ಮಾದರಿ ನಿರೂಪಣೆಗಳು
ಕಾವಲಿನಬುರುಜು ಜನವರಿ-ಮಾರ್ಚ್
“ಈಗ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿರುವ ಕಾರಣ ಗಂಡನೊಬ್ಬ ತನ್ನ ಹೆಂಡತಿಯ ಮೇಲಿರುವ ಪ್ರೀತಿ, ಕಾಳಜಿಯನ್ನು ಹೇಗೆಲ್ಲ ತೋರಿಸಬಹುದು? ನೀವೇನು ಹೇಳುತ್ತೀರಿ? [ಉತ್ತರಕ್ಕಾಗಿ ಕಾಯಿರಿ.] ಈ ಕುರಿತು ಬೈಬಲ್ ಏನು ಹೇಳುತ್ತದೆಂದು ನಿಮಗೆ ತೋರಿಸಬಹುದೇ? [ಮನೆಯವರಿಗೆ ಆಸಕ್ತಿಯಿದ್ದರೆ 1 ಪೇತ್ರ 3:7 ಓದಿ. ಪುಟ 30ರ ಲೇಖನ ತೋರಿಸಿ.] ಈ ಲೇಖನದಲ್ಲಿ, ಪತಿಪತ್ನಿ ಹೇಗೆ ಒಬ್ಬರಿಗೊಬ್ಬರು ಗೌರವ ತೋರಿಸಬಹುದೆಂಬದರ ಬಗ್ಗೆ ಸಲಹೆಗಳಿವೆ.”
ಎಚ್ಚರ! ಜನವರಿ-ಮಾರ್ಚ್
“ನಾವಾಡಿದ ಮಾತನ್ನು ಹಿಂದೆ ತೆಗೆದುಕೊಳ್ಳಲು ಸಾಧ್ಯವಾಗಿದ್ದರೆ ಚೆನ್ನಾಗಿತ್ತು ಎಂದು ನಮಗೆಷ್ಟೋ ಬಾರಿ ಅನಿಸಿರುತ್ತದೆ. ನಾವು ಹೇಗೆ ನಮ್ಮ ಮಾತಿನ ಬಗ್ಗೆ ಎಚ್ಚರ ವಹಿಸಬಹುದು? [ಉತ್ತರಕ್ಕಾಗಿ ಕಾಯಿರಿ.] ಈ ವಿಷಯದಲ್ಲಿ ನನಗೆ ನೆರವಾದ ಒಂದು ಬೈಬಲ್ ತತ್ವವನ್ನು ನಿಮಗೆ ತೋರಿಸಬಹುದೇ? [ಮನೆಯವರಿಗೆ ಆಸಕ್ತಿಯಿದ್ದರೆ ಜ್ಞಾನೋಕ್ತಿ 15:28 ಓದಿ. ಪುಟ 31ರ ಲೇಖನ ತೋರಿಸಿ.] ನಮ್ಮ ಮಾತನ್ನು ಉತ್ತಮಗೊಳಿಸಲು ಈ ಲೇಖನ ಒಳ್ಳೊಳ್ಳೆ ಸಲಹೆಗಳನ್ನು ಕೊಡುತ್ತದೆ.”