ಸಾರುವಿಕೆ ನಮ್ಮನ್ನು ಆಧ್ಯಾತ್ಮಿಕವಾಗಿ ಬಲಪಡಿಸುತ್ತದೆ
1. ಸಾರುವ ಕಾರ್ಯವು ನಮಗೆ ಯಾವ ಪ್ರಯೋಜನಗಳನ್ನು ತರುತ್ತದೆ?
1 ಸಾರುವ ಕೆಲಸದಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳುವುದು ನಮ್ಮನ್ನು ಆಧ್ಯಾತ್ಮಿಕವಾಗಿ ಬಲಗೊಳಿಸುತ್ತದೆ ಮತ್ತು ನಮ್ಮ ಸಂತೋಷವನ್ನೂ ಹೆಚ್ಚಿಸುತ್ತದೆ. ನಾವು ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದು ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ಎಂಬುದು ನಿಶ್ಚಯ. ಆದರೂ “ವಾಕ್ಯವನ್ನು ಸಾರು” ಎಂಬ ಆಜ್ಞೆಗೆ ವಿಧೇಯರಾಗುವ ಮೂಲಕ ಯೆಹೋವನ ಆಶೀರ್ವಾದಗಳನ್ನು ನಾವು ಪಡೆಯುತ್ತೇವೆ ಹಾಗೂ ಬೇರೆ ರೀತಿಯಲ್ಲೂ ನಾವು ಪ್ರಯೋಜನ ಹೊಂದುತ್ತೇವೆ. (2 ತಿಮೊ. 4:2; ಯೆಶಾ. 48:17, 18) ಸಾರುವಿಕೆಯು ನಮ್ಮನ್ನು ಬಲಪಡಿಸುವುದೂ ಹಾಗೂ ಸಂತೋಷಪಡಿಸುವುದೂ ಹೇಗೆ?
2. ಶುಶ್ರೂಷೆಯು ಯಾವ ರೀತಿಗಳಲ್ಲಿ ನಮ್ಮನ್ನು ಬಲಪಡಿಸುತ್ತದೆ?
2 ಬಲವೂ ಆಶೀರ್ವಾದವೂ ಸಿಗುತ್ತದೆ: ಸದ್ಯದ ತೊಂದರೆಗಳ ಕಡೆಗೆ ಮನಸ್ಸಿಡದೆ ದೇವರ ರಾಜ್ಯದ ಆಶೀರ್ವಾದಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಂತೆ ಸಾರುವಿಕೆಯು ನಮ್ಮನ್ನು ಉತ್ತೇಜಿಸುತ್ತದೆ. (2 ಕೊರಿಂ. 4:18) ಬೈಬಲ್ ಬೋಧನೆಗಳನ್ನು ಇತರರಿಗೆ ವಿವರಿಸುವುದರಿಂದ ನಮ್ಮ ನಂಬಿಕೆಯು ಬಲಗೊಳ್ಳುತ್ತದೆ ಮತ್ತು ಸತ್ಯಕ್ಕಾಗಿ ನಮ್ಮ ಗಣ್ಯತೆಯೂ ಹೆಚ್ಚುತ್ತದೆ. (ಯೆಶಾ. 65:13, 14) ಇತರರು ‘ಲೋಕದ ಭಾಗವಾಗದಿರಲು’ ಆಧ್ಯಾತ್ಮಿಕವಾಗಿ ಬೆಳೆಯುವಂತೆ ನಾವು ಸಹಾಯಮಾಡುವಾಗ, ನಾವು ಸ್ವತಃ ಈ ಲೋಕದಿಂದ ಪ್ರತ್ಯೇಕವಾಗಿರಲು ಬಲಹೊಂದುತ್ತೇವೆ.—ಯೋಹಾ. 17:14, 16; ರೋಮ. 12:2.
3. ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳಲು ನಮ್ಮ ಶುಶ್ರೂಷೆ ಹೇಗೆ ಸಹಾಯಮಾಡುತ್ತದೆ?
3 ಶುಶ್ರೂಷೆಯಲ್ಲಿ ಭಾಗವಹಿಸುವುದರಿಂದ ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳಲು ನಮಗೆ ಸಹಾಯ ಸಿಗುತ್ತದೆ. ಉದಾಹರಣೆಗೆ, ‘ಎಲ್ಲ ರೀತಿಯ ಜನರಿಗೆ ಎಲ್ಲವೂ ಆಗಲು’ ಪ್ರಯತ್ನಿಸುವುದರಿಂದ ನಾವು ದೀನತೆಯನ್ನು ಮತ್ತಷ್ಟು ಬೆಳೆಸಿಕೊಳ್ಳುತ್ತೇವೆ. (1 ಕೊರಿಂ. 9:19-23) ‘ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲಾದ’ ಜನರೊಂದಿಗೆ ಮಾತಾಡುವಾಗ ಕನಿಕರ ಮತ್ತು ಅನುಕಂಪವನ್ನು ಕಲಿಯುವ ಸಂದರ್ಭ ನಮಗಿದೆ. (ಮತ್ತಾ. 9:36) ನಿರಾಸಕ್ತಿ ಮತ್ತು ವಿರೋಧದ ಮಧ್ಯೆಯೂ ಸತತವಾಗಿ ಕೆಲಸಮಾಡುವ ಮೂಲಕ ನಾವು ತಾಳ್ಮೆಯನ್ನು ಕಲಿಯುತ್ತೇವೆ. ಇತರರಿಗೆ ನೆರವಾಗಲಿಕ್ಕಾಗಿ ನಮ್ಮನ್ನೇ ಕೊಟ್ಟುಕೊಳ್ಳುವ ಮೂಲಕ ನಮ್ಮ ಸಂತೋಷವು ಇನ್ನೂ ಹೆಚ್ಚುತ್ತದೆ.—ಅ. ಕಾ. 20:35.
4. ನಿಮ್ಮ ಶುಶ್ರೂಷೆಯ ಬಗ್ಗೆ ನಿಮಗೆ ಹೇಗನಿಸುತ್ತದೆ?
4 ನಮ್ಮ ಆರಾಧನೆಗೆ ಅರ್ಹನಾದ ಏಕಮಾತ್ರ ದೇವರಿಗೆ ಸ್ತುತಿಯನ್ನು ತರುವ ಶುಶ್ರೂಷೆಯು ನಮಗಿರುವುದು ಎಂಥ ಆಶೀರ್ವಾದ! ಶುಶ್ರೂಷೆಯು ನಮಗೆ ಬಲವನ್ನು ಕೊಡುತ್ತದೆ. ಅದು ‘ಸುವಾರ್ತೆಗೆ ಕೂಲಂಕಷ ಸಾಕ್ಷಿಯನ್ನು ಕೊಡುವುದರಲ್ಲಿ’ ಪೂರಾ ಮಗ್ನರಾಗಿರುವವರಿಗೆ ಹೇರಳ ಆಶೀರ್ವಾದಗಳನ್ನು ತರುತ್ತದೆ.—ಅ. ಕಾ. 20:24.