ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಜುಲೈ ಮತ್ತು ಆಗಸ್ಟ್: ಈ ಮುಂದೆ ತಿಳಿಸಲ್ಪಟ್ಟಿರುವ ಯಾವುದೇ 32 ಪುಟಗಳ ಬ್ರೋಷರ್‌ಗಳನ್ನು ಉಪಯೋಗಿಸಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ಪರದೈಸನ್ನು ತರಲಿರುವ ಸರಕಾರ,a ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?,b ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಸೆಪ್ಟೆಂಬರ್: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? c ಬದಲಿ ನೀಡುವಿಕೆಯಾಗಿ ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ?d ಎಂಬ ಪುಸ್ತಕ ಅಥವಾ ಯಾವುದೇ 192 ಪುಟಗಳ ಹಳೆಯ ಪುಸ್ತಕಗಳನ್ನು ನೀಡಬಹುದು. ಮನೆಯವನು ಪುಸ್ತಕವನ್ನು ಸ್ವೀಕರಿಸದಿದ್ದರೆ, ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಿರಿ. ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಆಸಕ್ತಿಯು ತೋರಿಸಲ್ಪಟ್ಟಲ್ಲಿ ಅಪೇಕ್ಷಿಸು ಬ್ರೋಷರನ್ನು ದಯವಿಟ್ಟು ಪರಿಚಯಪಡಿಸಿರಿ.
◼ ಸೆಪ್ಟೆಂಬರ್ ತಿಂಗಳಿನಿಂದ ಆರಂಭಿಸಿ, ಸರ್ಕಿಟ್ ಮೇಲ್ವಿಚಾರಕರು “ಬೈಬಲಿನಿಂದ ಏಕೆ ಮಾರ್ಗದರ್ಶಿಸಲ್ಪಡಬೇಕು?” ಎಂಬ ಬಹಿರಂಗ ಭಾಷಣವನ್ನು ನೀಡುತ್ತಾರೆ.
◼ ರೆಗ್ಯುಲರ್ ಪಯನೀಯರ್ ಸೇವೆಯನ್ನು ಆರಂಭಿಸಲು ವಿನಂತಿಸಿಕೊಂಡಿರುವ ತಾರೀಖಿಗಿಂತ ಕಡಿಮೆಪಕ್ಷ 30 ದಿವಸಗಳ ಮುಂಚೆ ಅದರ ಅರ್ಜಿಗಳನ್ನು ಬ್ರಾಂಚ್ ಆಫೀಸಿಗೆ ಕಳುಹಿಸಬೇಕಾಗಿದೆ. ಈ ಅರ್ಜಿಗಳನ್ನು ಬ್ರಾಂಚ್ ಆಫೀಸಿಗೆ ಕಳುಹಿಸುವ ಮುನ್ನ, ಅವನ್ನು ಪೂರ್ಣವಾಗಿ ಭರ್ತಿಮಾಡಲಾಗಿದೆಯೊ ಎಂಬುದನ್ನು ಸಭಾ ಸೆಕ್ರಿಟರಿಯು ಪರಿಶೀಲಿಸಬೇಕು. ಅರ್ಜಿದಾರರಿಗೆ ತಮ್ಮ ದೀಕ್ಷಾಸ್ನಾನದ ಸರಿಯಾದ ತಾರೀಖು ಜ್ಞಾಪಕವಿಲ್ಲದಿರುವಲ್ಲಿ, ಅವರು ಅಂದಾಜಿಗನುಸಾರ ಹಾಕಿ, ಅದರ ಒಂದು ದಾಖಲೆಯನ್ನು ಇಡಬೇಕು. ಸೆಕ್ರಿಟರಿಯು ಈ ತಾರೀಖನ್ನು ಕಾಂಗ್ರಿಗೇಷನ್ ಪಬ್ಲಿಷರ್ ರೆಕಾರ್ಡ್ (S-21) ಕಾರ್ಡ್‌ನಲ್ಲಿ ದಾಖಲಿಸಬೇಕು.
◼ ಮರುಜ್ಞಾಪನ: ವಾರ್ಷಿಕ ಐಟಮ್‌ಗಳಿಗಾಗಿರುವ ವಿಶೇಷ ವಿನಂತಿ ಫಾರ್ಮ್‌ಗಳು (ಸ್ಪೆಷಲ್ ರಿಕ್ವೆಸ್ಟ್ ಫಾರ್ಮ್ ಫಾರ್ ಆ್ಯನ್ಯುಅಲ್ ಐಟಮ್ಸ್) ಸಭೆಗಳಿಗೆ ಕಳುಹಿಸಲ್ಪಟ್ಟಿವೆ. 2006ಕ್ಕಾಗಿರುವ ವರ್ಷಪುಸ್ತಕ, ಕ್ಯಾಲೆಂಡರ್ ಮತ್ತು ಶಾಸ್ತ್ರಗಳನ್ನು ಪರೀಕ್ಷಿಸುವುದುಗಳಂಥ ಇತರ ವಾರ್ಷಿಕ ಐಟಮ್‌ಗಳಿಗಾಗಿ ವಿನಂತಿಸಿಕೊಂಡಿರದ ಸಭೆಗಳು, ತಕ್ಷಣವೇ ತಮ್ಮ ವಿನಂತಿಯನ್ನು ಕಳುಹಿಸತಕ್ಕದ್ದು. ಕಿಂಗ್‌ಡಮ್ ಹಾಲ್ ಲಿಟ್‌ರೇಚರ್ ಇನ್ವೆಂಟರಿ ಅರೇಂಜ್‌ಮೆಂಟ್‌ನ ಕೆಳಗೆ ಬರುವ ಸಭೆಗಳು ತಮ್ಮ ವಿನಂತಿಯನ್ನು “ಸಹಯೋಜಕ ಸಭೆಯ” ಮೂಲಕವೇ ಕಳುಹಿಸತಕ್ಕದ್ದು. ಹಾಗಿದ್ದರೂ, ಸಾಹಿತ್ಯ ಗುಂಪಿಗೆ ಸೇರಿದ ಪ್ರತಿಯೊಂದು ಸಭೆಗೆ ಅಗತ್ಯವಿರುವಷ್ಟು ಸಾಹಿತ್ಯಗಳನ್ನು ವಿನಂತಿಸಲಾಗಿದೆಯೊ ಎಂಬುದನ್ನು ಸಹಯೋಜಕ ಸಭೆಯ ಸೆಕ್ರಿಟರಿ ಖಚಿತಪಡಿಸಿಕೊಳ್ಳಬೇಕು.
◼ ಪುನಃ ಲಭ್ಯವಿರುವ ಪ್ರಕಾಶನಗಳು:
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ —ಕನ್ನಡ
ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? —ನೇಪಾಲಿ
[ಪಾದಟಿಪ್ಪಣಿಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.
d ಕನ್ನಡದಲ್ಲಿ ಲಭ್ಯವಿಲ್ಲ.