ಡಿಸೆಂಬರ್ 24ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 24ರ ವಾರ
ಗೀತೆ 51 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 13 ಪ್ಯಾ. 11-18 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಜೆಕರ್ಯ 9-14 (10 ನಿ.)
ನಂ. 1: ಜೆಕರ್ಯ 11:1-13 (4 ನಿಮಿಷದೊಳಗೆ)
ನಂ. 2: ಬಿಡುಗಡೆ ಮುಂದಿದೆ!—ದೇವರನ್ನು ಆರಾಧಿಸಿರಿ ಪು. 188-191 ಪ್ಯಾ. 11-15 (5 ನಿ.)
ನಂ. 3: ಜ್ಞಾನೋಕ್ತಿ 15:1ನ್ನು ನಾವು ಯಾವ್ಯಾವ ಸನ್ನಿವೇಶಗಳಲ್ಲಿ ಅನ್ವಯಿಸಬಹುದು? (5 ನಿ.)
❑ ಸೇವಾ ಕೂಟ:
30 ನಿ: ನಮ್ಮ ಅಧಿಕೃತ ವೆಬ್ ಸೈಟನ್ನು ಸದುಪಯೋಗಿಸಿ. ಚರ್ಚೆ. ಪುಟ 3ರಿಂದ 6ರ ಆಧರಿತ. ಪುಟ 4ನ್ನು ಚರ್ಚಿಸುವಾಗ ಮೂರು ನಿಮಿಷದ ಒಂದು ಪ್ರಾತ್ಯಕ್ಷಿಕೆ ಇರಲಿ: ಕುಟುಂಬ ಆರಾಧನೆಯ ಕೊನೆಯಲ್ಲಿ ಕುಟುಂಬದ ಶಿರಸ್ಸು ಮುಂದಿನ ವಾರ ಯಾವ ವಿಷಯದ ಬಗ್ಗೆ ಚರ್ಚಿಸೋಣ ಎಂದು ಕೇಳುತ್ತಾರೆ. ವೆಬ್ ಸೈಟ್ನಲ್ಲಿ “ಹದಿವಯಸ್ಕರಿಗೆ” ಎಂಬ ವಿಭಾಗದಲ್ಲಿರೋ ಕೆಲವೊಂದು ವಿಷಯಗಳನ್ನು ಮಕ್ಕಳು ಹೇಳುತ್ತಾರೆ. ನಂತರ ಸಭಿಕರನ್ನು ಕೇಳಿ: ತಮ್ಮ ಕುಟುಂಬ ಆರಾಧನೆ/ವೈಯಕ್ತಿಕ ಅಧ್ಯಯನದಲ್ಲಿ jw.org ಅನ್ನು ಹೇಗೆ ಉಪಯೋಗಿಸಿದ್ದಾರೆ ಅಥವಾ ಹೇಗೆ ಉಪಯೋಗಿಸಲು ಬಯಸುತ್ತಾರೆ? ಪುಟ 5ನ್ನು ಚರ್ಚಿಸುವಾಗ ಮೂರು ನಿಮಿಷದ ಒಂದು ಪ್ರಾತ್ಯಕ್ಷಿಕೆ ಇರಲಿ: ನಮ್ಮ ನಂಬಿಕೆಗಳ ಬಗ್ಗೆ ಮನೆಯವರು ಕೇಳಿದ ಪ್ರಶ್ನೆಗೆ ಪ್ರಚಾರಕ ತನ್ನ ಮೊಬೈಲಿನಲ್ಲಿ jw.org ತೆರೆದು ಉತ್ತರ ಹೇಳುತ್ತಾರೆ. ಪುಟ 6ನ್ನು ಚರ್ಚಿಸುವಾಗ ನಾಲ್ಕು ನಿಮಿಷದ ಒಂದು ಪ್ರಾತ್ಯಕ್ಷಿಕೆ ಇರಲಿ: ಬೇರೆ ಭಾಷೆ ಮಾತಾಡುವ ಒಬ್ಬ ವ್ಯಕ್ತಿ ತುಂಬ ಆಸಕ್ತಿ ತೋರಿಸುತ್ತಾನೆ. ಪ್ರಚಾರಕ ತನ್ನ ಮೊಬೈಲ್/ಮನೆಯವರ ಕಂಪ್ಯೂಟರ್ನಲ್ಲಿ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಕರಪತ್ರ ಅಥವಾ ಬೈಬಲ್ ಬೋಧಿಸುತ್ತದೆ ಪುಸ್ತಕ ತೋರಿಸಿ ಚರ್ಚಿಸುತ್ತಾರೆ. ಸಭಿಕರು ತಮ್ಮ ಸೇವೆಯಲ್ಲಿ jw.orgಯನ್ನು ಹೇಗೆ ಸದುಪಯೋಗಿಸಿದ್ದಾರೆಂದು ಕೇಳಿ.
ಗೀತೆ 101 ಮತ್ತು ಪ್ರಾರ್ಥನೆ