ಬೈಬಲ್ ಬೋಧಿಸುತ್ತ ಪುಸ್ತಕ—ನಮ್ಮ ಬೈಬಲ್ ಅಧ್ಯಯನದ ಮುಖ್ಯ ಸಹಾಯಕ
1 “ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನದಲ್ಲಿ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕವು ಬಿಡುಗಡೆಯಾದಾಗ ಅದನ್ನು ಪಡೆಯಲು ನಾವೆಷ್ಟು ರೋಮಾಂಚನಗೊಂಡೆವು! ಶನಿವಾರದ ಕಾರ್ಯಕ್ರಮದ ಕೊನೆಯಲ್ಲಿ, ಹಾಜರಿದ್ದ ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಪ್ರತಿಗಳನ್ನು ಪಡೆಯಲು ಸಂತೋಷಿಸಿದರು. ಈ ಬೋಧನಾ ಸಹಾಯಕವು ಹೇಗೆ ಉಪಯೋಗಿಸಲ್ಪಡುವುದು? ಇದು ನಮ್ಮ ಬೈಬಲ್ ಅಧ್ಯಯನದ ಮುಖ್ಯ ಸಹಾಯಕವಾಗಿರುವಂತೆ ವಿನ್ಯಾಸಿಸಲ್ಪಟ್ಟಿದೆ. ಮಾರ್ಚ್ ತಿಂಗಳ ಸಾಹಿತ್ಯ ನೀಡುವಿಕೆಯಲ್ಲಿ ಈ ಹೊಸ ಪುಸ್ತಕವನ್ನು ನೀಡುವಂತೆ ತಿಳಿಸಲ್ಪಟ್ಟಿರುವುದಾದರೂ, ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಮತ್ತು ನಡೆಸಲು ಈಗಲೇ ಇದನ್ನು ಉಪಯೋಗಿಸುವಂತೆ ಪ್ರಚಾರಕರನ್ನು ಉತ್ತೇಜಿಸಲಾಗಿದೆ.
2 ಸದ್ಯದ ಬೈಬಲ್ ಅಧ್ಯಯನಗಳು: ಜ್ಞಾನ ಪುಸ್ತಕ ಅಥವಾ ಅಪೇಕ್ಷಿಸು ಬ್ರೋಷರ್ನಿಂದ ಬೈಬಲ್ ಅಧ್ಯಯನಗಳನ್ನು ನಡೆಸುತ್ತಿರುವ ಪ್ರಚಾರಕರು, ತಮ್ಮ ಅಧ್ಯಯನದಲ್ಲಿ ಹೇಗೆ ಮತ್ತು ಯಾವಾಗ ಹೊಸ ಪ್ರಕಾಶನವನ್ನು ಉಪಯೋಗಿಸಬೇಕೆಂದು ನಿರ್ಣಯಿಸಲು ವಿವೇಚನೆಯನ್ನು ಉಪಯೋಗಿಸಬೇಕು. ಒಂದುವೇಳೆ ಅಧ್ಯಯನವು ಇತ್ತೀಚಿಗೆ ಆರಂಭವಾಗಿರುವಲ್ಲಿ, ನೀವು ಹೊಸ ಪುಸ್ತಕವನ್ನು ಅದರ ಒಂದನೇ ಅಧ್ಯಾಯದಿಂದ ಆರಂಭಿಸಬಹುದು. ನೀವು ಜ್ಞಾನ ಪುಸ್ತಕದಲ್ಲಿ ಸಾಕಷ್ಟು ಅಧ್ಯಾಯಗಳನ್ನು ಆವರಿಸಿರುವಲ್ಲಿ, ನಿಮ್ಮ ಅಧ್ಯಯನವನ್ನು ಬೈಬಲ್ ಬೋಧಿಸುತ್ತದೆ ಪುಸ್ತಕದಲ್ಲಿ ಅದಕ್ಕೆ ಸರಿಹೊಂದುವ ಅಧ್ಯಾಯದೊಂದಿಗೆ ಮುಂದುವರಿಸಬಹುದು. ನೀವು ಜ್ಞಾನ ಪುಸ್ತಕವನ್ನು ಮುಗಿಸುವ ಹಂತದಲ್ಲಿರುವಲ್ಲಿ, ಆ ಪ್ರಕಾಶನವನ್ನು ಪೂರ್ಣಗೊಳಿಸಲು ನಿರ್ಧರಿಸಬಹುದು.
3 ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಪ್ರಯೋಜನ ಪಡೆಯಬಹುದಾದ ಅನೇಕರ ಬಗ್ಗೆ ನಮಗೆಲ್ಲರಿಗೆ ತಿಳಿದಿದೆ ಎಂಬುದರಲ್ಲಿ ಸಂದೇಹವಿಲ್ಲ. ಬೈಬಲ್ ಸತ್ಯಗಳನ್ನು ಪ್ರಗತಿಪರವಾಗಿ ಪ್ರಸ್ತುತಪಡಿಸುವ ಈ ಅಧ್ಯಯನ ಸಹಾಯಕದಿಂದ, ಅವರಲ್ಲಿ ಪ್ರತಿಯೊಬ್ಬರೊಂದಿಗೂ ಬೈಬಲ್ ಅಧ್ಯಯನದ ಪ್ರಸ್ತಾಪವನ್ನು ಮಾಡಬಾರದೇಕೆ? ಉದಾಹರಣೆಗಾಗಿ, ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕವನ್ನು ಅಧ್ಯಯನಮಾಡಿದರೂ ಸಮರ್ಪಣೆ ಮತ್ತು ದೀಕ್ಷಾಸ್ನಾನ ಹೊಂದುವಷ್ಟು ಪ್ರಗತಿಯನ್ನು ಮಾಡಿರದವರು, ಈ ಹೊಸ ಪುಸ್ತಕದಿಂದ ಪುನಃ ಅಧ್ಯಯನವನ್ನು ಆರಂಭಿಸಲು ಬಯಸಬಹುದು. ಹೆತ್ತವರು ತಮ್ಮ ಮಕ್ಕಳಿಗೆ ದೇವರ ಚಿತ್ತದ ನಿಷ್ಕೃಷ್ಟ ಜ್ಞಾನವನ್ನು ನೀಡುವಾಗ ಈ ಪ್ರಕಾಶನವನ್ನು ಉಪಯೋಗಿಸಲು ನಿರ್ಧರಿಸಬಹುದು.—ಕೊಲೊ. 1:9, 10.
4 ಎರಡನೇ ಪುಸ್ತಕದಿಂದ ಅಧ್ಯಯನ: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವು ಮುಗಿದ ಅನಂತರ ಬೈಬಲ್ ವಿದ್ಯಾರ್ಥಿಯೊಂದಿಗೆ ಎರಡನೇ ಪುಸ್ತಕದಿಂದ ಅಧ್ಯಯನಮಾಡುವ ಏರ್ಪಾಡು ಇದೆಯೇ? ಹೌದು. ವಿದ್ಯಾರ್ಥಿಯು ನಿಧಾನವಾಗಿಯಾದರೂ ಪ್ರಗತಿಮಾಡುತ್ತಿರುವುದು ಕಂಡುಬರುವಲ್ಲಿ ಮತ್ತು ಅವನು ಏನನ್ನು ಕಲಿಯುತ್ತಿದ್ದಾನೋ ಅದಕ್ಕಾಗಿ ಗಣ್ಯತೆಯನ್ನು ಬೆಳೆಸಿಕೊಳ್ಳುತ್ತಿರುವಲ್ಲಿ, ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಪುಸ್ತಕದಿಂದ ಬೈಬಲ್ ಅಧ್ಯಯನವನ್ನು ಮುಂದುವರಿಸಬಹುದು. ಶಿಷ್ಯರನ್ನಾಗಿ ಮಾಡುವ ನೇಮಕವನ್ನು ನಾವು ನಿರ್ವಹಿಸುವಾಗ, ಬೈಬಲ್ ಬೋಧಿಸುತ್ತದೆ ಪುಸ್ತಕವು ನಮ್ಮ ಬಳಿ ಇರುವ ಪ್ರಬಲ ಸಹಾಯಕವಾಗಿರುವುದು ಎಂಬ ಭರವಸೆ ನಮಗಿದೆ.—ಮತ್ತಾ. 28:19, 20.