ಸೆಪ್ಟೆಂಬರ್ 16ರ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 16ರ ವಾರ
ಗೀತೆ 95 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 27 ಪ್ಯಾ. 1-9 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಕೊರಿಂಥ 1-7 (10 ನಿ.)
ನಂ. 1: 2 ಕೊರಿಂಥ 1:15-2:11 (4 ನಿಮಿಷದೊಳಗೆ)
ನಂ. 2: ಮೊದಲನೆಯ ಪುರುಷ ಮತ್ತು ಸ್ತ್ರೀ—ಬೈಬಲ್ಕಥೆಗಳು, ಕಥೆ 3 (5 ನಿ.)
ನಂ. 3: ಯೆಹೋವನ ನಾಮದಲ್ಲಿ ಆಶ್ರಯಪಡೆದುಕೊಳ್ಳಲು ಒಬ್ಬ ವ್ಯಕ್ತಿ ಏನು ಮಾಡಬೇಕು?—ಚೆಫ. 3:12 (5 ನಿ.)
□ ಸೇವಾ ಕೂಟ:
10 ನಿ: ಯುವ ಜನರೇ—ನಿಮ್ಮ ಜೀವಿತವನ್ನು ಹೇಗೆ ಉಪಯೋಗಿಸುವಿರಿ?—ಭಾಗ 2. ಭಾಷಣ. ಈ ಕರಪತ್ರದ ಪ್ಯಾರ 9ರಿಂದ ಕೊನೆ ತನಕ. ಯುವಪ್ರಾಯದಿಂದ ಪೂರ್ಣಸಮಯದ ಸೇವೆ ಮಾಡುತ್ತಿರುವ ಒಬ್ಬರನ್ನು ಚುಟುಕಾಗಿ ಸಂದರ್ಶನ ಮಾಡಿ: ಈ ತೀರ್ಮಾನ ತೆಗೆದುಕೊಳ್ಳುವಂತೆ ಅವರಿಗೆ ಪ್ರೇರಣೆ ನೀಡಿದ್ದು ಯಾವುದು? ಯಾವ್ಯಾವ ಆಶೀರ್ವಾದಗಳನ್ನು ಪಡೆದುಕೊಂಡಿದ್ದಾರೆ?
10 ನಿ: ಒಬ್ಬರೇ ಸೇವೆ ಮಾಡಬೇಕಾಗಿ ಬಂದಾಗ. . . ಚರ್ಚೆ. (1) ಒಬ್ಬರೇ ಕ್ಷೇತ್ರಸೇವೆ ಮಾಡಬೇಕಾಗಿ ಬಂದರೂ ಸಂತೋಷದಿಂದ ಸೇವೆ ಮಾಡಲು ನಮಗೆ ಯಾವುದು ನೆರವಾಗುತ್ತದೆ? (2) ಪುನರ್ಭೇಟಿ ಮಾಡುವಾಗ ನೀವೊಬ್ಬರೇ ಇದ್ದರೆ ಯಾವೆಲ್ಲ ಎಚ್ಚರ ವಹಿಸಬೇಕು? (3) ನಾವು ಸೇವೆಗೆ ಹೋಗಬೇಕಂತ ಇರುವ ದಿನಗಳಲ್ಲಿ ಕ್ಷೇತ್ರಸೇವಾ ಕೂಟ ಇಲ್ಲದಿದ್ದರೆ ನಮ್ಮ ಸಭೆಯ ಇತರ ಪ್ರಚಾರಕರ ಸಹಾಯ ಕೇಳಬಹುದು. ಹೇಗೆ? (4) ಒಬ್ಬರೇ ಸೇವೆ ಮಾಡಬೇಕಂತ ನೀವು ಆಸೆಪಡೋದಾದರೆ ಯಾವಾಗ ಮತ್ತು ಎಂಥಾ ಕ್ಷೇತ್ರಗಳಲ್ಲಿ ಸೇವೆಮಾಡುವುದು ಸುರಕ್ಷಿತ?
10 ನಿ: “ಮಕ್ಕಳೇ—ನೀವು ಯಾವ ಆಧ್ಯಾತ್ಮಿಕ ಗುರಿಗಳನ್ನು ಇಟ್ಟಿದ್ದೀರಾ?” ಪ್ರಶ್ನೋತ್ತರ. ಮೂರು ಪ್ಯಾರಗಳ ಚರ್ಚೆಯ ನಂತರ ಯುವಪ್ರಾಯದಲ್ಲೇ ಪೂರ್ಣಸಮಯದ ಸೇವೆಯನ್ನು ಆಯ್ಕೆ ಮಾಡಿಕೊಂಡ ಒಬ್ಬ ಸಹೋದರ ಅಥವಾ ಸಹೋದರಿಯ ಸಂದರ್ಶನ ಮಾಡಿ.
ಗೀತೆ 107 ಮತ್ತು ಪ್ರಾರ್ಥನೆ