ಅಕ್ಟೋಬರ್ 1ರಿಂದ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 1ರ ವಾರ
ಗೀತೆ 23 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 9 ಪ್ಯಾ. 1-7 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ದಾನಿಯೇಲ 4-6 (10 ನಿ.)
ನಂ. 1: ದಾನಿಯೇಲ 4:18-28 (4 ನಿಮಿಷದೊಳಗೆ)
ನಂ. 2: ಪ್ರೇತವ್ಯವಹಾರದಿಂದ ಏಕೆ ಸಂಪೂರ್ಣವಾಗಿ ದೂರವಿರಬೇಕು? (5 ನಿ.)
ನಂ. 3: ಕ್ರೈಸ್ತರು ಅಧಿಕಾರಿಗಳನ್ನು ಹೇಗೆ ವೀಕ್ಷಿಸಬೇಕು? (5 ನಿ.)
❑ ಸೇವಾ ಕೂಟ:
15 ನಿ: ಕಳೆದ ವರ್ಷ ನಾವೇನನ್ನು ಸಾಧಿಸಿದೆವು? ಸೇವಾ ಮೇಲ್ವಿಚಾರಕರ ಭಾಷಣ. ಕಳೆದ ಸೇವಾ ವರ್ಷದ ಚಟುವಟಿಕೆಯ ಪುನರವಲೋಕನ ಮಾಡುತ್ತಾ ಸಭೆಯ ಉತ್ತಮ ಸಾಧನೆಗಳ ಬಗ್ಗೆ ಹೇಳಿ. ತಕ್ಕದಾದ ಶ್ಲಾಘನೆ ಕೊಡಿ. ಒಳ್ಳೇ ಅನುಭವಗಳಿರುವ ಒಬ್ಬಿಬ್ಬರು ಪ್ರಚಾರಕರ ಸಂದರ್ಶನ ಮಾಡಿ. ಹೊಸ ಸೇವಾ ವರ್ಷದಲ್ಲಿ ಸಭೆಯು ಶುಶ್ರೂಷೆಯ ಸಂಬಂಧದಲ್ಲಿ ಪ್ರಗತಿ ಮಾಡಬೇಕಾದ ಒಂದೆರಡು ಅಂಶಗಳನ್ನು ತಿಳಿಸಿ, ಪ್ರಾಯೋಗಿಕ ಸಲಹೆಗಳನ್ನು ಕೊಡಿ.
15 ನಿ: ಅಕ್ಟೋಬರ್ ತಿಂಗಳಲ್ಲಿ ಪತ್ರಿಕೆ ನೀಡಲು ಸಲಹೆಗಳು. ಚರ್ಚೆ. ಅಕ್ಟೋಬರ್-ಡಿಸೆಂಬರ್ ಕಾವಲಿನಬುರುಜು ನಿಮ್ಮ ಸೇವಾಕ್ಷೇತ್ರದ ಜನರಿಗೆ ಏಕೆ ಇಷ್ಟವಾಗಬಹುದೆಂದು 30-60 ಸೆಕೆಂಡುಗಳಲ್ಲಿ ತಿಳಿಸಿ. ನಂತರ ಮುಖಪುಟ ಲೇಖನಗಳ ಬಗ್ಗೆ ಆಸಕ್ತಿ ಹುಟ್ಟಿಸಲು ಯಾವ ಪ್ರಶ್ನೆ ಕೇಳಬಹುದೆಂದು ಸಭಿಕರನ್ನು ಕೇಳಿ. ಯಾವ ವಚನ ಓದಬಹುದೆಂದೂ ಕೇಳಿ. ಆ ಪತ್ರಿಕೆಯನ್ನು ಹೇಗೆ ನೀಡಬೇಕೆಂಬ ಪ್ರಾತ್ಯಕ್ಷಿಕೆ ತೋರಿಸಿ.
ಗೀತೆ 85 ಮತ್ತು ಪ್ರಾರ್ಥನೆ