ಅಕ್ಟೋಬರ್ 14ರ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 14ರ ವಾರ
ಗೀತೆ 131 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 28 ಪ್ಯಾ. 10-17 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಫಿಲಿಪ್ಪಿ 1–ಕೊಲೊಸ್ಸೆ 4 (10 ನಿ.)
ನಂ. 1: ಫಿಲಿಪ್ಪಿ 3:17–4:9 (4 ನಿಮಿಷದೊಳಗೆ)
ನಂ. 2: ಒಬ್ಬ ಧೀರ ಪುರುಷ—ಬೈಬಲ್ ಕಥೆಗಳು, ಕಥೆ 7 (5 ನಿ.)
ನಂ. 3: ನಾವು ಪ್ರಲೋಭನೆಗಳನ್ನು ಜಯಿಸಲು ಪ್ರಾರ್ಥನೆ ಹೇಗೆ ಸಹಾಯ ಮಾಡುವುದು?—ಲೂಕ 11:9-13; ಯಾಕೋ. 1:5 (5 ನಿ.)
□ ಸೇವಾ ಕೂಟ:
15 ನಿ: ನಮ್ಮ ಅಂತಾರಾಷ್ಟ್ರೀಯ ಐಕ್ಯ ಬಂಧ ಯೆಹೋವನನ್ನು ಘನಪಡಿಸುತ್ತೆ. ಭಾಷಣ. ಸಂಘಟಿತರು ಪುಸ್ತಕದ ಪುಟ 165 ಪ್ಯಾರ 3ರಿಂದ ಪುಟ 168 ಪ್ಯಾರ 1ರ ತನಕ. ಯೆಹೋವನ ಸಾಕ್ಷಿಗಳ ಮಧ್ಯೆಯಿರುವ ಐಕ್ಯ ಮತ್ತು ಪ್ರೀತಿಯ ಕಾರಣ ಸಾಕ್ಷಿ ನೀಡಲು ಹೇಗೆ ನೆರವಾಯಿತು ಎಂದು ಅನುಭವಗಳನ್ನು ಓದಿರುವುದಾದರೆ ಅವನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
15 ನಿ: “ವಿವೇಚನೆ ಬಳಸಿ ಸುವಾರ್ತೆ ಸಾರಿ.” ಪ್ರಶ್ನೋತ್ತರ. ಮೂರನೇ ಪ್ಯಾರ ಪರಿಗಣಿಸಿದ ನಂತರ ಎರಡು ಚುಟುಕಾದ ಪ್ರಾತ್ಯಕ್ಷಿಕೆ ಇರಲಿ. ಮನೆಯವರ ಪರಿಸ್ಥಿತಿಗೆ ತಕ್ಕಂತೆ ನಿರೂಪಣೆಯನ್ನು ಹೇಗೆ ಸರಿಹೊಂದಿಸುವುದೆಂದು ತೋರಿಸಿ. ಇಡೀ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಬೇಕೆಂದಿಲ್ಲ. ಪ್ರಾತ್ಯಕ್ಷಿಕೆಯ ಮಧ್ಯದಲ್ಲೇ ಆಗಲಿ ಪೀಠಿಕೆ ಕೊಟ್ಟ ಕೂಡಲೆ ಆಗಲಿ ನಿರೂಪಣೆಯನ್ನು ಸರಿಹೊಂದಿಸಿದರೆ ಪ್ರಾತ್ಯಕ್ಷಿಕೆಯನ್ನು ಅಲ್ಲಿಗೇ ನಿಲ್ಲಿಸಿ.
ಗೀತೆ 47 ಮತ್ತು ಪ್ರಾರ್ಥನೆ