ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/06 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2006 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜನವರಿ 9ರಿಂದ ಆರಂಭವಾಗುವ ವಾರ
  • ಜನವರಿ 16ರಿಂದ ಆರಂಭವಾಗುವ ವಾರ
  • ಜನವರಿ 23ರಿಂದ ಆರಂಭವಾಗುವ ವಾರ
  • ಜನವರಿ 30ರಿಂದ ಆರಂಭವಾಗುವ ವಾರ
  • ಫೆಬ್ರವರಿ 6ರಿಂದ ಆರಂಭವಾಗುವ ವಾರ
2006 ನಮ್ಮ ರಾಜ್ಯದ ಸೇವೆ
km 1/06 ಪು. 2

ಸೇವಾ ಕೂಟದ ಶೆಡ್ಯೂಲ್‌

ಜನವರಿ 9ರಿಂದ ಆರಂಭವಾಗುವ ವಾರ

ಗೀತೆ 10

10 ನಿ: ಸ್ಥಳಿಕ ಪ್ರಕಟನೆಗಳು. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ, ಜನವರಿ-ಮಾರ್ಚ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಜನವರಿ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ, ಪ್ರಚಾರಕನೊಬ್ಬನು ವ್ಯಾಪಾರ ಕ್ಷೇತ್ರದಲ್ಲಿ ಸಾಕ್ಷಿ ನೀಡುತ್ತಿರುವಂತೆ ತೋರಿಸಿರಿ.

15 ನಿ: “ಬೈಬಲ್‌ ಬೋಧಿಸುತ್ತದೆ ಪುಸ್ತಕ​—⁠ನಮ್ಮ ಬೈಬಲ್‌ ಅಧ್ಯಯನದ ಮುಖ್ಯ ಸಹಾಯಕ.”a ಹೊಸ ಪುಸ್ತಕದಲ್ಲಿ ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ಉತ್ಸಾಹವನ್ನು ಹುಟ್ಟಿಸಿರಿ.

20 ನಿ: “ಬೈಬಲ್‌ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನಗಳನ್ನು ಆರಂಭಿಸುವ ವಿಧ.” ಸಭಿಕರೊಂದಿಗಿನ ಚರ್ಚೆ ಮತ್ತು ಪುರವಣಿಯ 3 ನೇ ಪುಟದ ಮೇಲಾಧಾರಿತವಾದ ಪ್ರತ್ಯಕ್ಷಾಭಿನಯಗಳು. ಆಸಕ್ತಿಯನ್ನು ತೋರಿಸುವವರೊಂದಿಗೆ ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ಮತ್ತು ನಡೆಸಲು ನಾವು ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಈಗಲೇ ಉಪಯೋಗಿಸಲು ಆರಂಭಿಸಸಾಧ್ಯವಿದೆ. ಒಂದು ಪುನರ್ಭೇಟಿಯನ್ನು ಮಾಡುತ್ತಿರುವಾಗ ಬೈಬಲ್‌ ಅಧ್ಯಯನವನ್ನು ಆರಂಭಿಸಲಿಕ್ಕಾಗಿ (1) ಪುಟ 4-5, (2) ಪುಟ 6, ಮತ್ತು (3) ಪುಟ 7ರಲ್ಲಿರುವ ಮೊದಲ ಪ್ಯಾರಗ್ರಾಫನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ತೋರಿಸುವಂಥ ಚೆನ್ನಾಗಿ ತಯಾರಿಸಲ್ಪಟ್ಟಿರುವ ಮೂರು ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ. ಪ್ರತಿಯೊಂದು ನಿರೂಪಣೆಯ ಕುರಿತು ಮುಂಚಿತವಾಗಿ ಸಂಕ್ಷಿಪ್ತವಾಗಿ ತಿಳಿಸಿರಿ ಮತ್ತು ಪ್ರತ್ಯಕ್ಷಾಭಿನಯದ ಅನಂತರ ಅದನ್ನು ಪುನರ್ವಿಮರ್ಶಿಸಿರಿ. ಬೈಬಲ್‌ ಬೋಧಿಸುತ್ತದೆ ಪುಸ್ತಕದಿಂದ ಪ್ಯಾರಗ್ರಾಫ್‌ಗಳನ್ನು ಪರಿಗಣಿಸುವುದನ್ನು ಅಗತ್ಯಕ್ಕನುಸಾರ ಸಂಕ್ಷಿಪ್ತಗೊಳಿಸಬಹುದು. ಪ್ರಚಾರಕನು ಪುನರ್ಭೇಟಿಯನ್ನು ಏರ್ಪಡಿಸುವುದರೊಂದಿಗೆ ಪ್ರತಿಯೊಂದು ಪ್ರತ್ಯಕ್ಷಾಭಿನಯವನ್ನು ಮುಕ್ತಾಯಗೊಳಿಸುವಂತಿರಲಿ.

ಗೀತೆ 125 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 16ರಿಂದ ಆರಂಭವಾಗುವ ವಾರ

ಗೀತೆ 178

10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಎರಡು ವಾರದ ಅನಂತರ ಸೇವಾ ಕೂಟದಲ್ಲಿ ನಡೆಸಲ್ಪಡುವ ಚರ್ಚೆಗಾಗಿರುವ ತಯಾರಿಯೋಪಾದಿ ರಕ್ತಪೂರಣಕ್ಕೆ ಬದಲಿಯಾದ ಆರೋಗ್ಯಾರೈಕೆ​—⁠ರೋಗಿಯ ಅಗತ್ಯಗಳು ಮತ್ತು ಹಕ್ಕುಗಳನ್ನು ಪೂರೈಸುವುದು (ಇಂಗ್ಲಿಷ್‌) ಎಂಬ ವಿಡಿಯೋವನ್ನು ವೀಕ್ಷಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.

15 ನಿ: ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಎಂಬ ಪುಸ್ತಕದ ಪುಟ 4-7ರ ಮೇಲಾಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಪುಟ 4ರ ಮೇಲಾಧರಿತವಾದ ಮೂರು ನಿಮಿಷಕ್ಕಿಂತಲೂ ಕಡಿಮೆ ಅವಧಿಯ ಪೀಠಿಕೆಯ ಬಳಿಕ, ಪುಟ 5ರಿಂದ ಪುಟ 7ರಲ್ಲಿರುವ ಉಪಶೀರ್ಷಿಕೆಯ ತನಕ ಇರುವ ವಿಷಯವನ್ನು ಸಭಿಕರೊಂದಿಗೆ ಚರ್ಚಿಸಿರಿ. ಬರಲಿರುವ ಸೇವಾ ಕೂಟಗಳಲ್ಲಿ ಸಂಘಟಿತರು ಪುಸ್ತಕದ ಮುಂದಿನ ಭಾಗಗಳು ಪರಿಗಣಿಸಲ್ಪಡುವವು.

20 ನಿ: “ಜ್ಯೋತಿರ್ಮಂಡಲಗಳಂತೆ ಹೊಳೆಯುವ ಯುವ ಜನರು.”b ಯುವ ಜನರು ಶಾಲೆಯಲ್ಲಿ ಸಾಕ್ಷಿಯನ್ನು ನೀಡಲು ಹೇಗೆ ಶಕ್ತರಾದರು ಎಂದು ಹೇಳುವಂತೆ ಅವರನ್ನು ಆಮಂತ್ರಿಸಿರಿ. ಒಂದು ಅಥವಾ ಎರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಬಹುದು.

ಗೀತೆ 107 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 23ರಿಂದ ಆರಂಭವಾಗುವ ವಾರ

ಗೀತೆ 60

10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ, ಜನವರಿ-ಮಾರ್ಚ್‌ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಫೆಬ್ರವರಿ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತ್ಯಕ್ಷಾಭಿನಯಗಳಲ್ಲಿ ಒಂದನ್ನು ಒಬ್ಬ ಯುವ ವ್ಯಕ್ತಿಯು ಮಾಡುವಂತೆ ಏರ್ಪಡಿಸಿರಿ.

15 ನಿ: ಸ್ಥಳಿಕ ಅಗತ್ಯಗಳು.

20 ನಿ: “ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ​—⁠ಪ್ರಶ್ನೆಗಳನ್ನು ಕೇಳುವ ಮತ್ತು ಕಿವಿಗೊಡುವ ಮೂಲಕ.”c ಪ್ಯಾರಗ್ರಾಫ್‌ 2ನ್ನು ಚರ್ಚಿಸುವಾಗ, ಸಂಭಾಷಣೆಗಳನ್ನು ಆರಂಭಿಸಲು ಯಾವ ಪ್ರಶ್ನೆಗಳನ್ನು ಸಭಿಕರು ಪರಿಣಾಮಕಾರಿಯಾಗಿ ಕಂಡುಕೊಂಡರು ಎಂದು ಅವರನ್ನು ಕೇಳಿರಿ. ಜಾಣ್ಮೆಯಿಂದ ಪ್ರಶ್ನೆಗಳನ್ನು ಕೇಳುವ ಮೂಲಕ ಮತ್ತು ಗಮನಕೊಟ್ಟು ಆಲಿಸುವ ಮೂಲಕ ಒಬ್ಬ ವ್ಯಕ್ತಿಯು ತನ್ನ ದೃಷ್ಟಿಕೋನವನ್ನು ವ್ಯಕ್ತಪಡಿಸುವಂತೆ ಮಾಡುವುದು ಹೇಗೆಂದು ಪ್ರತ್ಯಕ್ಷಾಭಿನಯಿಸಿರಿ.

ಗೀತೆ 205 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 30ರಿಂದ ಆರಂಭವಾಗುವ ವಾರ

ಗೀತೆ 197

10 ನಿ: ಸ್ಥಳಿಕ ಪ್ರಕಟನೆಗಳು. ಜನವರಿ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ. ಫೆಬ್ರವರಿ ತಿಂಗಳಿನ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ, ಮತ್ತು ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ: ನಮ್ಮ ಪ್ರಯೋಜನಕ್ಕಾಗಿ ಪ್ರೀತಿಪೂರ್ವಕ ಒದಗಿಸುವಿಕೆಗಳು. ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡಬೇಕು. ಹಾಸ್ಪಿಟಲ್‌ ಲೀಏಸಾನ್‌ ಕಮಿಟಿ (ಏಚ್‌ಎಲ್‌ಸಿ) ಮತ್ತು ಪೇಷಂಟ್‌ ವಿಸಿಟೇಷನ್‌ ಗ್ರೂಪ್‌ (ಪೀವೀಜೀ)ನ ಚಟುವಟಿಕೆಗಳಿಂದ ಪ್ರಯೋಜನವನ್ನು ಪಡೆಯುವ ವಿಧಗಳ ಕುರಿತು ಎಲ್ಲ ಸಭೆಗಳಿಗೆ ಬ್ರಾಂಚ್‌ ಆಫೀಸ್‌ನಿಂದ ಕಳುಹಿಸಲ್ಪಟ್ಟ 2006, ಜನವರಿ 3ರ ಪತ್ರವನ್ನು ಓದಿ ಚರ್ಚಿಸಿರಿ.

20 ನಿ: “ಒಂದು ಪ್ರಾಮುಖ್ಯ ವೈದ್ಯಕೀಯ ರೂಢಿಯನ್ನು ಎತ್ತಿತೋರಿಸುವ ವಿಡಿಯೋ.” ಅಪೊಸ್ತಲರ ಕೃತ್ಯಗಳು 15:28, 29ನ್ನು ಓದಿ, ಮತ್ತು ಕ್ರೈಸ್ತರು ಏಕೆ ರಕ್ತಪೂರಣಗಳನ್ನು ನಿರಾಕರಿಸುತ್ತಾರೆ ಎಂಬುದಕ್ಕೆ ಮುಖ್ಯ ಕಾರಣವು ರಕ್ತದ ಪಾವಿತ್ರ್ಯದ ಕುರಿತಾದ ದೇವರ ನಿಯಮವನ್ನು ಅವರು ಗೌರವಿಸುವುದೇ ಆಗಿದೆ ಎಂಬುದನ್ನು ಸಂಕ್ಷಿಪ್ತವಾಗಿ ಒತ್ತಿಹೇಳಿರಿ. ನಂತರ, ಲೇಖನದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸುತ್ತಾ, ರೋಗಿಯ ಅಗತ್ಯಗಳು ಮತ್ತು ಹಕ್ಕುಗಳು ವಿಡಿಯೋದ ಚರ್ಚೆಯನ್ನು ಕೂಡಲೆ ಆರಂಭಿಸಿರಿ. ಕೊನೆಯ ಪ್ಯಾರಗ್ರಾಫನ್ನು ಓದುವ ಮೂಲಕ ಸಮಾಪ್ತಿಗೊಳಿಸಿ.

ಗೀತೆ 45 ಮತ್ತು ಸಮಾಪ್ತಿಯ ಪ್ರಾರ್ಥನೆ.

ಫೆಬ್ರವರಿ 6ರಿಂದ ಆರಂಭವಾಗುವ ವಾರ

ಗೀತೆ 74

10 ನಿ: ಸ್ಥಳಿಕ ಪ್ರಕಟನೆಗಳು.

25 ನಿ: ನಮ್ಮ ಹೊಸ ಬೋಧನಾ ಸಹಾಯಕವನ್ನು ಪರಿಚಯಿಸಿಕೊಳ್ಳುವುದು. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಬೈಬಲ್‌ ಬೋಧಿಸುತ್ತದೆ ಪುಸ್ತಕದಲ್ಲಿ ಸಭಿಕರು ಗಣ್ಯಮಾಡುವ ವೈಶಿಷ್ಟ್ಯಗಳ ಕುರಿತು ಹೇಳಿಕೆ ನೀಡುವಂತೆ ಅವರನ್ನು ಆಮಂತ್ರಿಸಿರಿ. ಇವುಗಳಲ್ಲಿ ಕೆಲವು ಯಾವುವೆಂದರೆ, ಪೀಠಿಕಾರೂಪದ ಪ್ರಶ್ನೆಗಳು ಮತ್ತು ಪ್ರತಿಯೊಂದು ಅಧ್ಯಾಯದ ಮುಖ್ಯವಿಷಯಗಳನ್ನು ಎತ್ತಿತೋರಿಸುವ ಪುನರ್ವಿಮರ್ಶಾ ಚೌಕ (ಪು. 106, 114); ದೃಶ್ಯ ಸಾಧನಗಳು (ಪು. 122-3, 147, 198); ಮತ್ತು ಪರಿಶಿಷ್ಟ (ಪು. 197, ಪ್ಯಾರ. 1-2). ಈ ಪುಸ್ತಕದ ಬೋಧನಾ ವಿಧಾನವು ಹೃತ್ಪೂರ್ವಕವಾಗಿ ಮತ್ತು ಮನಸ್ಸಿಗೆ ಹಿಡಿಸುವ ರೀತಿಯಲ್ಲಿದೆ (ಪು. 12, ಪ್ಯಾರ. 12). ಇದು ಸರಳ, ಸ್ಪಷ್ಟ ವಿವರಣೆಗಳನ್ನು (ಪು. 58, ಪ್ಯಾರ. 5) ಮತ್ತು ಮನಸ್ಸನ್ನು ಸ್ಪರ್ಶಿಸುವ ಪರಿಣಾಮಕಾರಿ ದೃಷ್ಟಾಂತಗಳನ್ನು (ಪು. 159, ಪ್ಯಾರ. 12) ಕೊಡುತ್ತದೆ. ಇದರ ಮುನ್ನುಡಿಯು ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ಸಹಾಯಮಾಡುವಂತೆ ತಯಾರಿಸಲ್ಪಟ್ಟಿದೆ (ಪು. 3-7). ಒಬ್ಬ ಹೊಸ ಬೈಬಲ್‌ ವಿದ್ಯಾರ್ಥಿಯೊಂದಿಗೆ ಪುಟ 7ರಲ್ಲಿರುವ ಚೌಕವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಹೊಸ ಪುಸ್ತಕವನ್ನು ಉಪಯೋಗಿಸುವುದರಿಂದ ದೊರಕಿದ ಪ್ರೋತ್ಸಾಹನೀಯವಾದ ಅನುಭವಗಳನ್ನು ತಿಳಿಸಿರಿ.

10 ನಿ: ಆಕ್ಸಿಲಿಯರಿ ಪಯನೀಯರ್‌ ಸೇವೆಯು ಆಶೀರ್ವಾದಗಳನ್ನು ತರುತ್ತದೆ. (ಜ್ಞಾನೋ. 10:22) ಕಳೆದ ವಸಂತಕಾಲದಲ್ಲಿ ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಿದವರು, ಅದನ್ನು ಮಾಡಲು ತಮ್ಮ ಕಾರ್ಯತಖ್ತೆಯನ್ನು ಏರ್ಪಡಿಸಿದ ವಿಧದ ಕುರಿತು ಮತ್ತು ಅವರು ಅನುಭವಿಸಿದ ಆನಂದ ಹಾಗೂ ಆಶೀರ್ವಾದಗಳ ಕುರಿತು ತಿಳಿಸುವಂತೆ ಅವರನ್ನು ಆಮಂತ್ರಿಸಿರಿ. ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡಲು ಸಾಧ್ಯವಿದೆಯೇ ಎಂಬುದನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವಂತೆ ಎಲ್ಲರನ್ನು ಪ್ರೋತ್ಸಾಹಿಸಿರಿ.

ಗೀತೆ 16 ಮತ್ತು ಸಮಾಪ್ತಿಯ ಪ್ರಾರ್ಥನೆ.

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ