ಡಿಸೆಂಬರ್ 27ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 27ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 17 ಪ್ಯಾರ. 1-10
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 25-28
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. “2011ರ ಕ್ಯಾಲೆಂಡರ್ನ ವೈಶಿಷ್ಟ್ಯ—ಕುಟುಂಬ ಆರಾಧನೆ.” ಭಾಷಣ.
10 ನಿ: ಹೊರಮೇರೆಯು ನಮಗೆ ಶುಶ್ರೂಷೆಯಲ್ಲಿ ಹೇಗೆ ನೆರವಾಗಬಲ್ಲದು? ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 167ರಿಂದ ಪುಟ 168 ಪ್ಯಾರ 1ರ ತನಕದ ಮಾಹಿತಿ ಮೇಲೆ ಆಧರಿತ. ಮುಂದಿನ ತಿಂಗಳ ನೀಡುವಿಕೆಯನ್ನು ಉಪಯೋಗಿಸಿ ಪ್ರಚಾರಕನೊಬ್ಬನ ಸ್ವಗತ. ಅವನು ಶುಶ್ರೂಷೆಗೆ ಹೋಗುವ ಮುಂಚೆ ಕೆಲವು ನಿಮಿಷ ತೆಗೆದುಕೊಂಡು ತನ್ನ ನಿರೂಪಣೆಯಲ್ಲಿ ಏನು ಹೇಳಬೇಕೆಂಬ ಮಾನಸಿಕ ಹೊರಮೇರೆ ತಯಾರಿಸುತ್ತಾನೆ.
15 ನಿ: ಜನವರಿಯಲ್ಲಿ ಪತ್ರಿಕೆಗಳನ್ನು ನೀಡಲು ತಯಾರಿ. ಚರ್ಚೆ. ಪತ್ರಿಕೆಗಳಲ್ಲಿರುವ ವಿಷಯಗಳನ್ನು ಒಂದೆರಡು ನಿಮಿಷಗಳಲ್ಲಿ ತಿಳಿಸಿರಿ. ಅನಂತರ 2 ಅಥವಾ 3 ಲೇಖನಗಳನ್ನು ಆಯ್ಕೆಮಾಡಿ. ಆ ಲೇಖನಗಳನ್ನು ಮನೆಯವರಿಗೆ ಪರಿಚಯಿಸಲು ಯಾವ ಪ್ರಶ್ನೆಗಳನ್ನೂ ವಚನಗಳನ್ನೂ ಬಳಸಬಹುದೆಂದು ಸಭಿಕರನ್ನು ಕೇಳಿ. ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿ.