ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಕೆಳಗಿನ ಪ್ರಶ್ನೆಗಳನ್ನು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಪರಿಗಣಿಸಲಾಗುವುದು.
1. ವಿಮೋಚನಕಾಂಡ 23:19ರಲ್ಲಿರುವ ನಿಷೇಧದಿಂದ ನಾವೇನು ಕಲಿಯಸಾಧ್ಯವಿದೆ? [w06-KA 4/1 ಪು. 31 ಪ್ಯಾರ 1-5]
2. ಊರೀಮ್ ಮತ್ತು ತುಮ್ಮೀಮ್ ಎಂದರೇನು, ಮತ್ತು ಪುರಾತನ ಇಸ್ರಾಯೇಲಿನಲ್ಲಿ ಅವುಗಳನ್ನು ಹೇಗೆ ಉಪಯೋಗಿಸುತ್ತಿದ್ದರು? (ವಿಮೋ. 28:30) [w06-KA 1/15 ಪು. 18; w01-KA 9/1 ಪು. 27]
3. ಯೆಹೋವನು ಹೇಗೆ ಮೋಶೆಯೊಂದಿಗೆ “ಮುಖಾಮುಖಿಯಾಗಿ” ಮಾತಾಡಿದನು? (ವಿಮೋ. 33:11, 20) [w04-KA 3/15 ಪು. 27]
4. ಇಸ್ರಾಯೇಲ್ಯರು ಗುಡಾರವನ್ನು ಕಟ್ಟಲು ಉದಾರ ಕಾಣಿಕೆಯಾಗಿ ತಮ್ಮ ಸಂಪತ್ತು ಹಾಗೂ ಕೌಶಲಗಳನ್ನು ನೀಡಿದ ವಿಷಯದಿಂದ ನಾವು ಯಾವ ಪಾಠ ಕಲಿಯಸಾಧ್ಯವಿದೆ? (ವಿಮೋ. 35:5, 10) [w99-KA 11/1 ಪು. 31, ಪ್ಯಾರ 1-2]
5. ವಿಮೋಚನಕಾಂಡ 40:28ರಲ್ಲಿ ತಿಳಿಸಲಾದ ಪರದೆಯು ದೇವರ ಮಹಾ ಆಧ್ಯಾತ್ಮಿಕ ಆಲಯದಲ್ಲಿ ಏನನ್ನು ಸೂಚಿಸುತ್ತದೆ? [w00-KA 1/15 ಪು. 15 ಪ್ಯಾರ 7-8]
6. ಯಜ್ಞವೇದಿಯ ಮೇಲೆ ಸಂಪೂರ್ಣವಾಗಿ ಅರ್ಪಿಸಲಾಗುತ್ತಿದ್ದ ‘ಸರ್ವಾಂಗಹೋಮವು’ ಯೇಸುವಿನ ಯಜ್ಞದ ಯಾವ ಅಂಶವನ್ನು ನಮ್ಮ ಮನಸ್ಸಿಗೆ ತರುತ್ತದೆ? (ಯಾಜ. 1:13) [w04-KA 5/15 ಪು. 21 ಪ್ಯಾರ 3]
7. “ಕೊಬ್ಬೆಲ್ಲವೂ ಯೆಹೋವನದು” ಎಂಬ ವಿಷಯವು ನಮ್ಮನ್ನು ಹೇಗೆ ಪ್ರಭಾವಿಸುತ್ತದೆ? (ಯಾಜ. 3:16, 17) [w04-KA 5/15 ಪು. 22 ಪ್ಯಾರ 2]
8. ಯಜ್ಞವೇದಿಯ ಬುಡದಲ್ಲಿ ರಕ್ತವನ್ನು ಹೊಯಿದುಬಿಡುವ ಮತ್ತು ಅದನ್ನು ಬೇರೆಬೇರೆ ವಸ್ತುಗಳ ಮೇಲೆ ಹಾಕುವುದರ ಮಹತ್ವಾರ್ಥವೇನು? (ಯಾಜ. 9:9) [w04-KA 5/15 ಪು. 22 ಪ್ಯಾರ 5]
9. ಯಾಜಕಕಾಂಡ 12:8ರಿಂದ ಯೇಸುವಿನ ಹೆತ್ತವರ ಕುರಿತು ನಾವು ಯಾವ ಒಳನೋಟವನ್ನು ಪಡೆಯಬಹುದು ಮತ್ತು ಇದರಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? [w98-KA 12/15 ಪು. 6 ಪ್ಯಾರ 5]
10. ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಅನ್ವಯವು ಇಸ್ರಾಯೇಲಿನ ವಾರ್ಷಿಕ ದೋಷಪರಿಹಾರಕ ದಿನದಂದು ಹೇಗೆ ಮುನ್ಸೂಚಿಸಲ್ಪಟ್ಟಿತು? (ಯಾಜ. 16:11-16) [w98-KA 2/15 ಪು. 12 ಪ್ಯಾರ 2]