ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2009, ಏಪ್ರಿಲ್27ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2009ರ ಮಾರ್ಚ್ 2ರಿಂದ ಏಪ್ರಿಲ್ 27ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲೆ ಆಧಾರಿತವಾದ 20-ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
1. ನಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸುವ ಮತ್ತು ಅದಕ್ಕೆ ಸ್ಪಂದಿಸುವುದರ ಬಗ್ಗೆ ಯೋಸೇಫನ ಕುರಿತ ಘಟನೆ ಏನನ್ನು ತೋರಿಸುತ್ತದೆ? (ಆದಿ. 39:7-12) [w07-KA 11/1 ಪು. 10 ಪ್ಯಾರ 16]
2. ನಮ್ಮ ವಿರುದ್ಧವಾಗಿ ತಪ್ಪುಮಾಡಿದವರನ್ನು ಕ್ಷಮಿಸುವುದರಲ್ಲಿ ಯೋಸೇಫನು ಹೇಗೆ ಒಂದು ಅತ್ಯುತ್ತಮ ಮಾದರಿಯಾಗಿದ್ದಾನೆ? (ಆದಿ. 45: 4, 5) [w99-KA 1/1 ಪು. 31 ಪ್ಯಾರ 2-3]
3. “ರಾಜದಂಡ” ಮತ್ತು “ಮುದ್ರೆಕೋಲು” ಎಂಬವುಗಳ ಅರ್ಥವೇನು? (ಆದಿ. 49:10) [w04-KA 1/15 ಪು. 29]
4. “ನನ್ನ ಎಲುಬುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಬೇಕು” ಎಂದು ಯೋಸೇಫನು ಹೇಳಿದ್ದರ ಪರಿಣಾಮವೇನಾಗಿತ್ತು? (ಆದಿ. 50:25, NIBV) [w07-KA 6/1 ಪು. 28 ಪ್ಯಾರ 10]
5. ಸವಾಲಾಗಿರುವ ಒಂದು ನೇಮಕವು ದೊರೆತಾಗ ಯಾವುದು ನಮ್ಮಲ್ಲಿ ಭರವಸೆಯನ್ನು ಮೂಡಿಸಬಲ್ಲದು? (ವಿಮೋ. 4:10, 13) [w04-KA 3/15 ಪು. 25 ಪ್ಯಾರ 5]
6. ಯೆಹೋವನು ಫರೋಹನೊಂದಿಗೆ ವ್ಯವಹರಿಸಿದ ರೀತಿಯಿಂದ ಉಂಟಾದ ಫಲಿತಾಂಶವೇನು ಮತ್ತು ಆ ಘಟನೆಯು ನಮ್ಮ ಮೇಲೆ ಹೇಗೆ ಪ್ರಭಾವಬೀರಬೇಕು? (ವಿಮೋ. 9:13-16) [w05-KA 5/15 ಪು. 21 ಪ್ಯಾರ 8]
7. ವಿಮೋಚನಕಾಂಡ 14:30, 31ಕ್ಕೆ ನಮ್ಮ ದಿನಗಳಲ್ಲಿ ಯಾವ ಅರ್ಥವಿದೆ? [w04-KA 3/15 ಪು. 26 ಪ್ಯಾರ 5]
8. ವಿಮೋಚನಕಾಂಡ 16:1-3ರಲ್ಲಿರುವಂತೆ ದೂರುವುದರಲ್ಲಿ ಯಾವ ಅಪಾಯಗಳಿವೆ? [w06-KA 8/1 ಪು. 7 ಪ್ಯಾರ 4, 5]
9. ವಿಮೋಚನಕಾಂಡ 19:5, 6ರಲ್ಲಿ ಕೊಡಲಾಗಿರುವ ಧರ್ಮಶಾಸ್ತ್ರದ ಒಡಂಬಡಿಕೆಯ ಷರತ್ತುಗಳನ್ನು ಪರಿಗಣಿಸುವಾಗ ಇಸ್ರಾಯೇಲು ಎಷ್ಟರ ಮಟ್ಟಿಗೆ “ಯಾಜಕರಾಜ್ಯವೂ ಪರಿಶುದ್ಧಜನವೂ” ಆಗಿತ್ತು? [w95-KA 7/1 ಪು. 16 ಪ್ಯಾರ 8]
10. ಲೋಭದ ಕುರಿತಾದ ಹತ್ತನೇ ಆಜ್ಞೆಯು ಯಾವ ವಿಧದಲ್ಲಿ ಮಾನವನಿರ್ಮಿತ ಆಜ್ಞೆಗಳನ್ನು ಮೀರಿಸುತ್ತದೆ? (ವಿಮೋ. 20:17) [w06-KA 7/1 ಪು. 16 ಪ್ಯಾರ 16]