ಸೇವಾ ಕೂಟದ ಶೆಡ್ಯೂಲ್
ಜೂನ್ 11ರಿಂದ ಆರಂಭವಾಗುವ ವಾರ
ಗೀತೆ 153
10 ನಿ: ಸ್ಥಳಿಕ ಪ್ರಕಟನೆಗಳು. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಏಪ್ರಿಲ್-ಜೂನ್ ಎಚ್ಚರ! ಮತ್ತು ಜೂನ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: ದೇವರ ವಾಕ್ಯದ ಬೋಧಕರೋಪಾದಿ ಪೂರ್ಣ ರೀತಿಯಲ್ಲಿ ಸನ್ನದ್ಧರು. 2002, ಫೆಬ್ರವರಿ 15ರ ಕಾವಲಿನಬುರುಜು ಪುಟ 24-8ರ ಮೇಲೆ ಆಧರಿತವಾದ ಭಾಷಣ. ಕೆಲವು ಮಂದಿ ಕ್ರೈಸ್ತರು ಬೈಬಲ್ ಅಧ್ಯಯನವನ್ನು ನಡೆಸಲು ತಮಗೆ ಅಷ್ಟು ಅರ್ಹತೆ ಇಲ್ಲವೆಂದೆಣಿಸಿ ಆಸಕ್ತ ಜನರಿಗೆ ಅಧ್ಯಯನದ ಕುರಿತು ತಿಳಿಸಲು ಹಿಂಜರಿಯುತ್ತಾರೆ. ಆದರೆ ಯೆಹೋವನು ತನ್ನ ವಾಕ್ಯ, ತನ್ನ ಪವಿತ್ರಾತ್ಮ ಮತ್ತು ತನ್ನ ಸಂಘಟನೆಯ ಮೂಲಕ ನಾವು ಶುಶ್ರೂಷಕರಾಗಲು ಅರ್ಹರನ್ನಾಗಿ ಮಾಡುತ್ತಾನೆ. ಕೇವಲ ಸಾಹಿತ್ಯವನ್ನು ನೀಡುವುದೇ ನಮ್ಮ ಗುರಿಯಲ್ಲ. ಜನರಿಗೆ ಬೋಧಿಸಲು ನಾವು ಕಠಿಣ ಪ್ರಯತ್ನವನ್ನು ಮಾಡಬೇಕು. (ಮತ್ತಾ. 28:19, 20) ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಗುರಿಯನ್ನು ಯಾವಾಗಲು ಮನಸ್ಸಿನಲ್ಲಿಡುವಂತೆ ಪ್ರಚಾರಕರನ್ನು ಉತ್ತೇಜಿಸಿರಿ.
20 ನಿ: ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಅಧ್ಯಾಯ 13ರ ಮೇಲೆ ಆಧರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.
ಗೀತೆ 144 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 18ರಿಂದ ಆರಂಭವಾಗುವ ವಾರ
ಗೀತೆ 217
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು.
15 ನಿ: “ಬಹುಭಾಷಾ ಟ್ರ್ಯಾಕ್ಟ್‌ಗಳ ಪ್ಯಾಕ್‌ಗಳು.” ಸಭಿಕರೊಂದಿಗೆ ಚರ್ಚೆ. ನಿಮ್ಮ ಟೆರಿಟೊರಿಗಾಗಿ ಸೂಚಿಸಲ್ಪಟ್ಟ ಟ್ರ್ಯಾಕ್ಟ್ ಪ್ಯಾಕ್‌ನ ಸಂಗ್ರಹದ ಕುರಿತು ನಿಮ್ಮ ಸಭೆಗೆ ತಿಳಿಸಿರಿ. ಈ ಟ್ರ್ಯಾಕ್ಟ್‌ಗಳ ಸೆಟ್ ಅನ್ನು ಎಲ್ಲಾ ಸಮಯದಲ್ಲಿ ತಮ್ಮೊಂದಿಗೆ ಇಟ್ಟುಕೊಳ್ಳುವಂತೆ ಪ್ರಚಾರಕರನ್ನು ಉತ್ತೇಜಿಸಿರಿ.
20 ನಿ: “ಯೆಹೋವನ ಸೇವೆಯಲ್ಲಿ ಪ್ರಯಾಸಪಡಲು ನಾವು ಹರ್ಷಿಸುತ್ತೇವೆ!”a ಸಮಯವಿದ್ದಲ್ಲಿ ಕೊಡಲ್ಪಟ್ಟಿರುವ ಶಾಸ್ತ್ರವಚನಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.
ಗೀತೆ 82 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜೂನ್ 25ರಿಂದ ಆರಂಭವಾಗುವ ವಾರ
ಗೀತೆ 15
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 4ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜುಲೈ-ಸೆಪ್ಟೆಂಬರ್ ಎಚ್ಚರ! ಮತ್ತು ಜುಲೈ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “‘ಕಾರ್ಯಕ್ಕೆ ನಡೆಸುವ ವಿಶಾಲವಾದ ದ್ವಾರವನ್ನು’ ನೀವು ಪ್ರವೇಶಿಸಬಲ್ಲಿರೋ?”b ಒಬ್ಬರು ಅಥವಾ ಇಬ್ಬರು ರೆಗ್ಯೂಲರ್ ಪಯನೀಯರರನ್ನು ಸಂಕ್ಷಿಪ್ತವಾಗಿ ಇಂಟರ್‌ವ್ಯೂ ಮಾಡಿರಿ. ರೆಗ್ಯೂಲರ್ ಪಯನೀಯರರಾಗಲು ಅವರು ಯಾವ ಹೊಂದಾಣಿಕೆಗಳನ್ನು ಮಾಡಿಕೊಂಡರು? ಇದರಿಂದ ಅವರು ಯಾವ ಆಶೀರ್ವಾದಗಳನ್ನು ಪಡೆದುಕೊಂಡರು?
ಗೀತೆ 138 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 2ರಿಂದ ಆರಂಭವಾಗುವ ವಾರ
ಗೀತೆ 208
10 ನಿ: ಸ್ಥಳಿಕ ಪ್ರಕಟನೆಗಳು. ಜೂನ್ ತಿಂಗಳ ಕ್ಷೇತ್ರಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ. ಜುಲೈ ತಿಂಗಳಿನಲ್ಲಿ ನೀಡಲಿರುವ ಸಾಹಿತ್ಯವನ್ನು ತಿಳಿಸಿ, ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: ಅನೌಪಚಾರಿಕ ಸಾಕ್ಷಿಕಾರ್ಯ—ಸುವಾರ್ತೆಯನ್ನು ಸಾರಲು ಒಂದು ಪ್ರಾಮುಖ್ಯ ವಿಧಾನ. ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ 101-2ರ ಮೇಲೆ ಆಧರಿತವಾದ ಸಭಿಕರೊಂದಿಗಿನ ಚರ್ಚೆ. ಅನೌಪಚಾರಿಕವಾಗಿ ಸಾಕ್ಷಿ ನೀಡಲು ಕೆಲವು ಪ್ರಾಯೋಗಿಕ ವಿಧಾನಗಳನ್ನು ತಿಳಿಸಿರಿ. ಅನೌಪಚಾರಿಕವಾಗಿ ಸಾಕ್ಷಿ ನೀಡುವಾಗ ಸಿಕ್ಕಿದ ಉತ್ತೇಜನದಾಯಕ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ.
20 ನಿ: “‘ಬಹಳ ಫಲ’ ಕೊಡುತ್ತಾ ಇರಿ.”c 4ನೇ ಪ್ಯಾರವನ್ನು ಪರಿಗಣಿಸುವಾಗ 2003, ಫೆಬ್ರವರಿ 1ರ ಕಾವಲಿನಬುರುಜು ಪುಟ 21ರಲ್ಲಿರುವ “‘ತಾಳ್ಮೆಯಿಂದ ಫಲವನ್ನು ಕೊಡುವ’ ವಿಧ” ಎಂಬ ಚೌಕದಲ್ಲಿನ ವಿಷಯಗಳನ್ನು ಒಳಗೂಡಿಸಿರಿ.
ಗೀತೆ 69 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.