ದಯವಿಟ್ಟು ಶಾಲಾ ಮೇಲ್ವಿಚಾರಕನಿಗೆ ಕೊಡಿರಿ
ಇಸವಿ 2005ರ ಡಿಸೆಂಬರ್ 26ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2005ರ ನವೆಂಬರ್ 7ರಿಂದ ಡಿಸೆಂಬರ್ 26ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ಉಲ್ಲೇಖಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ನಮ್ಮ ಹುರಿದುಂಬಿಸುವಿಕೆಯ ಬುದ್ಧಿವಾದವು “ಪ್ರೀತಿಯ ನಿಮಿತ್ತ” ಕೊಡಲ್ಪಡುವುದನ್ನು ಖಚಿತಪಡಿಸಿಕೊಳ್ಳಲು ನಾವೇನು ಮಾಡಬಲ್ಲೆವು? (ಫಿಲೆ. 9) [be-KA ಪು. 266]
2. ನಾವು ಯಾವ ವಿಧಗಳಲ್ಲಿ “ಸ್ವಸ್ಥಬೋಧನೆಯಿಂದ ಜನರನ್ನು ಹುರಿದುಂಬಿಸ”ಸಾಧ್ಯವಿದೆ? (ತೀತ 1:9, NW) [be-KA ಪು. 267 ಪ್ಯಾರ. 1-2]
3. ನಮ್ಮ ಭಾಷಣಗಳನ್ನು ಪ್ರೋತ್ಸಾಹಕರವನ್ನಾಗಿ ಮಾಡುವುದು ಏಕೆ ಪ್ರಾಮುಖ್ಯ, ಮತ್ತು ನಾವಿದನ್ನು ಹೇಗೆ ಮಾಡಬಲ್ಲೆವು? [be-KA ಪು. 268 ಪ್ಯಾರ. 1-3, ಚೌಕ]
4. ಮೋಶೆಯನ್ನು ಅನುಕರಿಸುತ್ತಾ, ಯೆಹೋವನು ತನ್ನ ಜನರಿಗಾಗಿ ಏನನ್ನು ಮಾಡಿದ್ದಾನೊ ಅದನ್ನು ಪುನಃ ಜ್ಞಾಪಕಕ್ಕೆ ತರುವಂತೆ ಇತರರಿಗೆ ಸಹಾಯಮಾಡುವುದು ಹೇಗೆ ಅವರಲ್ಲಿ ಧೈರ್ಯವನ್ನು ತುಂಬಿಸುತ್ತದೆ? (ಧರ್ಮೋ. 3:28; 31:1-8) [be-KA ಪು. 268 ಪ್ಯಾರ. 5–ಪು. 269 ಪ್ಯಾರ. 2]
5. ಯೆಹೋವನು ಈಗ ಏನನ್ನು ಮಾಡುತ್ತಿದ್ದಾನೊ ಅದರಲ್ಲಿ ಮತ್ತು ಭವಿಷ್ಯತ್ತಿನಲ್ಲಿ ಏನನ್ನು ಮಾಡಲಿದ್ದಾನೊ ಅದರಲ್ಲಿ ಹರ್ಷವನ್ನು ತೋರಿಸುವುದು ಏಕೆ ನಮ್ಮ ಸಭಿಕರಿಗೆ ಪ್ರೋತ್ಸಾಹಕರವಾಗಿರುವುದು? [be-KA ಪು. 270-1]
ನೇಮಕ ನಂ. 1
6. ನಾವು ಬೈಬಲಿನಲ್ಲಿ ಏನು ಓದುತ್ತೇವೊ ಅದನ್ನು ಯಾವ ನಾಲ್ಕು ದೃಷ್ಟಿಕೋನಗಳನ್ನು ಉಪಯೋಗಿಸುವ ಮೂಲಕ ಪ್ರಯೋಜನಕರವಾಗಿ ವಿಶ್ಲೇಷಿಸಬಹುದು? [wt-KA ಪು. 28, 30]
7. ಬೈಬಲ್ ಪ್ರವಾದನೆಗಳು ಎಷ್ಟರ ಮಟ್ಟಿಗೆ ಯೇಸುವಿಗೆ ಸೂಚಿತವಾಗಿವೆ? [wt-KA ಪು. 32 ಪ್ಯಾರ. 2]
8. ನಮಗೆ ಯೇಸುವಿನ ಯಜ್ಞದಲ್ಲಿ ನಿಜ ನಂಬಿಕೆಯಿರುವಲ್ಲಿ ನಾವೇನು ಮಾಡುವೆವು? [wt-KA ಪು. 39 ಪ್ಯಾರ. 14]
9. ಸತ್ಯ ಕ್ರೈಸ್ತತ್ವವು ನಮಗೆ ಯಾವ ಸ್ವಾತಂತ್ರ್ಯಗಳನ್ನು ಕೊಡುತ್ತದೆ? [wt-KA ಪು. 45 ಪ್ಯಾರ. 8]
10. ಅಪರಿಪೂರ್ಣ ಮಾನವರಾದ ನಾವು ಯೆಹೋವನಿಗೆ ನಿಜವಾಗಿಯೂ ನಿಷ್ಠೆಯುಳ್ಳವರೆಂದು ತೋರಿಸುವುದು ಹೇಗೆ ಸಾಧ್ಯ? [wt-KA ಪು. 56 ಪ್ಯಾರ. 14]
ಸಾಪ್ತಾಹಿಕ ಬೈಬಲ್ ವಾಚನ
11. ದಾವೀದನಿಗೆ ಆಲಯವನ್ನು ಕಟ್ಟಲು ಅನುಮತಿ ದೊರೆಯದಿದ್ದ ವಾಸ್ತವಾಂಶವು, ಅವನು ನಡೆಸಿದಂಥ ಯುದ್ಧಗಳನ್ನು ಯೆಹೋವನು ಸಮ್ಮತಿಸಲಿಲ್ಲವೆಂಬುದನ್ನು ಸೂಚಿಸಿತೊ? (1 ಪೂರ್ವ. 22:6-10)
12. ಸೊಲೊಮೋನನು ಆಲಯವನ್ನು ಪ್ರತಿಷ್ಠಾಪಿಸಲು ಮಾಡಿದ ಪ್ರಾರ್ಥನೆಯಲ್ಲಿ, ಯೆಹೋವನು ಒಂದು ಗುಂಪಿನೋಪಾದಿ ತನ್ನ ಸೇವಕರ ಆವಶ್ಯಕತೆಗಳ ಕುರಿತಾಗಿ ಆಸಕ್ತಿಯುಳ್ಳವನಾಗಿದ್ದಾನೆ ಮಾತ್ರವಲ್ಲ, ತನಗೆ ಭಯಪಡುವ ಪ್ರತಿಯೊಬ್ಬ ವ್ಯಕ್ತಿಯ ಅಪೂರ್ವ ಸನ್ನಿವೇಶದ ಕುರಿತಾಗಿಯೂ ಅರಿವುಳ್ಳವನಾಗಿದ್ದಾನೆ ಎಂಬುದನ್ನು ಹೇಗೆ ಒಪ್ಪಿಕೊಂಡನು? (2 ಪೂರ್ವ. 6:29, 30)
13. ಎರಡನೇ ಪೂರ್ವಕಾಲವೃತ್ತಾಂತ 11:15ರಲ್ಲಿ ಸೂಚಿಸಲ್ಪಟ್ಟಿರುವ ‘ಅಜದೇವತೆಗಳು’ ಏನಾಗಿವೆ?
14. ಬಾಷನ ಆಳಿಕೆಯು “ಆಸನ ಆಳಿಕೆಯ ಮೂರನೆಯ ವರುಷದಲ್ಲಿ” ಆರಂಭಗೊಂಡು ಕೇವಲ 24 ವರ್ಷ ನಡೆದಿದ್ದರಿಂದ, ಅವನು “ಆಸನ ಆಳಿಕೆಯ ಮೂವತ್ತಾರನೆಯ ವರುಷದಲ್ಲಿ” “ಯೆಹೂದ್ಯರಿಗೆ ವಿರೋಧವಾಗಿ” ಬಂದನೆಂಬ ವಿಷಯವು ಹೇಗೆ ಸರಿಹೊಂದುತ್ತದೆ?
15. ಸೈತಾನನ ಲೋಕಕ್ಕೆ ಏನು ಸಂಭವಿಸಲಿದೆ ಎಂಬುದನ್ನು 2 ಪೂರ್ವಕಾಲವೃತ್ತಾಂತ 20:22, 23 ಹೇಗೆ ಸ್ಫುಟವಾಗಿ ಚಿತ್ರಿಸುತ್ತದೆ?