ಏಪ್ರಿಲ್ 6ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 6ರಿಂದ ಆರಂಭವಾಗುವ ವಾರ
ಗೀತೆ 37
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 7-10
ನಂ. 1: ವಿಮೋಚನಕಾಂಡ 9:1-19
ನಂ. 2: ಕುಟುಂಬದಲ್ಲಿ ಹೆಂಡತಿಸದೃಶ ಅಧೀನತೆ (fy-KA ಪು. 34, 35 ¶16-19)
ನಂ. 3: ಗಲಾತ್ಯ 6:2ನ್ನು ಗಲಾತ್ಯ 6:5ರೊಂದಿಗೆ ಹೇಗೆ ಸಮನ್ವಯಗೊಳಿಸಬಹುದು?
❑ ಸೇವಾ ಕೂಟ:
ಗೀತೆ 52
5 ನಿ: ಪ್ರಕಟಣೆಗಳು.
10 ನಿ: ಬಲವಾದ ವಾದಸರಣಿಗಳನ್ನು ನೀಡುವುದು. ಶುಶ್ರೂಷಾ ಶಾಲೆ ಪುಸ್ತಕದ ಪುಟ 255-257 ರ ಮೇಲೆ ಆಧಾರಿತ ಉತ್ಸಾಹಭರಿತ ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ.
20 ನಿ: ಯುವ ಜನರೇ—ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುವಿರಿ? ಈ ಟ್ರ್ಯಾಕ್ಟನ್ನು ಹಿರಿಯನು ಸಭಿಕರೊಂದಿಗೆ ಚರ್ಚಿಸುತ್ತಾನೆ. ದೇವರ ರಾಜ್ಯವನ್ನು ಪ್ರಥಮವಾಗಿಡಲು ಪ್ರಯತ್ನಿಸುತ್ತಿರುವ ಸ್ನಾತ ಯುವ ಜನರನ್ನು ಹಾರ್ದಿಕವಾಗಿ ಪ್ರಶಂಸಿಸಿ. ಚಿಕ್ಕ ಪ್ರಾಯದಿಂದಲೇ ಪೂರ್ಣಸಮಯದ ಸೇವೆಯನ್ನು ಮಾಡುತ್ತಿರುವ ಒಬ್ಬರನ್ನು ಸಂಕ್ಷಿಪ್ತವಾಗಿ ಇಂಟರ್ವ್ಯೂ ಮಾಡಿರಿ: ‘ಆ ನಿರ್ಣಯವನ್ನು ಮಾಡುವಂತೆ ನಿಮ್ಮನ್ನು ಪ್ರಭಾವಿಸಿದ್ದು ಯಾವುದು? ಯಾವ ಆಶೀರ್ವಾದಗಳು ನಿಮಗೆ ದೊರೆತವು?’
ಗೀತೆ 72