ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಏಪ್ರಿಲ್-ಜೂನ್
ಈ ಪತ್ರಿಕೆಯನ್ನು ಯೇಸುವಿನ ಬಗ್ಗೆ ಗೌರವವಿರುವವರಿಗೆ ನೀಡಿ. “ಯೇಸು ಸತ್ತನೆಂದು ಬೈಬಲ್ ಹೇಳುತ್ತದಾದರೂ ಅವನು ನಿಜವಾಗಿಯೂ ಸಾಯಲಿಲ್ಲ, ಅವನಿಗೆ ಮದುವೆಯಾಯಿತು, ಮಕ್ಕಳೂ ಇದ್ದರು ಎಂದು ಕೆಲವು ಪುಸ್ತಕಗಳು ಹೇಳುತ್ತವೆ. ಇದರ ಬಗ್ಗೆ ನೀವು ಕೇಳಿದ್ದೀರಾ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಸತ್ಯವಿಷಯವನ್ನು ತಿಳಿಯುವುದು ಪ್ರಾಮುಖ್ಯ. [ಯೋಹಾನ 17:3 ಓದಿ.] ಯೇಸುವಿನ ಕುರಿತು ಬೈಬಲ್ ಹೇಳುವುದನ್ನು ನಂಬಲು ಈ ಲೇಖನ ಹಲವಾರು ಕಾರಣಗಳನ್ನು ಕೊಡುತ್ತದೆ.” ಪುಟ 26ರಿಂದ ಆರಂಭವಾಗುವ ಲೇಖನ ತೋರಿಸಿರಿ.
ಎಚ್ಚರ! ಏಪ್ರಿಲ್-ಜೂನ್
“ಅಪ್ಪ ಅಥವಾ ಅಮ್ಮನ ಸಾವಿನಿಂದ ಹೇಳಲಾಗದಷ್ಟು ದುಃಖವಾಗುತ್ತದೆ. ಇದನ್ನು ನೀವೂ ಒಪ್ಪುತ್ತೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಇಂದು ಅನೇಕರಿಗೆ ಸಾಂತ್ವನ ನೀಡಿರುವ ಸೃಷ್ಟಿಕರ್ತನ ವಾಗ್ದಾನವನ್ನು ನಿಮಗೆ ಓದಿಹೇಳಲೋ? [ಮನೆಯವನು ಒಪ್ಪುವಲ್ಲಿ ಪ್ರಕಟನೆ 21:4 ಓದಿ.] ಅಂಥ ಸಮಯದಲ್ಲಿ ದುಃಖದ ಪ್ರವಾಹದಲ್ಲಿ ಕೊಚ್ಚಿಹೋಗದಿರಲು ವಿಶೇಷವಾಗಿ ಒಬ್ಬ ಯುವವ್ಯಕ್ತಿ ಏನು ಮಾಡಬೇಕೆಂದು ಈ ಲೇಖನ ವಿವರಿಸುತ್ತದೆ.” ಪುಟ 10ರಿಂದ ಆರಂಭವಾಗುವ ಲೇಖನ ತೋರಿಸಿರಿ.