ಸೇವಾ ಕೂಟದ ಶೆಡ್ಯೂಲ್
ಡಿಸೆಂಬರ್ 11ರಿಂದ ಆರಂಭವಾಗುವ ವಾರ
ಗೀತೆ 174
10 ನಿ: ಸ್ಥಳಿಕ ಪ್ರಕಟನೆಗಳು. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ಡಿಸೆಂಬರ್ 1ರ ಕಾವಲಿನಬುರುಜು ಮತ್ತು 2006ರ ಅಕ್ಟೋಬರ್-ಡಿಸೆಂಬರ್ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಒಂದು ಪ್ರತ್ಯಕ್ಷಾಭಿನಯದಲ್ಲಿ, ‘ನನಗೆ ಆಸಕ್ತಿಯಿಲ್ಲ’ ಎಂಬ ಸಂಭಾಷಣಾ ತಡೆಗಟ್ಟನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ತೋರಿಸಿರಿ.—ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯ ಪುಟ 8ನ್ನು ನೋಡಿರಿ.
15 ನಿ: 2007ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ. ಶಾಲಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡುವ ಭಾಷಣ ಮತ್ತು ಇಂಟರ್‌ವ್ಯೂಗಳು. ಅಕ್ಟೋಬರ್ 2006ರ ನಮ್ಮ ರಾಜ್ಯದ ಸೇವೆಯ ಪುರವಣಿಯಿಂದ ಸ್ಥಳಿಕವಾಗಿ ಅನ್ವಯವಾಗುವಂಥ ಅಂಶಗಳನ್ನು ಚರ್ಚಿಸಿರಿ. ವಿದ್ಯಾರ್ಥಿಯು ಕೆಲಸಮಾಡುತ್ತಿರುವ ಭಾಷಣ ಗುಣದ ಕುರಿತು ಶಾಲಾ ಮೇಲ್ವಿಚಾರಕನು ಮುಂಚಿತವಾಗಿಯೇ ಪ್ರಕಟಿಸುವುದಿಲ್ಲ ಎಂಬುದನ್ನು ತಿಳಿಸಿರಿ. 2007ನೇ ಇಸವಿಯ ಬೈಬಲ್ ವಾಚನದಲ್ಲಿ ಯೆಶಾಯ 24 ರಿಂದ ಮಲಾಕಿಯ ಪುಸ್ತಕದವರೆಗಿನ ಹೀಬ್ರು ಶಾಸ್ತ್ರವನ್ನು ನಾವು ಓದಿ ಮುಗಿಸಲಿಕ್ಕಿದ್ದೇವೆ. ಆದುದರಿಂದ ಬೈಬಲ್ ಮುಖ್ಯಾಂಶ ನೇಮಿಸಲ್ಪಡುವ ಸಹೋದರರಿಗೂ ಹೇಳಿಕೆಗಳನ್ನು ಕೊಡುವ ಇತರರೆಲ್ಲರಿಗೂ ಈ ಪ್ರವಾದನಾ ಪುಸ್ತಕಗಳ ಒಳನೋಟವನ್ನು ನೀಡುವ ನಮ್ಮ ಪ್ರಕಾಶನಗಳನ್ನು ಸದುಪಯೋಗಿಸಲು ಇದೊಂದು ಸದವಕಾಶವಾಗಿದೆ. ಹೊಸ ವಿದ್ಯಾರ್ಥಿ, ಒಳ್ಳೆಯ ಪ್ರಗತಿ ಮಾಡುತ್ತಿರುವ ಯುವ ವಿದ್ಯಾರ್ಥಿ, ಅನುಭವಸ್ಥ ವಿದ್ಯಾರ್ಥಿ—ಇವರಲ್ಲಿ ಇಬ್ಬರು ಅಥವಾ ಮೂವರು ಪ್ರಚಾರಕರನ್ನು ಇಂಟರ್‌ವ್ಯೂ ಮಾಡಿರಿ. ತಮ್ಮ ಶುಶ್ರೂಷೆಯಲ್ಲಿ ಮತ್ತು ಆಧ್ಯಾತ್ಮಿಕತೆಗಾಗಿ ಶಾಲೆಯು ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಅವರು ತಿಳಿಸಲಿ. ಪ್ರತಿಯೊಬ್ಬರು ಶ್ರದ್ಧೆಯಿಂದ ತಮ್ಮ ನೇಮಕಗಳನ್ನು ಪೂರೈಸುವಂತೆ, ಬೈಬಲ್ ಮುಖ್ಯಾಂಶದಲ್ಲಿ ಭಾಗವಹಿಸುವಂತೆ, ಪ್ರತಿ ವಾರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದಿಂದ ಕೊಡಲ್ಪಡುವ ಸಲಹೆಗಳನ್ನು ಅನ್ವಯಿಸಿಕೊಳ್ಳುವಂತೆ ಉತ್ತೇಜಿಸಿರಿ.
20 ನಿ: “ಮೊದಲು ನಿಮಗಿದ್ದ ಪ್ರೀತಿಯನ್ನು ಬಿಟ್ಟುಬಿಡಬೇಡಿರಿ.”a ಸಮಯವು ಅನುಮತಿಸಿದಂತೆ ಕೊಡಲ್ಪಟ್ಟಿರುವ ವಚನಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.
ಗೀತೆ 193 ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 18ರಿಂದ ಆರಂಭವಾಗುವ ವಾ
ಗೀತೆ 150
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪ್ರಶ್ನಾ ಚೌಕವನ್ನು ಪರಿಶೀಲಿಸಿರಿ. ಡಿಸೆಂಬರ್ 25 ಮತ್ತು ಜನವರಿ 1ರಂದು ಕ್ಷೇತ್ರ ಸೇವೆಗಾಗಿ ಮಾಡಲಾಗಿರುವ ವಿಶೇಷ ಏರ್ಪಾಡಿನ ಕುರಿತು ತಿಳಿಸಿರಿ.
15 ನಿ: “ಒಂದಿಷ್ಟು ಆಸಕ್ತಿ ತೋರಿಸುವ ಎಲ್ಲರನ್ನೂ ಪುನಃ ಭೇಟಿಮಾಡಿರಿ.”b ಅನೌಪಚಾರಿಕ ಅಥವಾ ಬೀದಿ ಸಾಕ್ಷಿಕಾರ್ಯದಲ್ಲಿ ಭೇಟಿಯಾದ ಆಸಕ್ತ ವ್ಯಕ್ತಿಗಳನ್ನು ಪುನಃ ಸಂಪರ್ಕಿಸುವುದಕ್ಕಾಗಿ ಅವರಿಂದ ಮಾಹಿತಿಯನ್ನು ಹೇಗೆ ಪಡೆದುಕೊಂಡರೆಂಬುದನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ. ಅಂಥವರನ್ನು ಪುನರ್ಭೇಟಿಮಾಡಿದ್ದರಿಂದ ಸಿಕ್ಕಿದ ಗಮನಾರ್ಹ ಅನುಭವಗಳನ್ನು ಸಹ ತಿಳಿಸುವಂತೆ ಕೇಳಿಕೊಳ್ಳಿ. ಒಂದೆರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಬಹುದು.
20 ನಿ: “ಸ್ವಯಂಪ್ರೇರಣೆಯಿಂದ ಕೊಡುವುದು ಆಶೀರ್ವಾದಗಳನ್ನು ತರುವುದು.”c ಸ್ವಯಂಸೇವೆಯಲ್ಲಿ ಸದಾ ತಮ್ಮನ್ನು ಕೊಟ್ಟುಕೊಳ್ಳುವ ಒಬ್ಬ ಅಥವಾ ಇಬ್ಬರು ಪ್ರಚಾರಕರನ್ನು ಇಂಟರ್‌ವ್ಯೂ ಮಾಡಿರಿ. ಅವರು ಸ್ವಯಂಸೇವೆಯ ಮನೋಭಾವವನ್ನು ಹೇಗೆ ತೋರಿಸಿದ್ದಾರೆ? ಯಾವ ಹೊಂದಾಣಿಕೆಗಳನ್ನು ಮಾಡಬೇಕಾಗಿತ್ತು? ಅವರು ಆ ಹೊಂದಾಣಿಕೆಗಳನ್ನು ಹೇಗೆ ಮಾಡಶಕ್ತರಾದರು? ಇದಕ್ಕಾಗಿ ಅವರು ಯಾವ ಆಶೀರ್ವಾದಗಳನ್ನು ಪಡೆದುಕೊಂಡಿದ್ದಾರೆ?
ಗೀತೆ 108 ಮತ್ತು ಸಮಾಪ್ತಿ ಪ್ರಾರ್ಥನೆ.
ಡಿಸೆಂಬರ್ 25ರಿಂದ ಆರಂಭವಾಗುವ ವಾರ
ಗೀತೆ 210
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಬೇರೆ ಯಾವುದೇ ನಿರೂಪಣೆಗಳನ್ನು ಉಪಯೋಗಿಸುತ್ತಾ, ಜನವರಿ 1ರ ಕಾವಲಿನಬುರುಜು ಮತ್ತು 2007ರ ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದ ಕೊನೆಯಲ್ಲಿ, ಮುಂದಿನ ಭೇಟಿಯಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಉತ್ತರಿಸ ಸಾಧ್ಯವಾಗುವಂಥ ಒಂದು ಆಲೋಚನಾ ಪ್ರೇರಕ ಪ್ರಶ್ನೆಯನ್ನು ಕೇಳಿರಿ.
15 ನಿ: ಸ್ಥಳಿಕ ಅಗತ್ಯಗಳು
20 ನಿ: “ನಿಮಗೊಂದು ವೈಯಕ್ತಿಕ ಟೆರಿಟೊರಿ ಇದೆಯೋ?”d ಸಭೆಗೆ ನೇಮಕವಾಗಿರುವ ಟೆರಿಟೊರಿಯ ಮೇರೆ, ಟೆರಿಟೊರಿಯನ್ನು ಎಷ್ಟು ತಿಂಗಳಿಗೊಮ್ಮೆ ಆವರಿಸಲಾಗುತ್ತದೆ ಮತ್ತು ವೈಯಕ್ತಿಕ ಟೆರಿಟೊರಿ ಲಭ್ಯವಿರುವುದರ ಬಗ್ಗೆ ಸೇವಾ ಮೇಲ್ವಿಚಾರಕನಿಂದ ಸಂಕ್ಷಿಪ್ತ ಹೇಳಿಕೆಗಳನ್ನು ಒಳಗೂಡಿಸಿರಿ.
ಗೀತೆ 219 ಮತ್ತು ಸಮಾಪ್ತಿ ಪ್ರಾರ್ಥನೆ.
ಜನವರಿ 1ರಿಂದ ಆರಂಭವಾಗುವ ವಾರ
ಗೀತೆ 158
ಸೂಚನೆ: ಜನವರಿ 1ರ ವಾರಕ್ಕಾಗಿರುವ ಸೇವಾ ಕೂಟವನ್ನು ಸಭೆಗಳು ಈ ತಾರೀಖಿಗಿಂತ ಮುಂಚೆ ನಡೆಸಬಾರದು; ಒಂದುವೇಳೆ ಸಂಚರಣ ಮೇಲ್ವಿಚಾರಕರ ಭೇಟಿಯು ಇರುವಲ್ಲಿ ಮಾತ್ರ ಹಾಗೆ ಮಾಡಬಹುದು. ಪ್ರತಿ ಸಭೆಯಲ್ಲೂ ಶೆಡ್ಯೂಲ್ ಮಾಡಲ್ಪಟ್ಟಿರುವಂತೆ ಸೇವಾ ಕೂಟದಲ್ಲಿ ಅಧಿವೇಶನದ ಪುರವಣಿಯು ಪರಿಗಣಿಸಲ್ಪಡತಕ್ಕದ್ದು. ಶಿಫಾರಸುಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್ ಪಡೆದುಕೊಂಡ ಕೂಡಲೇ ಮಾಹಿತಿ ಫಲಕದಲ್ಲಿ ಹಾಕಬೇಕು. ಈ ವಾರದಲ್ಲಿ ಸರ್ಕಿಟ್ ಸಮ್ಮೇಳನವಿರುವುದಾದರೆ, ಪುಸ್ತಕ ಅಧ್ಯಯನದ ಮೇಲ್ವಿಚಾರಕರು ಅವರ ಪುಸ್ತಕ ಅಧ್ಯಯನ ಗುಂಪುಗಳಲ್ಲಿ ಅಧಿವೇಶನದ ಸ್ಥಳ ಮತ್ತು ದಿನಾಂಕಗಳನ್ನು ಪ್ರಕಟಿಸತಕ್ಕದ್ದು. ಸಾಧ್ಯವಿರುವಲ್ಲಿ ಶಿಫಾರಸುಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್‌ನ ಪ್ರತಿಯನ್ನು ಎಲ್ಲ ಪುಸ್ತಕ ಅಧ್ಯಯನ ಮೇಲ್ವಿಚಾರಕನಿಗೆ ಕೊಡತಕ್ಕದ್ದು. ಇದರಿಂದ ಹಾಜರಿರುವವರು ರಿಸರ್ವೇಷನ್ ಮಾಡಲಿಕ್ಕಾಗಿ ಫೋನ್ ನಂಬರ್‌ಗಳನ್ನು ಬರೆದುಕೊಳ್ಳಲು ನೆರವಾಗುವುದು. ಆದರೆ ಪ್ರಚಾರಕರಿಗೋಸ್ಕರ ಲಿಸ್ಟ್‌ನ ನಕಲು ಪ್ರತಿಗಳನ್ನು ಮಾಡಬಾರದು.
5 ನಿ:ಸ್ಥಳಿಕ ಪ್ರಕಟನೆಗಳು. ಡಿಸೆಂಬರ್ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕ ಹುಟ್ಟಿಸಿರಿ.
15 ನಿ: ಶುಶ್ರೂಷೆಯ ಪ್ರಗತಿಯನ್ನು ವರದಿಮಾಡುವುದು. ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಪುಟ 83ರಲ್ಲಿರುವ ಉಪಶೀರ್ಷಿಕೆಯಿಂದ ಆ ಅಧ್ಯಾಯದ ಕೊನೆಯ ವರೆಗೆ ಮೇಲಾಧರಿತ.
25 ನಿ: “‘ಕ್ರಿಸ್ತನನ್ನು ಅನುಸರಿಸೋಣ” 2007ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ.”e ಸಭೆಯ ಕಾರ್ಯದರ್ಶಿಯಿಂದ ನಿರ್ವಹಿಸಲ್ಪಡತಕ್ಕದ್ದು. ಪುರವಣಿಯನ್ನು ಪರಿಗಣಿಸುವುದಕ್ಕಿಂತ ಮುಂಚೆ 2006, ಡಿಸೆಂಬರ್ 15ರ ನೇಮಕ ಪತ್ರವನ್ನು ಓದಿರಿ. ಪ್ಯಾರಾ 8ನ್ನು ಪರಿಗಣಿಸುವಾಗ “ಹೋಟೆಲ್ ರಿಸರ್ವೇಷನ್ ಮಾಡಬೇಕಾದ ವಿಧ” ಚೌಕದಲ್ಲಿರುವ ಪ್ರತಿಯೊಂದು ಅಂಶವನ್ನು ಓದಿರಿ. ಸಾಧ್ಯವಾದಷ್ಟು ಬೇಗನೆ ಅಧಿವೇಶನಕ್ಕಾಗಿ ಏರ್ಪಾಡುಗಳನ್ನು ಮಾಡುವಂತೆ ಎಲ್ಲರನ್ನೂ ಉತ್ತೇಜಿಸಿರಿ.
ಗೀತೆ 65 ಮತ್ತು ಸಮಾಪ್ತಿ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.