ಸೆಪ್ಟೆಂಬರ್ 24ರಿಂದ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 24ರ ವಾರ
ಗೀತೆ 12 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 8 ಪ್ಯಾ. 17-24; ಪು. 86ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ದಾನಿಯೇಲ 1-3 (10 ನಿ.)
ನಂ. 1: ದಾನಿಯೇಲ 2:17-30 (4 ನಿಮಿಷದೊಳಗೆ)
ನಂ. 2: ಅಂತ್ಯದ ಸೂಚನೆಗೆ ಲಕ್ಷ್ಯಕೊಟ್ಟು ಎಚ್ಚರವಾಗಿರಿ—ದೇವರನ್ನು ಆರಾಧಿಸಿರಿ ಪು. 177 ಪ್ಯಾ. 6, 7 (5 ನಿ.)
ನಂ. 3: ಪವಿತ್ರಾತ್ಮವನ್ನು ದುಃಖಪಡಿಸದಂತೆ ಹೇಗೆ ನೋಡಿಕೊಳ್ಳಬಹುದು?—ಎಫೆ. 4:30 (5 ನಿ.)
❑ ಸೇವಾ ಕೂಟ:
10 ನಿ: “ಯೆಹೋವನ ವಾಕ್ಯವನ್ನು ಪ್ರತಿದಿನವೂ ಪರಿಗಣಿಸಿರಿ!” ಭಾಷಣ. ಜನವರಿ 2000 ನಮ್ಮ ರಾಜ್ಯದ ಸೇವೆ ಪುಟ 7ರ ಆಧರಿತ. ಪ್ರತಿದಿನ ಬೈಬಲ್ ವಚನಗಳನ್ನು ಪರಿಗಣಿಸಿ ಪುಸ್ತಿಕೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಎಲ್ಲರನ್ನೂ ಪ್ರೋತ್ಸಾಹಿಸಿ. ದಿನದ ವಚನವನ್ನು ತಪ್ಪದೆ ಓದಿ ಚರ್ಚಿಸಲು ಯಾವೆಲ್ಲ ಹೊಂದಾಣಿಕೆ ಮಾಡುತ್ತಾರೆಂದು ಪ್ರಚಾರಕರನ್ನು ಕೇಳಿ.
20 ನಿ: “ಯುವಜನರೇ, ಪ್ರತಿಫಲ ತರುವ ಗುರಿಗಳನ್ನಿಡಿ.” ಪ್ರಶ್ನೋತ್ತರ. ಆಧ್ಯಾತ್ಮಿಕ ಗುರಿಗಳನ್ನಿಡುವಂತೆ, ಅವುಗಳನ್ನು ಸಾಧಿಸಲು ಶ್ರಮಿಸುವಂತೆ ಮಕ್ಕಳನ್ನು ಹುರಿದುಂಬಿಸಿ. ಒಂದಿಬ್ಬರು ರೆಗ್ಯುಲರ್ ಪಯನೀಯರರ ಅಥವಾ ಪೂರ್ಣಸಮಯ ಸೇವೆ ಮಾಡಬೇಕೆಂಬ ಗುರಿಯಿಟ್ಟು ಅದರತ್ತ ಸಾಗುತ್ತಿರುವ ಯೌವನಸ್ಥರ ಸಂದರ್ಶನ ಮಾಡಿ. ಅವರು ಲೌಕಿಕ ಗುರಿಯ ಬದಲು ಆಧ್ಯಾತ್ಮಿಕ ಗುರಿಯನ್ನು ಆರಿಸಿಕೊಂಡ ಕಾರಣ ತಿಳಿಸಲಿ.
ಗೀತೆ 89 ಮತ್ತು ಪ್ರಾರ್ಥನೆ