ಮೇ 31ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 31ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 7 ಪ್ಯಾರ. 20-28
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಸಮುವೇಲ 16-18
ನಂ. 1: 2 ಸಮುವೇಲ 17:1-13
ನಂ. 2: ಯೇಸುವನ್ನು “ಸಬ್ಬತ್ತಿನ ಒಡೆಯ” ಎಂದು ಏಕೆ ಕರೆಯಲಾಗಿದೆ? (ಮತ್ತಾ. 12:8)
ನಂ. 3: ಗೃಹ ಹಿಂಸಾಚಾರದಿಂದಾಗುವ ಹಾನಿ (fy ಪು. 147 ಪ್ಯಾರ. 14-17)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: “ಬೈಬಲ್ ಅಧ್ಯಯನ ಹೇಗೆ ನಡೆಸುತ್ತೇವೆಂದು ತೋರಿಸಿಕೊಟ್ಟಿದ್ದೀರೋ?” ಭಾಷಣ. ಲೇಖನದಲ್ಲಿರುವ ಸಲಹೆಯನ್ನು ವಿವರಿಸಿದ ಬಳಿಕ ಅದರ ಒಂದು ಪ್ರತ್ಯಕ್ಷಾಭಿನಯವಿರಲಿ.
20 ನಿ: “ಸಾರಲು ಹೊಸಬರಿಗೆ ತರಬೇತಿ ಕೊಡುವುದು ಹೇಗೆ?” ಪ್ರಶ್ನೋತ್ತರ ಚರ್ಚೆ. ಪ್ಯಾರ 5ನ್ನು ಚರ್ಚಿಸಿದ ಬಳಿಕ ಈ ಪ್ರತ್ಯಕ್ಷಾಭಿನಯವಿರಲಿ: ಹಿರಿಯನೊಬ್ಬನು ಹೊಸ ಪ್ರಚಾರಕನೊಂದಿಗೆ ಸೇವೆಮಾಡುತ್ತಿದ್ದಾನೆ. ಹೊಸ ಪ್ರಚಾರಕನು ಮನೆಯವನೊಂದಿಗೆ ಮಾತಾಡುತ್ತಾನಾದರೂ ಯಾವುದೇ ವಚನ ಓದುವ ಪ್ರಯತ್ನ ಮಾಡುವುದಿಲ್ಲ. ಅವರು ಆ ಮನೆಯಿಂದ ಹೊರಟ ಬಳಿಕ ಹಿರಿಯನು ಅವನಿಗೆ, ಬೈಬಲನ್ನು ವಿವೇಚನೆಯಿಂದ ಬಳಸುವಂತೆ ಉತ್ತೇಜಿಸುತ್ತಾ ಅದನ್ನು ಹೇಗೆ ಮಾಡಬಹುದೆಂಬ ಸಲಹೆಯನ್ನು ಜಾಣ್ಮೆಯಿಂದಲೂ ದಯೆಯಿಂದಲೂ ನೀಡುತ್ತಾನೆ.