ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/12 ಪು. 8
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2012 ನಮ್ಮ ರಾಜ್ಯದ ಸೇವೆ
2012 ನಮ್ಮ ರಾಜ್ಯದ ಸೇವೆ
km 2/12 ಪು. 8

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ ಫೆಬ್ರವರಿ: ಕುಟುಂಬ ಸಂತೋಷದ ರಹಸ್ಯ. ಮಾರ್ಚ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮೊದಲ ಭೇಟಿಯಲ್ಲೇ ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಮನೆಯವನ ಬಳಿ ಈಗಾಗಲೇ ಈ ಪುಸ್ತಕವಿದ್ದಲ್ಲಿ ಮತ್ತು ಬೈಬಲ್‌ ಅಧ್ಯಯನ ಬೇಡವೆಂದಲ್ಲಿ, ಆ ವ್ಯಕ್ತಿಯ ಆಸಕ್ತಿಗೆ ತಕ್ಕಂಥ ಯಾವುದೇ ಹಿಂದಿನ ಹಳೇ ಪತ್ರಿಕೆ ಅಥವಾ ಬ್ರೋಷರನ್ನು ನೀಡಬಹುದು. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಆಸಕ್ತರಿಗೆ, ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಟ್ರ್ಯಾಕ್ಟ್‌ ನೀಡಿ ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿದ್ದರೂ ಯೇಸುವಿನ ಮರಣದ ಸ್ಮರಣೆ ಮತ್ತು ಸಮ್ಮೇಳನ, ಅಧಿವೇಶನಗಳಂಥ ವಿಶೇಷ ಕೂಟಗಳಿಗೆ ಹಾಜರಾಗುವವರನ್ನು ಮತ್ತು ಇತರ ಆಸಕ್ತರನ್ನು ಪುನಃ ಭೇಟಿ ಮಾಡುವಾಗ ಬೈಬಲ್‌ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನ ಆರಂಭಿಸಲು ಪ್ರಯತ್ನಿಸಿ.

◼ ವಿಶೇಷ ಭಾಷಣವನ್ನು ಯೇಸುವಿನ ಮರಣದ ಸ್ಮರಣೆಯ ವಾರಾಂತ್ಯದಂದು ನೀಡಲಾಗುವುದು. ಅದರ ಶೀರ್ಷಿಕೆ: “ಅಂತ್ಯ ಇನ್ನೂ ದೂರದಲ್ಲಿದೆ ಎಂದು ನೆನಸುತ್ತೀರಾ?”

◼ ಪ್ರಚಲಿತ ಸೇವಾ ವರ್ಷದ ವರದಿಯ ಪಟ್ಟಿಯಲ್ಲಿ ಇಲ್ಲವೆ ಇತ್ತೀಚಿನ ವರ್ಷಪುಸ್ತಕದ ಕೊನೆ ಪುಟದ ವಿಳಾಸಗಳಲ್ಲಿ ಕಂಡುಬರದ ಒಂದು ದೇಶವನ್ನು ನೀವು ಸಂದರ್ಶಿಸಬೇಕೆಂದಿರುವಲ್ಲಿ, ಮೊದಲು ನಿಮ್ಮ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ. ಯಾವ ಮುಂಜಾಗ್ರತೆ ತೆಗೆದುಕೊಳ್ಳಬೇಕು, ಯಾವ ವಿಶೇಷ ಸೂಚನೆಗಳನ್ನು ಪಾಲಿಸಬೇಕು ಎಂದು ತಿಳಿದುಕೊಳ್ಳಿ. ಕಾರಣವೇನೆಂದರೆ ಅಲ್ಲಿ ನಮ್ಮ ಸಾರುವ ಕೆಲಸ, ಕೂಟಗಳ ಮೇಲೆ ನಿರ್ಬಂಧಗಳಿರಬಹುದು. (ಮತ್ತಾ. 10:16) ಕೆಲವು ದೇಶಗಳಲ್ಲಿ ಸ್ಥಳೀಯ ಸಾಕ್ಷಿಗಳನ್ನಾಗಲಿ ಸಭೆಗಳನ್ನಾಗಲಿ ಸಂದರ್ಶಕರು ಸಂಪರ್ಕಿಸದಿರುವುದೇ ಉತ್ತಮ. ಅನೌಪಚಾರಿಕ ಸಾಕ್ಷಿ ಕೊಡುವ, ಸಾಹಿತ್ಯ ಕೊಂಡೊಯ್ಯುವ ಬಗ್ಗೆಯೂ ನಿರ್ದೇಶನ ಸಿಗಬಹುದು. ನಿಮ್ಮ ಸಹಕಾರದಿಂದಾಗಿ, ನಿಮಗೂ ನೀವು ಸಂದರ್ಶಿಸುವ ದೇಶದ ಸಹೋದರರ ಸಾರುವ ಕೆಲಸಕ್ಕೂ, ಕೂಟಗಳಿಗೂ ಅನಾವಶ್ಯಕ ತೊಂದರೆಯಾಗುವುದಿಲ್ಲ.—1 ಕೊರಿಂ. 14:33, 40.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ