ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/09 ಪು. 3
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2009 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಆಡಳಿತ ಮಂಡಲಿಗೂ ಕಾನೂನುಬದ್ಧ ಸಂಘಟನೆಗೂ ಇರುವ ವ್ಯತ್ಯಾಸ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಒಂದು ವಿಶೇಷ ಪ್ರಕಟನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಯೆಹೋವನ ಆರಾಧನೆಗಾಗಿ ಇರುವ ಸ್ಥಳಗಳು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ಕೊಡುವುದರಿಂದ ಸಿಗುವ ಸಂತೋಷದ ಬಗ್ಗೆ ನಿಮಗೆ ಗೊತ್ತಿದೆಯೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
2009 ನಮ್ಮ ರಾಜ್ಯದ ಸೇವೆ
km 4/09 ಪು. 3

ಪ್ರಶ್ನಾ ಚೌಕ

◼ ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲ್ಪಡುವ ಕಾನೂನುಬದ್ಧ ನಿಗಮಗಳ ‘ಲೋಗೋ’ಗಳನ್ನು ಸಭೆಗಳು ಅಥವಾ ವ್ಯಕ್ತಿಗಳು ಬಳಸುವುದು ಸೂಕ್ತವೋ?

ಲೋಗೋ ಎಂದರೆ ಒಂದು ಸಂಸ್ಥೆಯನ್ನು ಸುಲಭವಾಗಿ ಮತ್ತು ನಿಖರವಾಗಿ ಗುರುತಿಸುವುದಕ್ಕಾಗಿ ರಚಿಸಲ್ಪಟ್ಟ ಹೆಸರು, ಚಿಹ್ನೆ ಅಥವಾ ಮುದ್ರೆಯಾಗಿದೆ. ನಮ್ಮ ಸಂಘಟನೆಯು ಉಪಯೋಗಿಸುವ ದ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಇಂಡಿಯಾ ಮತ್ತು ಇತರ ಕಾನೂನುಬದ್ಧ ನಿಗಮಗಳನ್ನು ‘ವಾಚ್‌ ಟವರ್‌’ ಲೋಗೋ ಪ್ರತಿನಿಧಿಸುತ್ತದೆ. ಜೆಹೊವಾಸ್‌ ವಿಟ್ನೆಸಸ್‌ ಆಫ್‌ ಇಂಡಿಯಾ ತನ್ನ ಲೆಟರ್‌ಹೆಡ್‌ಗಳಲ್ಲಿ ಉಪಯೋಗಿಸುವ ಲೋಗೋ ‘ತೆರೆದ ಬೈಬಲ್‌’ ಆಗಿದೆ. ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲ್ಪಡುವ ಇತರ ನಿಗಮಗಳಿಗೆ ಬೇರೆ ಬೇರೆ ಲೋಗೋಗಳಿವೆ.

ಸಂಘಟನೆಯ ಕಾನೂನುಬದ್ಧ ನಿಗಮಗಳ ಲೋಗೋಗಳನ್ನು ಅಥವಾ ಹೆಸರುಗಳನ್ನು ಹಾಗೂ ಅದನ್ನು ಹೋಲುವಂಥ ಇತರ ಚಿಹ್ನೆಗಳನ್ನು ಸಹ ಸಭೆಗಳು ಅಥವಾ ವ್ಯಕ್ತಿಗಳು ತಮ್ಮ ರಾಜ್ಯ ಸಭಾಗೃಹಗಳ ಮೇಲೆ, ಅವನ್ನು ಗುರುತಿಸುವ ಹೆಸರಿನ ಫಲಕಗಳಲ್ಲಿ, ಲೆಟರ್‌ಹೆಡ್‌ಗಳಲ್ಲಿ, ವೈಯಕ್ತಿಕ ವಸ್ತುಗಳೇ ಮುಂತಾದವುಗಳಲ್ಲಿ ಉಪಯೋಗಿಸಬಾರದು. ಸಂಘಟನೆಯ ಅಂಥ ಲೋಗೋಗಳನ್ನು ಸಭೆಗಳು ಉಪಯೋಗಿಸುವುದರಿಂದ ಸಾರ್ವಜನಿಕ ಅಧಿಕಾರಿಗಳಲ್ಲಿ, ಪ್ರಚಾರಕರಲ್ಲಿ ಮತ್ತು ಇತರರಲ್ಲಿ ಗಲಿಬಿಲಿ ಉಂಟಾಗಸಾಧ್ಯವಿದೆ. ಹೇಗೆಂದರೆ ಸಂಘಟನೆಯ ಕಾನೂನುಬದ್ಧ ನಿಗಮಗಳೊಂದಿಗೆ ಸಭೆಗಳಿಗೆ ಯಾವ ಕಾನೂನುಬದ್ಧ ಸಂಬಂಧವಿದೆ ಎಂಬ ವಿಷಯದಲ್ಲಿ ಗಲಿಬಿಲಿಯಾಗಸಾಧ್ಯವಿದೆ. ಅದೇ ರೀತಿ ಪತ್ರವ್ಯವಹಾರಗಳು ಮುಖ್ಯ ಕಾರ್ಯಾಲಯದಿಂದಲೋ ಬ್ರಾಂಚ್‌ ಆಫೀಸಿನಿಂದಲೋ ಮಂಜೂರಾಗಿ ಕಳುಹಿಸಲಾಗಿವೆಯೆಂಬ ತಪ್ಪು ಗ್ರಹಿಕೆಯನ್ನು ಅದು ಕೊಡಲೂಬಹುದು.

ಮುಂದಣ ದಿನಗಳ ರಾಜ್ಯ ಸಭಾಗೃಹ ನಿರ್ಮಾಣ ಯೋಜನೆಯಲ್ಲಿ ವಾಚ್‌ ಟವರ್‌ ಲೋಗೋವನ್ನಾಗಲಿ ಅಥವಾ ಅದಕ್ಕೆ ಹೋಲುವ ಚಿಹ್ನೆಯನ್ನಾಗಲಿ ಉಪಯೋಗಿಸಬಾರದು. ಆ ರಾಜ್ಯ ಸಭಾಗೃಹವು ವಾಚ್‌ ಟವರ್‌ ನಿಗಮವೊಂದಕ್ಕೆ ಸೇರಿದ್ದಾಗಿದ್ದರು ಕೂಡ ಅದನ್ನು ಬಳಸಬಾರದು. ಆದರೂ ಅಂಥ ಲೋಗೋಗಳನ್ನು ಹೊಂದಿರುವ ರಾಜ್ಯ ಸಭಾಗೃಹಗಳಿರುವ ಸಭೆಗಳು ತಮ್ಮ ಹೆಸರಿನ ಫಲಕಗಳನ್ನು ಅಥವಾ ವಿನ್ಯಾಸಗಳನ್ನು ಕೂಡಲೇ ಬದಲಾಯಿಸುವ ಅವಶ್ಯವಿಲ್ಲ. ಏಕೆಂದರೆ ಅಂಥ ಬದಲಾವಣೆಗಳಿಗಾಗಿ ತುಂಬ ಕೆಲಸ, ವಿನ್ಯಾಸ, ಸಮಯ, ಶ್ರಮ ಮತ್ತು ವೆಚ್ಚ ತಗಲಬಹುದು. ಆದರೆ ಅದರಲ್ಲಿ ಚಿಕ್ಕ ಚಿಕ್ಕ ಬದಲಾವಣೆ ಮತ್ತು ಸ್ವಲ್ಪವೇ ಕೆಲಸ ಕೂಡಿರುವಲ್ಲಿ ಬದಲಾಯಿಸಲು ಯೋಜನೆ ಮಾಡಬೇಕು. ಇಲ್ಲವಾದರೆ ಕಟ್ಟಡದ ಅಥವಾ ಫಲಕದ ನವೀಕರಣದ ಸಮಯದಲ್ಲಿ ಅದನ್ನು ಬದಲಾಯಿಸಸಾಧ್ಯವಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ