ಸಾರುವಿಕೆಯು ತಾಳಿಕೊಳ್ಳಲು ನಮಗೆ ಸಹಾಯಮಾಡುತ್ತದೆ
1 ‘ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡಲು’ ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (ಇಬ್ರಿ. 12:1, NW) ಓಟಗಾರನಿಗೆ ತನ್ನ ಓಟವನ್ನು ಯಶಸ್ವಿಕರವಾಗಿ ಮುಗಿಸಲು ಹೇಗೆ ತಾಳ್ಮೆಯ ಅಗತ್ಯವಿದೆಯೊ ಹಾಗೆಯೇ ನಮಗೂ ನಿತ್ಯಜೀವವೆಂಬ ಬಹುಮಾನವನ್ನು ಗಳಿಸಲು ತಾಳ್ಮೆಯ ಅಗತ್ಯವಿದೆ. (ಇಬ್ರಿ. 10:36) ನಂಬಿಗಸ್ತಿಕೆಯಿಂದ ಕಡೇ ವರೆಗೆ ತಾಳಿಕೊಳ್ಳಲು ಕ್ರೈಸ್ತ ಶುಶ್ರೂಷೆಯು ನಮಗೆ ಹೇಗೆ ಸಹಾಯಮಾಡಬಲ್ಲದು?—ಮತ್ತಾ. 24:13.
2 ಆಧ್ಯಾತ್ಮಿಕವಾಗಿ ಬಲಪಡಿಸುತ್ತದೆ: ನೀತಿಯ ನೂತನ ಲೋಕದ ಕುರಿತು ಬೈಬಲಿನಲ್ಲಿರುವ ಅದ್ಭುತಕರವಾದ ವಾಗ್ದಾನವನ್ನು ಇತರರಿಗೆ ತಿಳಿಯಪಡಿಸುವುದು, ನಮ್ಮ ನಿರೀಕ್ಷೆಯನ್ನು ಉಜ್ವಲವಾಗಿರಿಸಲು ಸಹಾಯಮಾಡುತ್ತದೆ. (1 ಥೆಸ. 5:8) ನಾವು ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವಾಗ, ಬೈಬಲಿನಿಂದ ನಾವು ಕಲಿತುಕೊಂಡಿರುವ ಸತ್ಯಗಳನ್ನು ಇತರರಿಗೆ ತಿಳಿಸುವ ಸಂದರ್ಭವು ನಮಗೆ ಸಿಗುತ್ತದೆ. ನಮ್ಮ ನಂಬಿಕೆಯನ್ನು ಸಮರ್ಥಿಸುವ ಸದವಕಾಶ ನಮಗಿರುತ್ತದೆ ಮತ್ತು ಇದು, ನಮ್ಮನ್ನು ಆಧ್ಯಾತ್ಮಿಕವಾಗಿ ಬಲಪಡಿಸಲು ಸಹಾಯಕರವಾಗಿರುತ್ತದೆ.
3 ಇತರರಿಗೆ ಪರಿಣಾಮಕಾರಿಯಾಗಿ ಬೋಧಿಸಬೇಕಾದರೆ ಮೊದಲಾಗಿ ನಾವು ಬೈಬಲಿನ ಸತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿರಬೇಕು. ವಿಷಯಗಳ ಕುರಿತು ಸಂಶೋಧನೆಮಾಡಿ, ಅದರ ಕುರಿತು ಧ್ಯಾನಿಸಬೇಕು. ನಾವು ಮಾಡುವ ಶ್ರದ್ಧಾಪೂರ್ವಕ ಪ್ರಯತ್ನವು ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ, ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ಆಧ್ಯಾತ್ಮಿಕವಾಗಿ ನಮ್ಮನ್ನು ಚೈತನ್ಯಗೊಳಿಸುತ್ತದೆ. (ಜ್ಞಾನೋ. 2:3-5) ಹೀಗೆ, ಇತರರಿಗೆ ಸಹಾಯಮಾಡಲು ನಾವು ಪ್ರಯತ್ನಿಸುವಾಗ ನಮ್ಮನ್ನು ನಾವೇ ಬಲಪಡಿಸಿಕೊಳ್ಳುತ್ತೇವೆ.—1 ತಿಮೊ. 4:15, 16.
4 ಪಿಶಾಚನ ಮತ್ತು ಅವನ ದೆವ್ವಗಳ ವಿರುದ್ಧ ಸ್ಥಿರವಾಗಿ ನಿಲ್ಲಲು ನಮಗೆ ಅಗತ್ಯವಾಗಿರುವ “ದೇವರು ದಯಪಾಲಿಸುವ ಸರ್ವಾಯುಧ”ಗಳಲ್ಲಿ ಒಂದು ಪ್ರಾಮುಖ್ಯ ಆಯುಧವು ಶುಶ್ರೂಷೆಯಲ್ಲಿ ಹುರುಪಿನ ಭಾಗವಹಿಸುವಿಕೆಯೇ ಆಗಿದೆ. (ಎಫೆ. 6:10-13, 15) ಪವಿತ್ರ ಸೇವೆಯಲ್ಲಿ ನಾವು ಕಾರ್ಯಮಗ್ನರಾಗಿರುವುದು, ನಮ್ಮ ಮನಸ್ಸನ್ನು ಭಕ್ತಿವರ್ಧಕ ವಿಷಯಗಳ ಮೇಲೆ ಕೇಂದ್ರೀಕರಿಸಿಡುವಂತೆ ಮತ್ತು ಸೈತಾನನ ಲೋಕದಿಂದ ಭ್ರಷ್ಟಗೊಳ್ಳದೆ ಇರುವಂತೆ ಸಹಾಯಮಾಡುತ್ತದೆ. (ಕೊಲೊ. 3:2) ಯೆಹೋವನ ಮಾರ್ಗಗಳನ್ನು ನಾವು ಇತರರಿಗೆ ಕಲಿಸುವಾಗ, ನಾವು ಸಹ ಶುದ್ಧ ನಡತೆಯನ್ನು ಕಾಪಾಡಿಕೊಳ್ಳಬೇಕೆಂದು ಯಾವಾಗಲೂ ಜ್ಞಾಪಿಸಲ್ಪಡುತ್ತೇವೆ.—1 ಪೇತ್ರ 2:12.
5 ದೇವರಿಂದ ಬಲಗೊಳಿಸಲ್ಪಟ್ಟವರು: ಅಂತಿಮವಾಗಿ, ಸೌವಾರ್ತಿಕ ಕೆಲಸದಲ್ಲಿ ಪಾಲ್ಗೊಳ್ಳುವುದು ಯೆಹೋವನ ಮೇಲೆ ಅವಲಂಬಿಸುವುದನ್ನು ನಮಗೆ ಕಲಿಸುತ್ತದೆ. (2 ಕೊರಿಂ. 4:1, 7) ಇದು ನಿಜವಾಗಿಯೂ ಉತ್ತಮವಾದ ಸಂಗತಿಯಾಗಿದೆ! ಅಂಥ ಭರವಸೆಯನ್ನು ಬೆಳೆಸಿಕೊಳ್ಳುವುದು, ನಮ್ಮ ಶುಶ್ರೂಷೆಯನ್ನು ನೆರವೇರಿಸಲು ನಮ್ಮನ್ನು ಸಜ್ಜುಗೊಳಿಸುವುದಲ್ಲದೆ, ಜೀವನದಲ್ಲಿ ನಾವು ಎದುರಿಸುವ ಎಲ್ಲ ಸನ್ನಿವೇಶಗಳನ್ನು ನಿಭಾಯಿಸಲು ಸಹ ನಮ್ಮನ್ನು ಸಜ್ಜುಗೊಳಿಸುತ್ತದೆ. (ಫಿಲಿ. 4:11-13) ಯೆಹೋವನ ಮೇಲೆ ಸಂಪೂರ್ಣವಾಗಿ ಅವಲಂಬಿಸಲು ಕಲಿತುಕೊಳ್ಳುವುದು ತಾಳಿಕೊಳ್ಳಲಿಕ್ಕಾಗಿರುವ ಕೀಲಿ ಕೈಯಾಗಿದೆ. (ಕೀರ್ತ. 55:22) ಹೀಗೆ ಅನೇಕ ವಿಧಗಳಲ್ಲಿ, ಸಾರುವಿಕೆಯು ತಾಳಿಕೊಳ್ಳಲು ನಮಗೆ ಸಹಾಯಮಾಡುತ್ತದೆ.