ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜನ.-ಮಾರ್ಚ್
“ಕುಟುಂಬದಲ್ಲಿ ತಂದೆಯ ಪಾತ್ರ ತುಂಬ ಮುಖ್ಯವೆಂದು ಪರಿಣಿತರು ಕಂಡುಕೊಂಡಿದ್ದಾರೆ. ಒಬ್ಬನು ಒಳ್ಳೆಯ ತಂದೆಯಾಗಿರಬೇಕಾದರೆ ಏನು ಮಾಡಬೇಕೆಂದು ನಿಮಗನಿಸುತ್ತದೆ? [ಪ್ರತಿಕ್ರಿಯೆಗಾಗಿ ಅವಕಾಶ ಕೊಡಿ.] ತನ್ನ ತಂದೆಯ ಒಳ್ಳೆಯ ಮಾದರಿಯಿಂದ ಯೇಸು ಹೇಗೆ ಪ್ರಯೋಜನ ಪಡೆದನು ಎಂಬುದನ್ನು ನಾನು ನಿಮಗೆ ತಿಳಿಸಬಹುದೋ? [ಮನೆಯವನು ಒಪ್ಪುವುದಾದರೆ, ಮತ್ತು ಅವನಿಗೆ ಆಸಕ್ತಿಯಿದೆ ಎಂದು ನಿಮಗನಿಸುವುದಾದರೆ ಯೋಹಾನ 5:19 ಓದಿ.] ತಂದೆಯು ಮಾಡಬೇಕಾದ ಆರು ವಿಷಯಗಳ ಕುರಿತು ಈ ಲೇಖನವು ಹೇಳುತ್ತದೆ.” ಪುಟ 20ರಲ್ಲಿ ಪ್ರಾರಂಭವಾಗುವ ಲೇಖನವನ್ನು ತೋರಿಸಿ.
ಎಚ್ಚರ! ಜನ.-ಮಾರ್ಚ್
“ದೇವರು ಹೇಗಿದ್ದಾನೆ ಎಂಬ ಬಗ್ಗೆ ಬೇರೆ ಬೇರೆ ಧರ್ಮದ ಜನರಿಗೆ ಬೇರೆ ಬೇರೆ ಅಭಿಪ್ರಾಯ ಇದೆ. [ಮನೆಯವನಿಗೆ ಆಸಕ್ತಿಯಿದೆಯೋ ಎಂಬುದನ್ನು ವಿವೇಚಿಸಿ ತಿಳಿದುಕೊಳ್ಳಿ, ಬೈಬಲಿನ ವಿಷಯವನ್ನು ಮಾತಾಡಲು ಇಷ್ಟಪಡುವುದಾದರೆ ಮಾತ್ರ ಮುಂದುವರಿಸಿ.] ದೇವರ ಬಗ್ಗೆ ಯೇಸು ಏನು ಹೇಳಿದನೆಂದು ನಿಮಗೆ ಓದಿ ಹೇಳಬಹುದೋ? ಯೋಹಾನ 4:24ರಲ್ಲಿ ಅದನ್ನು ಹೇಳಲಾಗಿದೆ. [ಓದಿ.] “ದೇವರ ಸ್ವರೂಪ ಹೇಗಿದೆ?” ಎಂಬ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಕೊಡಲಾಗಿದೆ.” ಪುಟ 18 ಮತ್ತು 19ರಲ್ಲಿರುವ ಲೇಖನವನ್ನು ತೋರಿಸಿರಿ.