ಮಾರ್ಚ್ 22ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 22ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ, ಪರಿಶಿಷ್ಟ, ಪು. 239ರ ಉಪಶೀರ್ಷಿಕೆಯಿಂದ ಪು. 242ರ ಕೊನೆಯ ವರೆಗೆ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಸಮುವೇಲ 10-13
ನಂ. 1: 1 ಸಮುವೇಲ 10:17-27
ನಂ. 2: ನಿಮ್ಮ ಗಂಡನು ಒಬ್ಬ ವಿಭಿನ್ನ ನಂಬಿಕೆಯವನಾಗಿದ್ದರೆ (fy ಪು. 129-132 ¶3-9)
ನಂ. 3: ವಿಕಾಸವಾದವು ಏಕೆ ಕ್ರೈಸ್ತತ್ವಕ್ಕೆ ವಿರುದ್ಧವಾಗಿದೆ?
❑ ಸೇವಾ ಕೂಟ:
5 ನಿ: ಪ್ರಕಟಣೆಗಳು. ಜ್ಞಾಪಕಾಚರಣೆಗೆ ಸಂಬಂಧಿಸಿದ ಅಗತ್ಯವಿರುವ ಯಾವುದೇ ಕೊನೆಯ ಪ್ರಕಟಣೆಗಳನ್ನೂ ಒಳಗೂಡಿಸಿ.
15 ನಿ: ಏಪ್ರಿಲ್-ಜೂನ್ ಕಾವಲಿನಬುರುಜು ವಿಶೇಷ ಸಂಚಿಕೆಯನ್ನು ನೀಡಲು ತಯಾರಿ. ಈ ಸಂಚಿಕೆಯಲ್ಲಿರುವ ಲೇಖನಗಳನ್ನು ಪರಿಗಣಿಸಿ. ಇದನ್ನು ನೀಡಲು ಸಭಿಕರು ಯಾವ ಪ್ರಶ್ನೆ ಮತ್ತು ವಚನವನ್ನು ಉಪಯೋಗಿಸಲು ಯೋಜಿಸಿದ್ದಾರೆಂದು ಕೇಳಿ. ಬೈಬಲಿನ ವಿಷಯದಲ್ಲಿ ಗೌರವವಿರುವವರಿಗೆ ಮಾತ್ರ ಇದನ್ನು ನೀಡಬೇಕು. ನಿಮ್ಮ ಸಭೆಯ ಟೆರಿಟೊರಿಯಲ್ಲಿ ಕ್ರೈಸ್ತಪ್ರಪಂಚಕ್ಕೆ ಸೇರಿದ ವ್ಯಕ್ತಿಗಳಿರುವ ಪ್ರತಿಯೊಂದು ಮನೆಯಲ್ಲಿ ಇದರ ಒಂದು ಪ್ರತಿಯನ್ನು ಬಿಟ್ಟುಬರಲು ಏರ್ಪಾಡುಗಳನ್ನು ಮಾಡಬೇಕು. ಜಾಣ್ಮೆಯಿಂದಲೂ ಜಾಗ್ರತೆಯಿಂದಲೂ ಪ್ರಸ್ತುತಪಡಿಸಲ್ಪಡುವ ಎರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿ.
15 ನಿ: ಜ್ಞಾಪಕಾಚರಣೆಗೆ ಹಾಜರಾಗಲಿರುವ ಆಸಕ್ತರಿಗೆ ಸಹಾಯಮಾಡಿರಿ. ಹಿರಿಯನಿಂದ ಕೊಡಲ್ಪಡುವ ಭಾಷಣ. ಬೈಬಲ್ ವಿದ್ಯಾರ್ಥಿಗಳು, ನಿಷ್ಕ್ರಿಯ ಪ್ರಚಾರಕರು ಮತ್ತು ಇತರ ಭೇಟಿಗಾರರಿಗೆ ಸಹಾಯನೀಡುವುದರಲ್ಲಿ ಪ್ರಚಾರಕರ ಪಾತ್ರದ ಕುರಿತು ಅವನು ಮರುಜ್ಞಾಪಿಸುತ್ತಾನೆ. (ಮಾರ್ಚ್ 2008ರ ನಮ್ಮ ರಾಜ್ಯ ಸೇವೆಯ ಪುಟ 8 ನೋಡಿ.) ಒಂದು ಚುಟುಕಾದ ಪ್ರತ್ಯಕ್ಷಾಭಿನಯವನ್ನು ಒಳಗೂಡಿಸಿ. ಜ್ಞಾಪಕಾಚರಣೆ ಅವಧಿಯ ಬೈಬಲ್ ಓದುವಿಕೆಯನ್ನು ಮಾಡುವಂತೆ ಎಲ್ಲರಿಗೆ ನೆನಪುಹುಟ್ಟಿಸಿ.