ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜನವರಿ-ಮಾರ್ಚ್
“ಹಣ ಇದ್ದರೇನೇ ಸಂತೋಷ ಸಿಗುತ್ತದೆ ಎಂದು ಅನೇಕರಿಗೆ ಅನಿಸುತ್ತದೆ. ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಈ ವಿಚಾರದಲ್ಲಿ ಸತ್ಯವಾಗಿರುವ ಒಂದು ವಾಕ್ಯವನ್ನು ಬೈಬಲಿನಲ್ಲಿ ಹಲವಾರು ವರ್ಷಗಳ ಹಿಂದೆ ಬರೆಯಲಾಯಿತು. ಅದನ್ನು ನಾನು ನಿಮಗೆ ಓದಿ ಹೇಳಬಹುದೊ? [ಮನೆಯವನು ಒಪ್ಪುವಲ್ಲಿ 1 ತಿಮೊಥೆಯ 6:9, 10 ಓದಿ.] ಐಶ್ವರ್ಯವಿದ್ದರೆ ನಾವು ಸಂತೋಷವಾಗಿರುತ್ತೇವೆ ಎಂಬ ಖಾತ್ರಿಯಿಲ್ಲ ಏಕೆ ಹಾಗೂ ಐಶ್ವರ್ಯವಿರುವುದು ತಾನೇ ಏಕೆ ದೇವರ ಅನುಗ್ರಹದ ಸಂಕೇತವಲ್ಲ ಎಂಬುದನ್ನು ಈ ಪತ್ರಿಕೆ ವಿವರಿಸುತ್ತದೆ.”
ಎಚ್ಚರ! ಜನವರಿ-ಮಾರ್ಚ್
“ಎಲ್ಲ ಗಂಡಹೆಂಡತಿಯರ ಮಧ್ಯೆ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಅವನ್ನು ಹೇಗೆ ಸರಿಪಡಿಸಬಹುದು ಎಂದು ನಿಮಗನಿಸುತ್ತದೆ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪುರಾತನ ಗ್ರಂಥವೊಂದು ಉತ್ತಮ ಸಲಹೆಯನ್ನು ನೀಡುತ್ತದೆ. ಅದನ್ನು ನಾನು ನಿಮಗೆ ತೋರಿಸಬಹುದೊ? [ಮನೆಯವನಿಗೆ ಆಸಕ್ತಿಯಿರುವಲ್ಲಿ ಎಫೆಸ 4:31, 32 ಓದಿ.] ಕುಟುಂಬ ಜೀವನಕ್ಕೆ ತುಂಬ ಸಹಾಯವಾಗುವ ಮಾರ್ಗದರ್ಶನವನ್ನು ಈ ಪತ್ರಿಕೆ ಕೊಡುತ್ತದೆ.” ಪುಟ 6ರಲ್ಲಿರುವ ಲೇಖನಕ್ಕೆ ಗಮನಕೊಡುವಂತೆ ಹೇಳಿ.
ಕಾವಲಿನಬುರುಜು ಏಪ್ರಿಲ್-ಜೂನ್
ಈ ಪತ್ರಿಕೆಯನ್ನು ಕ್ರೈಸ್ತಪ್ರಪಂಚಕ್ಕೆ ಸೇರಿದ ಮನೆಯವರಿಗೆ ಹಾಗೂ ಬೈಬಲಿನ ವಿಷಯದಲ್ಲಿ ಗೌರವವಿರುವವರಿಗೆ ಕೊಡಿರಿ. “ಈ ಭೂಮಿಯಲ್ಲಿ ಜೀವಿಸಿದವರಲ್ಲಿ ಇತಿಹಾಸದಾದ್ಯಂತ ಅತಿಹೆಚ್ಚು ಪ್ರಭಾವಬೀರಿದ ವ್ಯಕ್ತಿ ಯಾರೆಂದು ಕೇಳಿದರೆ ಅನೇಕ ಜನರು ಯೇಸು ಎಂಬುದಾಗಿ ಹೇಳುತ್ತಾರೆ. ನಿಮಗೂ ಹಾಗೆ ಅನಿಸುತ್ತದೊ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಸತ್ಯಾಂಶವನ್ನು ತಿಳಿಯಲಿಕ್ಕಾಗಿ ನಾವು ಅವನ ಕುರಿತಾಗಿರುವ ಪರಸ್ಪರ ವಿರುದ್ಧವಾಗಿರುವ ಅಭಿಪ್ರಾಯಗಳ ಮಧ್ಯೆ ಸರಿಯಾದುದನ್ನು ಏಕೆ ಆರಿಸಿಕೊಳ್ಳಬೇಕು ಎಂಬುದನ್ನು ಗಮನಿಸಿ. [ಯೋಹಾನ 17:3 ಓದಿ.] ಯೇಸುವಿನ ಬಗ್ಗೆ ಮತ್ತು ಅವನು ಕಲಿಸಿದ ವಿಷಯಗಳ ಬಗ್ಗೆ ಬೈಬಲ್ ನಿಜವಾಗಿಯೂ ಏನು ಹೇಳುತ್ತದೆ ಎಂಬುದನ್ನು ಕಾವಲಿನಬುರುಜುವಿನ ಈ ವಿಶೇಷ ಸಂಚಿಕೆಯು ತಿಳಿಸುತ್ತದೆ.”
ಎಚ್ಚರ! ಏಪ್ರಿಲ್-ಜೂನ್
“ನ್ಯಾಯವಲ್ಲದ ಪಕ್ಷಪಾತವನ್ನು ನಾವೆಲ್ಲರೂ ಅನುಭವಿಸಿದ್ದೇವೆ. ದೇವರಿಗೆ ಪೂರ್ವಗ್ರಹದ ಬಗ್ಗೆ ಏನು ಅನಿಸಬಹುದು ಎಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ. ವಚನ ಓದಲು ಅನುಮತಿ ಕೇಳಿ. ಮನೆಯವನು ಅನುಮತಿಸುವುದಾದರೆ ಅ. ಕಾರ್ಯಗಳು 10:34, 35 ಓದಿ.] ನಾವು ಎದುರಿಸುವ ಪಕ್ಷಪಾತವನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಈ ಪತ್ರಿಕೆ ವಿವರಿಸುತ್ತದೆ. ಮಾತ್ರವಲ್ಲ ಇದು ನಮ್ಮಲ್ಲಿರುವ ಯಾವುದೇ ಪೂರ್ವಗ್ರಹವನ್ನು ಕಿತ್ತೆಸೆಯಲು ಸಹಾಯಮಾಡುವ ಮೂಲತತ್ತ್ವಗಳನ್ನು ಸಹ ಚರ್ಚಿಸುತ್ತದೆ.”