮತ್ತು ಎಲ್ಲ ಪ್ರವಾದಿಗಳಲ್ಲಿ ನಂಬಿಕೆಯಿಟ್ಟಿದ್ದಾರೆಂದು ನನಗೆ ತಿಳಿದಿದೆ. ನಾನು ಹೇಳುವುದು ಸರಿಯೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಭೂಮಿಯು ಒಂದು ಪರದೈಸವಾಗಿ ರೂಪಾಂತರಗೊಳ್ಳುವುದನ್ನು ಮುಂತಿಳಿಸುವ ಒಂದು ಪುರಾತನ ಪ್ರವಾದನೆಯ ಬಗ್ಗೆ ನಾನು ನಿಮ್ಮೊಂದಿಗೆ ಮಾತಾಡಲು ಬಯಸುತ್ತೇನೆ. ಇದರ ಕುರಿತು ಪ್ರವಾದಿಯು ಏನು ಬರೆದಿದ್ದಾನೊ ಅದನ್ನು ನಾನು ಓದಬಹುದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಯೆಶಾಯ 11:6-9ನ್ನು ಓದಿ.] ಈ ಬ್ರೋಷರಿನಲ್ಲಿ ಕಂಡುಬರುವ ಕುರಾನಿನ ಒಂದು ಉದ್ಧರಣೆಯನ್ನು ಈ ಪ್ರವಾದನೆಯು ನನ್ನ ನೆನಪಿಗೆ ತರುತ್ತದೆ.” ಪುಟ 9ಕ್ಕೆ ತಿರುಗಿಸಿರಿ ಮತ್ತು ದಪ್ಪಕ್ಷರದಲ್ಲಿರುವ ಉಲ್ಲೇಖವನ್ನು ಓದಿರಿ. ಆಸಕ್ತಿಯು ತೋರಿಸಲ್ಪಟ್ಟಲ್ಲಿ, ಪುಟ 8ರಲ್ಲಿರುವ ಪ್ಯಾರಗ್ರಾಫ್ 7-9ನ್ನು ಚರ್ಚಿಸುವ ಮೂಲಕ ಸಂಭಾಷಣೆಯನ್ನು ಮುಂದುವರಿಸಿರಿ.—km-KA 1/00 ಪುಟ 8.
ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?
ಯುವ ಪ್ರಾಯದ ಹಿಂದೂ ವ್ಯಕ್ತಿಗೆ ನೀವು ಹೀಗೆ ಹೇಳಬಹುದು:
“ನಿಮಗೆ ದೇವರಲ್ಲಿ ನಂಬಿಕೆಯಿದೆ ಎಂಬುದರಲ್ಲಿ ಸಂದೇಹವಿಲ್ಲ. ನಮಗಾಗಿ ದೇವರ ಉದ್ದೇಶವೇನೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಆದಿಕಾಂಡ 1:28ನ್ನು ಓದಿ.] ಅನೇಕ ಸ್ಥಳಗಳಲ್ಲಿ, ಭೂಮಿಯು ಮಿತಿಮೀರಿದ ಜನಸಂಖ್ಯೆಯಿಂದ ತುಂಬಿದೆ ಮತ್ತು ಅನೇಕ ಸಮಸ್ಯೆಗಳಿಗೆ ತುತ್ತಾಗಿದೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಸೃಷ್ಟಿಕರ್ತನು ನಮಗೆ ಸಹಾಯಮಾಡಲು ಸಿದ್ಧನಾಗಿದ್ದಾನೆಂದು ನೀವು ನೆನಸುತ್ತೀರೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಬ್ರೋಷರನ್ನು ನೀಡಿರಿ.—km-KA 9/99 ಪುಟ 8.
ಪ್ರೀತಿ ಮತ್ತು ಸತ್ಯದಲ್ಲಿ ದೇವರನ್ನು ಆರಾಧಿಸಬೇಕು ಏಕೆ? (ಇಂಗ್ಲಿಷ್)
ಕುಟುಂಬವಿರುವ ಹಿಂದೂ ವ್ಯಕ್ತಿಯೊಬ್ಬನಿಗೆ ಈ ನಿರೂಪಣೆಯು ಆಸಕ್ತಿಕರವಾಗಿರಬಹುದು:
“ಇಂದು ಅನೇಕ ದೇಶಗಳಲ್ಲಿ ಕುಟುಂಬ ಜೀವನವು ಯಾವ ಸ್ಥಿತಿಯಲ್ಲಿದೆಯೊ ಅದರ ಬಗ್ಗೆ ಚಿಂತಿತರಾಗಿರುವ ಜನರಿಗೆ ನಾನು ಭೇಟಿನೀಡುತ್ತಿದ್ದೇನೆ. ಕುಟುಂಬವನ್ನು ಐಕ್ಯವಾಗಿಡಲು ಯಾವುದು ಸಹಾಯಮಾಡುತ್ತದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಕುಟುಂಬದ ಬಗ್ಗೆ ಹಿಂದೂ ಗ್ರಂಥಗಳು ಏನು ಹೇಳುತ್ತವೆಂದು ಕೆಲವರಿಗೆ ತಿಳಿದಿದೆ, ಆದರೆ ಅದನ್ನು ಬೈಬಲಿನೊಂದಿಗೆ ಹೋಲಿಸಿ ನೋಡಲು ಅವರಿಗೆ ಸಂದರ್ಭ ದೊರಕಿರುವುದಿಲ್ಲ. ನಾನು ಈ ಒಂದು ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. [ಕೊಲೊಸ್ಸೆ 3:12-14ನ್ನು ಓದಿ.] ಈ ಬ್ರೋಷರ್, ಭಾರತದ ಪವಿತ್ರ ಗ್ರಂಥಗಳ ಬಗ್ಗೆ ಮತ್ತು ಬೈಬಲಿನ ಬಗ್ಗೆ ಪರೀಕ್ಷಿಸುತ್ತದೆ.” ಬ್ರೋಷರನ್ನು ನೀಡಿರಿ ಮತ್ತು ಪುಟ 8-9 ಹಾಗೂ 20-1ನ್ನು ಎತ್ತಿತೋರಿಸಿರಿ.—km-KA 9/99 ಪುಟ 8.
ಬಾಳುವ ಶಾಂತಿ ಮತ್ತು ಸಂತೋಷ—ಅವುಗಳನ್ನು ಕಂಡುಕೊಳ್ಳುವ ವಿಧ (ಇಂಗ್ಲಿಷ್)
ಚೈನೀಸ್ ವಿದ್ಯಾರ್ಥಿಗೆ ಸಾಕ್ಷಿನೀಡುವಾಗ ನೀವು ಹೀಗೆ ಹೇಳಬಹುದು:
“ವಿದ್ಯಾರ್ಥಿಗಳಲ್ಲಿ ನಾನು ಕಂಡುಕೊಂಡಿರುವ ಒಂದು ಸಾಮಾನ್ಯ ಆಸಕ್ತಿ ಏನೆಂದರೆ ಅವರೆಲ್ಲರೂ ತಮಗೆ ಶಾಂತಿ ಮತ್ತು ಸಂತೋಷ ಬೇಕೆಂದು ಬಯಸುತ್ತಾರೆ. ಇದು ಪ್ರಾಮುಖ್ಯವೆಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪುರಾತನ ಮಾತುಗಳು ನೆರವೇರುವುದನ್ನು ನೋಡುವುದು ಆನಂದಕರವಾಗಿ ಇರುವುದಲ್ಲವೇ?” ಕೀರ್ತನೆ 37:11ನ್ನು ಓದಿರಿ ಮತ್ತು ಬ್ರೋಷರನ್ನು ನೀಡಿ.—km-KA 2/98 ಪುಟ 5.
ಯುದ್ಧರಹಿತವಾದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್)
ಯೆಹೂದಿ ಧರ್ಮದ ವ್ಯಕ್ತಿಗೆ ಸಾಕ್ಷಿನೀಡುವಾಗ ನೀವು ಹೀಗೆ ಹೇಳಬಹುದು:
“ನಮ್ಮಲ್ಲಿ ಹೆಚ್ಚಿನವರಿಗೆ ತಮ್ಮ ಪ್ರಿಯರನ್ನು ಮರಣದಲ್ಲಿ ಕಳೆದುಕೊಂಡ ದುಃಖಕರ ಅನುಭವವಾಗಿದೆ. ನಾವು ಸತ್ತಾಗ ನಮಗೆ ಏನು ಸಂಭವಿಸುತ್ತದೆಂದು ನೀವು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಬ್ರೋಷರಿನ ಪುಟ 22ರಲ್ಲಿ ಕಂಡುಬರುವ “ಮರಣ ಮತ್ತು ಪ್ರಾಣ—ಇವುಗಳು ಏನಾಗಿವೆ?” ಎಂಬ ಶೀರ್ಷಿಕೆಯುಳ್ಳ ಚೌಕದ ಕಡೆಗೆ ಮನೆಯವನ ಗಮನವನ್ನು ತಿರುಗಿಸಿರಿ. ಪುನರುತ್ಥಾನದ ಕುರಿತಾಗಿ ಪುಟ 23ರಲ್ಲಿರುವ ಪ್ಯಾರಗ್ರಾಫ್ 17ನ್ನು ಓದಿ. ಪೂರ್ವಜನಾದ ಯೋಬನಿಗೆ ಪುನರುತ್ಥಾನದ ನಿರೀಕ್ಷೆಯಿತ್ತು ಎಂಬುದನ್ನು ತಿಳಿಸಿರಿ. ಬ್ರೋಷರನ್ನು ನೀಡಿ, ಮುಂದಿನ ಭೇಟಿಯಲ್ಲಿ ಪ್ಯಾರಗ್ರಾಫ್ 17ರ ಕೊನೆಯಲ್ಲಿ ಓದಲು ತಿಳಿಸಿರುವ ವಚನಗಳನ್ನು ಚರ್ಚಿಸಲು ಏರ್ಪಾಡು ಮಾಡಿರಿ.—km-KA 11/99 ಪುಟ 8.