ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜುಲೈ-ಸೆಪ್ಟೆಂಬರ್
“ಸಾಫಲ್ಯಕ್ಕಾಗಿ ಎಲ್ಲರೂ ಶ್ರಮಿಸುತ್ತಾರೆ. ಅದನ್ನು ಪಡೆಯಲು ನಾವೇನು ಮಾಡಬೇಕು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ನಾವು ಸಫಲರಾಗಬೇಕೆಂದು ಸೃಷ್ಟಿಕರ್ತನು ಬಯಸುತ್ತಾನೆ ಮತ್ತು ಅದಕ್ಕಾಗಿ ನಾವೇನು ಮಾಡಬೇಕೆಂಬದನ್ನು ಆತನು ತಿಳಿಸುತ್ತಾನೆ. ಇದನ್ನು ತಿಳಿಸುವ ವಚನವೊಂದನ್ನು ನಿಮಗೆ ಓದಬಹುದಾ? [ಮನೆಯವನ ಪ್ರತಿಕ್ರಿಯೆ ಒಳ್ಳೇದಾಗಿದ್ದರೆ ಯೆಹೋಶುವ 1:6-9 ಓದಿ.] ಈ ವಚನದ ಅರ್ಥವನ್ನು ಈ ಲೇಖನ ವಿವರಿಸುತ್ತದೆ.” ಪುಟ 20ರಲ್ಲಿರುವ ಲೇಖನ ತೋರಿಸಿರಿ.
ಎಚ್ಚರ! ಜುಲೈ-ಸೆಪ್ಟೆಂಬರ್
“ಮಗು ಹುಟ್ಟುವಾಗ ಎಲ್ಲರಿಗೂ ಎಷ್ಟು ಸಂತೋಷವಾಗುತ್ತದೆ ಅಲ್ಲವೆ? ಆದರೆ ಗರ್ಭಾವಸ್ಥೆಯಲ್ಲಿ ಒಳ್ಳೇ ಆರೈಕೆಮಾಡದಿದ್ದರೆ ಹೆರಿಗೆ ಸಮಯದಲ್ಲಿ ತೊಂದರೆಯಾಗುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ತಾಯಿಮಗುವಿಗೆ ಒಳ್ಳೇ ಆರೈಕೆ ಸಿಗಲು ಏನು ಮಾಡಬೇಕೆಂದು ನೀವೆಣಿಸುತ್ತೀರಾ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಮಾನವ ಜೀವದ ಬಗ್ಗೆ ದೇವರ ನೋಟವೇನೆಂದು ತೋರಿಸುವ ವಚನವೊಂದನ್ನು ನಿಮಗೆ ತೋರಿಸಲಾ? [ಮನೆಯವನು ಆಸಕ್ತಿತೋರಿಸಿದರೆ ಧರ್ಮೋಪದೇಶಕಾಂಡ 22:8 ಓದಿ.] ಈ ಪತ್ರಿಕೆಯು, ನಾವು ತಾಯಿಮಗುವಿನ ಜೀವ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ಏನು ಮಾಡಬಹುದು ಎಂಬದಕ್ಕೆ ಹೆಚ್ಚಿನ ಸಲಹೆಗಳನ್ನು ಕೊಡುತ್ತದೆ.”