ನಿಮಗೊಂದು ವೈಯಕ್ತಿಕ ಟೆರಿಟೊರಿ ಇದೆಯೋ?
1. ವೈಯಕ್ತಿಕ ಟೆರಿಟೊರಿ ಎಂದರೇನು?
1 ವೈಯಕ್ತಿಕ ಟೆರಿಟೊರಿ ಅಂದರೆ ನಿಮಗೆ ನೇಮಕವಾಗಿರುವ ಟೆರಿಟೊರಿ. ಅದು ನೀವು ಸುಲಭದಲ್ಲಿ ತಲಪಲು ಸಮೀಪವಿರಬಹುದಾದ ಒಂದು ಟೆರಿಟೊರಿಯಾಗಿದೆ. ನೀವೊಬ್ಬರೇ ಅಥವಾ ಇನ್ನೊಬ್ಬ ಪ್ರಚಾರಕರೊಂದಿಗೆ ಅಲ್ಲಿ ಸೇವೆಮಾಡಸಾಧ್ಯವಿದೆ. ಸಭೆಯು ಏರ್ಪಡಿಸುವಂಥ ಗುಂಪು ಸಾಕ್ಷಿಕಾರ್ಯಕ್ಕೆ ಸಾಧ್ಯವಿರುವಾಗೆಲ್ಲಾ ಬೆಂಬಲಿಸುವುದು ಪ್ರಯೋಜನವನ್ನು ತರುತ್ತದೆಂಬುದು ನಿಜ. ಆದರೂ, ಇನ್ನಿತರ ಸಮಯಗಳಲ್ಲಿ ವೈಯಕ್ತಿಕ ಟೆರಿಟೊರಿಯನ್ನು ಹೊಂದಿರುವುದು ಸಮಗ್ರ ಸಾಕ್ಷಿನೀಡಲು ಸಹಾಯಮಾಡುವುದು. ವಿಶೇಷವಾಗಿ ಸಭೆಗಳು ವಿಸ್ತಾರವಾದ ಟೆರಿಟೊರಿಯನ್ನು ಆವರಿಸಬೇಕಾಗಿರುವಾಗ ಇದು ನಿಜವಾಗಿದೆ.—ಅ. ಕೃ. 10:42.
2. ವೈಯಕ್ತಿಕ ಟೆರಿಟೊರಿಯನ್ನು ಹೊಂದಿರುವುದರ ಕೆಲವು ಪ್ರಯೋಜನಗಳಾವುವು?
2 ಪ್ರಯೋಜನಗಳು: ಕೆಲವರು ತಾವು ಕೆಲಸಮಾಡುವ ಸ್ಥಳದ ಹತ್ತಿರವಿರುವ ವೈಯಕ್ತಿಕ ಟೆರಿಟೊರಿಯಲ್ಲಿ ಮಧ್ಯಾಹ್ನ ವಿರಾಮದ ವೇಳೆಯಲ್ಲಿ ಅಥವಾ ಕೆಲಸದ ಸಮಾಯಾನಂತರ ಸೇವೆಮಾಡುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಕಂಡುಕೊಂಡಿದ್ದಾರೆ. ಇನ್ನೂ ಕೆಲವರು ಸಭಾ ಪುಸ್ತಕ ಅಧ್ಯಯನಕ್ಕೆ ಮುಂಚೆ ತಮ್ಮ ನೆರೆಹೊರೆಯಲ್ಲಿ ಒಂದು ಅಥವಾ ಹೆಚ್ಚು ತಾಸು ಕುಟುಂಬವಾಗಿ ಸೇವೆಮಾಡುವುದರಲ್ಲಿ ಆನಂದಿಸಿದ್ದಾರೆ. ನಮಗೆ ಸಿಗುವ ಪುರ್ನಭೇಟಿಗಳು ಮತ್ತು ಬೈಬಲ್ ಅಧ್ಯಯನಗಳು ಸಮೀಪದ ಟೆರಿಟೊರಿಯಲ್ಲಿ ಇರುವುದರಿಂದಾಗಿ ಹೆಚ್ಚು ಸಮಯ, ಹಣ ವ್ಯಯಿಸಬೇಕಾಗಿರುವುದಿಲ್ಲ ಇಲ್ಲವೆ ಬಹಳ ಶ್ರಮಪಡಬೇಕಾಗಿರುವುದಿಲ್ಲ. ಹೀಗೆ, ಸ್ವಲ್ಪ ಸಮಯದಲ್ಲೇ ಹೆಚ್ಚನ್ನು ಸಾಧಿಸಲು ಸಾಧ್ಯವಾಗುವುದರಿಂದ, ವೈಯಕ್ತಿಕ ಟೆರಿಟೊರಿಯನ್ನು ಹೊಂದಿರುವುದು ಕೆಲವರಿಗೆ ಆಗಾಗ್ಗೆ ಆಕ್ಸಿಲಿಯರಿ ಪಯನೀಯರ್ ಮಾಡಲು ಅಥವಾ ರೆಗ್ಯೂಲರ್ ಪಯನೀಯರ್ ಮಾಡಲು ಸಹಾಯಕಾರಿಯಾಗಿದೆ. ಅದುಮಾತ್ರವಲ್ಲ, ವೈಯಕ್ತಿಕ ಟೆರಿಟೊರಿಯಲ್ಲಿ ಸೇವೆಮಾಡುವುದು ಟೆರಿಟೊರಿಯಲ್ಲಿರುವ ಜನರನ್ನು ಒಳ್ಳೇ ಪರಿಚಯ ಮಾಡಿಕೊಳ್ಳುವಂತೆಯೂ ಅವರ ಭರವಸೆಯನ್ನು ಗಳಿಸುವಂತೆಯೂ ನಮಗೆ ಸಹಾಯಮಾಡುವುದು. ಹೀಗೆ, ಅವರ ಚಿಂತೆಗಳನ್ನು ಅರಿತು ಅದಕ್ಕನುಗುಣವಾಗಿ ನಮ್ಮ ನಿರೂಪಣೆಗಳನ್ನು ಹೊಂದಿಸಿಕೊಳ್ಳುವುದು ನಮ್ಮ ಶುಶ್ರೂಷೆಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುವುದು.
3. ಒಬ್ಬ ಪಯನೀಯರಳಿಗೆ ವೈಯಕ್ತಿಕ ಟೆರಿಟೊರಿಯಲ್ಲಿ ಸೇವೆಮಾಡುವುದರಿಂದ ಸಿಕ್ಕಿದಂಥ ಅನುಭವವೇನು?
3 ಸರ್ಕಿಟ್ ಮೇಲ್ವಿಚಾರಕರ ಪ್ರೋತ್ಸಾಹದಿಂದ ವೈಯಕ್ತಿಕ ಟೆರಿಟೊರಿಯಲ್ಲಿ ಸೇವೆಮಾಡುತ್ತಿರುವ ಒಬ್ಬ ಪಯನೀಯರಳು ತಿಳಿಸುವುದು: “ಈ ಸಲಹೆಗೆ ಕಿವಿಗೊಟ್ಟದ್ದರಿಂದ ಕೊಂಚ ಸಮಯದಲ್ಲೇ ನನ್ನ ಟೆರಿಟೊರಿಯಲ್ಲಿರುವ ಜನರ ಒಳ್ಳೆಯ ಪರಿಚಯಮಾಡಿಕೊಂಡೆ. ಇದರಿಂದ ಮನೆಯವರೊಂದಿಗೆ ಸ್ನೇಹಪರತೆಯಿಂದ ಮಾತನಾಡಲು ಸಾಧ್ಯವಾಯಿತು. ನಾನು ನನ್ನ ಭೇಟಿಯ ಸಮಯವನ್ನು ಜನರ ಅನುಕೂಲತೆಗೆ ತಕ್ಕಂತೆ ಹೊಂದಿಸಿಕೊಂಡೆ. ಇದರ ಫಲಿತಾಂಶವಾಗಿ, ನನ್ನ ಪುರ್ನಭೇಟಿಗಳು ತಿಂಗಳಿಗೆ 35 ರಿಂದ 80ಕ್ಕೆ ಏರಿತು. ನಾನೀಗ 7 ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದೇನೆ.”
4. ನೀವು ವೈಯಕ್ತಿಕ ಟೆರಿಟೊರಿಯನ್ನು ಹೇಗೆ ಪಡೆದುಕೊಂಡು ಸೇವೆಮಾಡಬಲ್ಲಿರಿ?
4 ಹೇಗೆ ಮಾಡುವುದು: ನೀವು ಒಂದು ವೈಯಕ್ತಿಕ ಟೆರಿಟೊರಿಯನ್ನು ವಿನಂತಿಸಿಕೊಳ್ಳಲು ಬಯಸುವುದಾದರೆ ಟೆರಿಟೊರಿ ಸೇವಕನೊಂದಿಗೆ ಮಾತಾಡಿರಿ. ನಿಮ್ಮೊಂದಿಗೆ ಜೊತೆಗೂಡುವಂತೆ ಮತ್ತೊಬ್ಬ ಪ್ರಚಾರಕನನ್ನು ಆಮಂತ್ರಿಸಿರಿ. ಮನೆಯಲ್ಲಿಲ್ಲದವರ ಕುರಿತು ದಾಖಲೆಯನ್ನಿಡಿ. ನಾಲ್ಕು ತಿಂಗಳೊಳಗೆ ಟೆರಿಟೊರಿಯನ್ನು ಪೂರ್ತಿಯಾಗಿ ಆವರಿಸಲು ಪ್ರಯತ್ನಿಸಬೇಕು. ಅದು ಕಷ್ಟಕರವಾಗಿರುವಲ್ಲಿ ಸಭಾ ಪುಸ್ತಕ ಅಧ್ಯಯನದ ಮೇಲ್ವಿಚಾರಕನ ಅಥವಾ ಇತರರ ಸಹಾಯವನ್ನು ನೀವು ಕೇಳಿಕೊಳ್ಳಬಹುದು. ನಾಲ್ಕು ತಿಂಗಳಿನ ಕೊನೆಯಲ್ಲಿ ಪೂರ್ತಿ ಆವರಿಸಿರುವ ಟೆರಿಟೊರಿಯನ್ನು ಹಿಂದಿರುಗಿಸಬಹುದು ಇಲ್ಲವೆ ಆ ಟೆರಿಟೊರಿಯಲ್ಲೇ ಪುನಃ ಕೆಲಸಮಾಡಲು ವಿನಂತಿಸಿಕೊಳ್ಳಬಹುದು. ಆದರೆ ಆ ಟೆರಿಟೊರಿಯನ್ನು ಸದಾಕಾಲಕ್ಕೂ ನಿಮ್ಮೊಂದಿಗೆ ಇಟ್ಟುಕೊಳ್ಳಬಾರದು, ಬದಲಿಗೆ ಅದನ್ನು ಹಿಂದಿರುಗಿಸಬೇಕು. ಏಕೆಂದರೆ, ಇತರರು ಆ ಟೆರಿಟೊರಿಯನ್ನು ವಿನಂತಿಸಿಕೊಳ್ಳಬಹುದು. ಒಂದುವೇಳೆ ಸಭೆಯ ಟೆರಿಟೊರಿಯು ಚಿಕ್ಕದಾಗಿದ್ದು ವೈಯಕ್ತಿಕ ಟೆರಿಟೊರಿಯನ್ನು ಪಡೆದುಕೊಳ್ಳುವುದು ಅಸಾಧ್ಯವಾಗಿರುವಲ್ಲಿ, ನಿಮ್ಮ ಪುಸ್ತಕ ಅಧ್ಯಯನದ ಮೇಲ್ವಿಚಾರಕರಿಂದ ಟೆರಿಟೊರಿಯ ಒಂದು ಚಿಕ್ಕ ಭಾಗವನ್ನು ವಿನಂತಿಸಿಕೊಳ್ಳಬಹುದು.
5. ಸುವಾರ್ತೆಯನ್ನು ಸಾರುವ ನೇಮಕವನ್ನು ಪೂರೈಸಲು ನಮಗೇನು ಅಗತ್ಯ?
5 “ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ” ಸುವಾರ್ತೆಯನ್ನು ಸಾರುವಂಥ ನಮ್ಮ ನೇಮಕವು ಕಷ್ಟಕರವಾದದ್ದು. (ಮತ್ತಾ. 24:14) ಆದುದರಿಂದ ಅದು ಚೆನ್ನಾಗಿ ಸುಸಂಘಟಿಸುವುದನ್ನು ಅವಶ್ಯಪಡಿಸುತ್ತದೆ. ಗುಂಪು ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳುವುದರೊಂದಿಗೆ ವೈಯಕ್ತಿಕ ಟೆರಿಟೊರಿಯಲ್ಲಿ ಸೇವೆಮಾಡುವುದು ಸಾಧ್ಯವಾದಷ್ಟು ಹೆಚ್ಚಿನ ಜನರಿಗೆ ಸುವಾರ್ತೆಯನ್ನು ತಲಪಿಸುವಂತೆ ಸಾಧ್ಯಮಾಡುತ್ತದೆ.