ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ—ಜನವರಿ: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮನೆಯವನ ಬಳಿ ಈಗಾಗಲೇ ಈ ಪುಸ್ತಕ ಇರುವುದಾದರೆ, ಹಳದಿ ಬಣ್ಣಕ್ಕೆ ತಿರುಗಿರುವ 192 ಪುಟದ ಅಥವಾ 1992ಕ್ಕೆ ಮುಂಚೆ ಪ್ರಕಟಿಸಿದ ಯಾವುದೇ ಪುಸ್ತಕಗಳನ್ನು ಪ್ರಚಾರಕರು ನೀಡಬಹುದು. ಫೆಬ್ರವರಿ: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್), ಕುಟುಂಬ ಸಂತೋಷದ ರಹಸ್ಯ ಅಥವಾ ಬೈಬಲ್—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್), ಇವುಗಳಲ್ಲಿ ಲಭ್ಯವಿರುವ ಪುಸ್ತಕವನ್ನು ನೀಡಿರಿ. ಮಾರ್ಚ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಶ್ರದ್ಧೆಯಿಂದ ಪ್ರಯತ್ನಿಸಿ. ಏಪ್ರಿಲ್ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಜ್ಞಾಪಕಾಚರಣೆ ಮತ್ತು ಇತರ ದೇವಪ್ರಭುತ್ವಾತ್ಮಕ ಸಂದರ್ಭಗಳಿಗೆ ಹಾಜರಾಗುತ್ತಾರಾದರೂ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದವರು ಸೇರಿದಂತೆ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರಿಕರಿಸಿರಿ. ಒಂದು ಮನೆ ಬೈಬಲ್ ಅಧ್ಯಯನವನ್ನು ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು.
◼ ಮಾರ್ಚ್ ತಿಂಗಳ ಮೊದಲ ವಾರದಿಂದ ಆರಂಭಿಸಿ ಸರ್ಕಿಟ್ ಮೇಲ್ವಿಚಾರಕರು ಕೊಡುವ ಹೊಸ ಬಹಿರಂಗ ಭಾಷಣದ ಶೀರ್ಷಿಕೆ “ಲೌಕಿಕ ಭ್ರಮೆಗಳನ್ನು ತಿರಸ್ಕರಿಸಿರಿ, ದೇವರ ರಾಜ್ಯದ ನಿಜತ್ವಗಳನ್ನು ಅನುಸರಿಸಿರಿ” ಎಂದಾಗಿದೆ.
◼ ಈ ವರ್ಷದ ಏಪ್ರಿಲ್ 9, ಗುರುವಾರದಂದು ಸೂರ್ಯಾಸ್ತಮಾನದ ನಂತರ ಜ್ಞಾಪಕಾಚರಣೆಯನ್ನು ಆಚರಿಸಲಿಕ್ಕಾಗಿ ಸಭೆಗಳು ಸೂಕ್ತವಾದ ಏರ್ಪಾಡುಗಳನ್ನು ಮಾಡಿಕೊಳ್ಳತಕ್ಕದ್ದು. ಪ್ರತಿಯೊಂದು ಸಭೆಯು ತನ್ನದೇ ಆದ ಜ್ಞಾಪಕಾಚರಣೆಯನ್ನು ನಡೆಸಲು ಪ್ರಯತ್ನಿಸಬೇಕು. ಸಾಮಾನ್ಯವಾಗಿ ಹಲವಾರು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸುತ್ತಿರುವ ಸ್ಥಳಗಳಲ್ಲಿ, ಒಂದು ಅಥವಾ ಹೆಚ್ಚಿನ ಸಭೆಗಳು ಆ ಸಂಜೆಗಾಗಿ ಬೇರೊಂದು ಸೌಕರ್ಯವನ್ನು ಉಪಯೋಗಿಸಲಿಕ್ಕಾಗಿ ಏರ್ಪಾಡುಮಾಡಸಾಧ್ಯವಿದೆ. ಜ್ಞಾಪಕಾಚರಣೆಯ ಬಳಿಕ ಸಹವಾಸದಿಂದ ಎಲ್ಲರೂ ಸ್ವಲ್ಪವಾದರೂ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಸಾಧ್ಯವಿರುವಲ್ಲಿ ಕಾರ್ಯಕ್ರಮಗಳ ನಡುವೆ ಕಡಿಮೆಪಕ್ಷ 40 ನಿಮಿಷಗಳಾದರೂ ಅಂತರವಿರುವಂತೆ ನಾವು ಸಲಹೆ ನೀಡುತ್ತೇವೆ.
◼ ಜನವರಿ 26ರಿಂದ ಆರಂಭಿಸುವ ಸೇವಾ ಕೂಟದಲ್ಲಿ ನಡೆಸಲಾಗುವ ಚರ್ಚೆಗೆ ತಯಾರಿಯಲ್ಲಿ ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ (ಇಂಗ್ಲಿಷ್) ವಿಡಿಯೋವನ್ನು ನೋಡುವಂತೆ ಸಹೋದರರಿಗೆ ನೆನಪಿಸಿರಿ.
◼ ಬೈಬಲ್ ಕಥೆಗಳ ನನ್ನ ಪುಸ್ತಕದ ಅಧ್ಯಯನಕ್ಕಾಗಿರುವ ‘ಹೆಚ್ಚಿನ ಪ್ರಶ್ನೆಗಳು’ ಎಂಬ ಭಾಗದಲ್ಲಿ ಕೊಡಲಾದ ವಚನಗಳನ್ನು ಎಲ್ಲರೂ ಸಭಾ ಬೈಬಲ್ ಅಧ್ಯಯನಕ್ಕೆ ತಯಾರುಮಾಡುವಾಗ ಮೊದಲೇ ಓದಿಕೊಂಡು ಬರಬೇಕು. ಸಭಾ ಬೈಬಲ್ ಅಧ್ಯಯನವು ಸಮಯಕ್ಕೆ ಸರಿಯಾಗಿ ಮುಗಿಯುವಂತೆ ಎಲ್ಲರೂ ಈ ಸಲಹೆಯನ್ನು ಪಾಲಿಸುವರೆ ನಾವು ಪ್ರೋತ್ಸಾಹಿಸುತ್ತೇವೆ.
◼ ಲಭ್ಯವಿರುವ ಹೊಸ ಪ್ರಕಾಶನಗಳು:
“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” —ಇಂಗ್ಲಿಷ್
ಯುವ ಜನರ ಪ್ರಶ್ನೆಗಳು ಕಾರ್ಯಸಾಧಕ ಉತ್ತರಗಳು, ಸಂಪುಟ 2 —ಇಂಗ್ಲಿಷ್
◼ ಲಭ್ಯವಿರುವ ಹೊಸ DVD:
ಮಹಾ ಬೋಧಕನಿಂದ ಕಲಿಯಿರಿ —ಅಮೆರಿಕನ್ ಸನ್ನೆ ಭಾಷೆ