ಡಿಸೆಂಬರ್ 12ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 12ರಿಂದ ಆರಂಭವಾಗುವ ವಾರ
ಗೀತೆ 10 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 12 ಪ್ಯಾರ. 8-14 (25 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಶಾಯ 6-10 (10 ನಿ.)
ನಂ. 1: ಯೆಶಾಯ 6:1-13 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ಆದಿಶಿಷ್ಯರ ಮಾದರಿ—wt ಪು. 104 ಪ್ಯಾರ. 7–ಪು. 105 ಪ್ಯಾರ. 9 (5 ನಿ.)
ನಂ. 3: ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲವೇಕೆ?—1 ಕೊರಿಂ. 13:8; 1 ಯೋಹಾ. 4:8 (5 ನಿ.)
□ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: 2012ರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ. ಶಾಲಾ ಮೇಲ್ವಿಚಾರಕರಿಂದ ಭಾಷಣ. 2012ರ ಶೆಡ್ಯೂಲ್ನಲ್ಲಿರುವ ವಿಷಯಗಳಲ್ಲಿ ನಿಮ್ಮ ಸಭೆ ಪ್ರಗತಿಮಾಡಬೇಕಾದ ಕ್ಷೇತ್ರಗಳನ್ನು ಚರ್ಚಿಸಿ. ಸಹಾಯಕ ಸಲಹೆಗಾರನ ಪಾತ್ರದ ಬಗ್ಗೆ ತಿಳಿಸಿ. ಪ್ರತಿಯೊಬ್ಬರು ತಮ್ಮ ನೇಮಕಗಳನ್ನು ಪೂರೈಸಲು, ಬೈಬಲ್ ಮುಖ್ಯಾಂಶ ಭಾಗದಲ್ಲಿ ಪಾಲ್ಗೊಳ್ಳಲು ಹಾಗೂ ಪ್ರತಿವಾರ ಶುಶ್ರೂಷಾ ಶಾಲೆ ಪುಸ್ತಕದಿಂದ ಕೊಡಲಾಗುವ ಸಲಹೆಗಳನ್ನು ಅನ್ವಯಿಸಲು ಶ್ರದ್ಧಾಪೂರ್ವಕ ಪ್ರಯತ್ನ ಮಾಡುವಂತೆ ಪ್ರೋತ್ಸಾಹಿಸಿ.
15 ನಿ: “24ಗಂಟೆಯೂ ನಾವು ಶುಶ್ರೂಷಕರು.” ಪ್ರಶ್ನೋತ್ತರ. ಪ್ಯಾರ 2ನ್ನು ಚರ್ಚಿಸುವಾಗ, ಅನೌಪಚಾರಿಕ ಸಾಕ್ಷಿ ಕಾರ್ಯದಲ್ಲಿ ನುರಿತರಾಗಿರುವ ಒಬ್ಬ ಪ್ರಚಾರಕರನ್ನು ಚುಟುಕಾಗಿ ಇಂಟರ್ವ್ಯೂ ಮಾಡಿ. ಅನೌಪಚಾರಿಕ ಸಾಕ್ಷಿಕಾರ್ಯಕ್ಕಾಗಿ ಅವರು ಹೇಗೆ ತಯಾರಿ ಮಾಡುತ್ತಾರೆ ಎಂದು ಕೇಳಿ ಹಾಗೂ ಒಳ್ಳೆಯ ಅನುಭವವೊಂದನ್ನು ತಿಳಿಸುವಂತೆ ಹೇಳಿ.
ಗೀತೆ 135 ಮತ್ತು ಪ್ರಾರ್ಥನೆ