ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಎಂಬ ಬ್ರೋಷರನ್ನು ನೀಡಲು ಸಲಹೆಗಳು
ಮನೆಯವನನ್ನು ವಂದಿಸಿದ ನಂತರ ನೀವು ಹೀಗೆ ಹೇಳಬಹುದು:
“ಇಂದು ಜೀವನದಲ್ಲಿ ತಪ್ಪಿಸಿಕೊಳ್ಳಲಾಗದ ಸಮಸ್ಯೆಗಳು ಮತ್ತು ನಿರಾಶೆಗಳು ಸೇರಿಕೊಂಡಿವೆ. ಜೀವನವು ಈ ರೀತಿಯಲ್ಲಿಯೇ ಇರಬೇಕೆಂದು ಉದ್ದೇಶಿಸಲ್ಪಟ್ಟಿತ್ತೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮಾನವಕುಲಕ್ಕಾಗಿ ಮತ್ತು ಈ ಭೂಮಿಗಾಗಿರುವ ದೇವರ ಮೂಲ ಉದ್ದೇಶವು ಭವಿಷ್ಯತ್ತಿನಲ್ಲಿ ನೆರವೇರಲಿದೆ ಎಂಬುದನ್ನು ಈ ಬ್ರೋಷರ್ ತೋರಿಸುತ್ತದೆ. [ಪುಟ 20-1ರಲ್ಲಿರುವ ಚಿತ್ರದ ಕುರಿತು ಚರ್ಚಿಸಿರಿ. ನಂತರ ಪ್ಯಾರಗ್ರಾಫ್ 9ನ್ನು ಓದಿ, ಯೆಶಾಯ 14:24 ಮತ್ತು 46:11ನ್ನು ಎತ್ತಿತೋರಿಸಿರಿ.] ಮುಂದಿನ ಬಾರಿ ನಾನು ಬಂದಾಗ, ದೇವರು ಭೂಮಿಯ ಮೇಲೆ ಪರದೈಸನ್ನು ಪುನಸ್ಸ್ಥಾಪಿಸುತ್ತಾನೆಂದು ಬೈಬಲಿನಲ್ಲಿ ಎಲ್ಲಿ ತಿಳಿಸುತ್ತದೆ ಎಂಬುದನ್ನು ನಿಮಗೆ ತೋರಿಸುತ್ತೇನೆ.” ಬ್ರೋಷರನ್ನು ನೀಡಿ, ಪುನರ್ಭೇಟಿಗಾಗಿ ಏರ್ಪಾಡು ಮಾಡಿರಿ.
ನೀವು ಹಿಂದಿರುಗಿ ಹೋದಾಗ, ಹೀಗೆ ಹೇಳಬಹುದು:
“ಪರದೈಸ್ ಭೂಮಿಯಲ್ಲಿ ಮನುಷ್ಯರು ಸದಾ ಜೀವಿಸಬೇಕೆಂಬುದೇ ದೇವರ ಉದ್ದೇಶವೆಂದು ಕಳೆದ ಬಾರಿ ನಾನು ನಿಮಗೆ ತಿಳಿಸಿದೆ. [ಪುಟ 20-1ರಲ್ಲಿರುವ ಚಿತ್ರವನ್ನು ಪುನಃ ತೋರಿಸಿ.] ಯೇಸು, ಪೇತ್ರ ಮತ್ತು ದಾವೀದರು ಪರದೈಸಿನ ಅಥವಾ ಪ್ರಮೋದವನದ ಕುರಿತು ಮಾತಾಡಿದರು ಎಂಬುದನ್ನು ಗಮನಿಸಿ.” ಮನೆಯವನು ತನ್ನ ಬ್ರೋಷರನ್ನು ತರುವಂತೆ ಹೇಳಿರಿ. ನಂತರ, ಪುಟ 21-2ಕ್ಕೆ ತಿರುಗಿಸಿ, ಪ್ಯಾರಗ್ರಾಫ್ 10-13ನ್ನು ಪರಿಗಣಿಸಿ. ಬೈಬಲ್ ಅಧ್ಯಯನದ ಪ್ರಸ್ತಾಪವನ್ನು ಮಾಡಿರಿ, ಅಥವಾ ಮುಂದಿನ ಭೇಟಿಯಲ್ಲಿ ಪುಟ 29-30ರಲ್ಲಿರುವ ಯಾವುದಾದರೊಂದು ಉಪಶೀರ್ಷಿಕೆಯನ್ನು ಪರಿಗಣಿಸಲು ಏರ್ಪಾಡು ಮಾಡಿರಿ.
ಒಬ್ಬ ಹದಿವಯಸ್ಕ ಪ್ರಚಾರಕನು ಹೀಗೆ ಹೇಳಬಹುದು:
“ನನ್ನ ವಯಸ್ಸಿನ ಅನೇಕ ಜನರು ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತರಾಗಿದ್ದಾರೆ. ಮುಂದಿನ ಸಂತತಿಗೆ ಜೀವನವು ಉತ್ತಮವಾಗಿರಬಹುದೆಂದು ನೀವು ಭಾವಿಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಎಲ್ಲ ಮಾನವರಿಗಾಗಿರುವ ಒಂದು ಉಜ್ವಲ ಭವಿಷ್ಯತ್ತಿನ ಕುರಿತು ಬೈಬಲ್ ತಿಳಿಸುತ್ತದೆ. [ಬ್ರೋಷರಿನ ಪುಟ 31ರಲ್ಲಿರುವ ಚಿತ್ರದ ಕಡೆಗೆ ತಿರುಗಿಸಿರಿ ಮತ್ತು ಅಲ್ಲಿರುವ ವಾಕ್ಯವನ್ನು ಓದಿರಿ. ನಂತರ 2 ಪೇತ್ರ 3:13ನ್ನು ಓದಿ.] ಈ ಬ್ರೋಷರ್ ಮಾನವಕುಲಕ್ಕೆ ದೇವರು ತರಲಿರುವ ಆಶೀರ್ವಾದಗಳ ಕುರಿತು ತಿಳಿಸುತ್ತದೆ. [ಪುಟ 29-30ರಲ್ಲಿ ದಪ್ಪಕ್ಷರದಲ್ಲಿರುವ ಉಪಶೀರ್ಷಿಕೆಗಳನ್ನು ಓದಿ, ಬ್ರೋಷರನ್ನು ನೀಡಿರಿ.] ನಿಮ್ಮನ್ನು ಪುನಃ ಭೇಟಿಮಾಡಿ, ಯುದ್ಧಗಳನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುವೆನೆಂದು ದೇವರು ಮಾಡಿರುವ ವಾಗ್ದಾನದ ಕುರಿತು ನಿಮಗೆ ತಿಳಿಸಲು ನಾನು ಇಷ್ಟಪಡುತ್ತೇನೆ.” ಪುನರ್ಭೇಟಿಗಾಗಿ ಏರ್ಪಾಡು ಮಾಡಿರಿ.
ನೀವು ಹಿಂದಿರುಗಿ ಹೋದಾಗ, ಹೀಗೆ ಹೇಳಬಹುದು:
“ಹಿಂದೆ ನಾನು ನಿಮ್ಮನ್ನು ಭೇಟಿಯಾದಾಗ, ಒಂದು ಭೂಪರದೈಸನ್ನು ಪುನಸ್ಸ್ಥಾಪಿಸುವ ದೇವರ ಉದ್ದೇಶದ ಕುರಿತು ನಿಮಗೆ ಸಂಕ್ಷಿಪ್ತವಾಗಿ ತಿಳಿಸಿದ್ದೆ. [ಪುಟ 31ರಲ್ಲಿರುವ ಚಿತ್ರವನ್ನು ಪುನಃ ತೋರಿಸಿರಿ.] ಯುದ್ಧಗಳನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುವ ದೇವರ ವಾಗ್ದಾನದ ಬಗ್ಗೆ ನಿಮಗೆ ಹೇಗನಿಸುತ್ತದೆ ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ.” ಮನೆಯವನು ತನ್ನ ಬ್ರೋಷರನ್ನು ತರುವಂತೆ ತಿಳಿಸಿ ಮತ್ತು ಪುಟ 29ರಲ್ಲಿರುವ 3-6 ಪ್ಯಾರಗ್ರಾಫ್ಗಳನ್ನು ಚರ್ಚಿಸಿರಿ. ಮುಂದಿನ ಭೇಟಿಯಲ್ಲಿ, 7-8ನೇ ಪ್ಯಾರಗ್ರಾಫ್ಗಳನ್ನು ಪರಿಗಣಿಸಲು ಏರ್ಪಾಡು ಮಾಡಿರಿ.
ಚಿಕ್ಕ ಹುಡುಗನೊಂದಿಗೆ (ಹುಡುಗಿಗೂ ಅನ್ವಯಿಸುತ್ತದೆ) ಕೆಲಸಮಾಡುತ್ತಿರುವಾಗ, ವಯಸ್ಕನು ತಮ್ಮಿಬ್ಬರನ್ನು ಮನೆಯವನಿಗೆ ಪರಿಚಯಪಡಿಸಿದ ನಂತರ ಹೀಗೆ ಹೇಳಬಹುದು:
“ನೀವು ಅನುಮತಿಸುವುದಾದರೆ, ________ ನಿಮಗಾಗಿ ಒಂದು ಚಿತ್ರವನ್ನು ತೋರಿಸಿ, ಬೈಬಲಿನಿಂದ ಒಂದು ವಚನವನ್ನು ಓದಲು ಬಯಸುತ್ತಾನೆ. [ಹುಡುಗನು ಚಿತ್ರವನ್ನು ತೋರಿಸುತ್ತಾನೆ ಮತ್ತು ಪುಟ 31ರಲ್ಲಿರುವ ವಾಕ್ಯವನ್ನು ಓದುತ್ತಾನೆ. ನಂತರ ಪ್ರಕಟನೆ 21:4ನ್ನು ಓದುತ್ತಾನೆ.] ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ದೇವರು ಏನು ಮಾಡುವನು ಎಂಬುದರ ಕುರಿತು ಈ ಬ್ರೋಷರ್ ವಿವರಣೆ ನೀಡುತ್ತದೆ. [ಪುಟ 29-30ರಲ್ಲಿ ದಪ್ಪಕ್ಷರದಲ್ಲಿರುವ ಉಪಶೀರ್ಷಿಕೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ ಮತ್ತು ಬ್ರೋಷರನ್ನು ನೀಡಿರಿ.] ನಾವು ಮುಂದಿನ ಬಾರಿ ನಿಮ್ಮನ್ನು ಭೇಟಿಮಾಡುವಾಗ, ಎಲ್ಲ ರೀತಿಯ ಆರೋಗ್ಯದ ಸಮಸ್ಯೆಗಳಿಗೆ ಸಂಭವಿಸಲಿರುವ ಅಂತ್ಯದ ಕುರಿತಾಗಿ ಬೈಬಲ್ ಏನು ಹೇಳುತ್ತದೆ ಎಂಬುದನ್ನು ನಾನು ನಿಮಗೆ ತೋರಿಸಲು ಬಯಸುತ್ತೇನೆ.”
ಪುನರ್ಭೇಟಿಯ ಸಮಯದಲ್ಲಿ, ವಯಸ್ಕನು ಹೀಗೆ ಹೇಳಬಹುದು:
“ನನ್ನ ಹಿಂದಿನ ಭೇಟಿಯಲ್ಲಿ, ಎಲ್ಲ ರೀತಿಯ ಆರೋಗ್ಯದ ಸಮಸ್ಯೆಗಳಿಗೆ ಸಂಭವಿಸಲಿರುವ ಅಂತ್ಯದ ಬಗ್ಗೆ ಬೈಬಲ್ ಏನು ಹೇಳುತ್ತದೆ ಎಂಬುದನ್ನು ನಿಮಗೆ ತೋರಿಸಲು ಬಯಸುತ್ತೇನೆ ಎಂದು ನಾನು ಹೇಳಿದ್ದೆ. ಅದರ ಕುರಿತು ಇಲ್ಲಿ ಏನು ಹೇಳಿದೆಯೆಂದು ಗಮನಿಸಿ.” ಮನೆಯವನು ತನ್ನ ಬ್ರೋಷರನ್ನು ತರುವಂತೆ ಹೇಳಿ ಮತ್ತು ಪುಟ 29ರಲ್ಲಿರುವ ಪ್ಯಾರಗ್ರಾಫ್ 9-14ನ್ನು ಪರಿಗಣಿಸಿ. ಬೈಬಲ್ ಅಧ್ಯಯನದ ಪ್ರಸ್ತಾಪವನ್ನು ಮಾಡಿ, ಅಥವಾ ಮುಂದಿನ ಭೇಟಿಯಲ್ಲಿ ಪ್ಯಾರಗ್ರಾಫ್ 15-17ನ್ನು ಪರಿಗಣಿಸಲು ಏರ್ಪಾಡು ಮಾಡಿರಿ.