ಕ್ಷೇತ್ರ ಸೇವೆಯ ಮುಖ್ಯಾಂಶಗಳು
ಮಾರ್ಚ್ 2010
ಅತ್ಯಂತ ಹರ್ಷದ ಸಂಗತಿಯೇನೆಂದರೆ ಈ ವರ್ಷ ಜ್ಞಾಪಕಾಚರಣೆಯ ಹಾಜರಿ 87,532 ಆಗಿತ್ತು. ಇದು 12% ವೃದ್ಧಿ. ಈ ತಿಂಗಳಲ್ಲಿ 5 ಉಚ್ಚಾಂಕಗಳನ್ನು ತಲಪಿದ್ದೂ ಇನ್ನೊಂದು ಸಂತಸದ ಸಂಗತಿ. 33,089 ಪ್ರಚಾರಕರು ಕ್ಷೇತ್ರ ಸೇವೆಯಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ರೆಗ್ಯುಲರ್ ಪಯನೀಯರರ ಸಂಖ್ಯೆ 2,974. ಇವರೆಲ್ಲರೂ ಶುಶ್ರೂಷೆಯಲ್ಲಿ ಕಳೆದ ಒಟ್ಟು ತಾಸುಗಳು 6,42,608. ಪುನರ್ಭೇಟಿಗಳು 2,18,908 ಮತ್ತು ಬೈಬಲ್ ಅಧ್ಯಯನಗಳು 37,748.