ಡಿಸೆಂಬರ್ 9ರ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 9ರ ವಾರ
ಗೀತೆ 51 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 31 ಪ್ಯಾ. 1-12 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಯೋಹಾನ 1-ಯೂದ (10 ನಿ.)
ನಂ. 1: 1 ಯೋಹಾನ 5:1-21 (4 ನಿಮಿಷದೊಳಗೆ)
ನಂ. 2: ಯೇಸು ಕ್ರಿಸ್ತನನ್ನು ನೆನಪಿಸಿಕೊಳ್ಳುವಾಗ ನಮ್ಮ ಮನಸ್ಸಲ್ಲಿ ಯಾವ ಚಿತ್ರಣ ಮೂಡಬೇಕು?—ಲೂಕ 1:32, 33; ಯೋಹಾ. 17:3 (5 ನಿ.)
ನಂ. 3: ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸುತ್ತಾನೆ—ಬೈಬಲ್ ಕಥೆಗಳು, ಕಥೆ 14 (5 ನಿ.)
□ ಸೇವಾ ಕೂಟ:
15 ನಿ: 2014ರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ. ಶಾಲಾ ಮೇಲ್ವಿಚಾರಕರ ಭಾಷಣ. 2014ರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಾಗಿರುವ ಸೂಚನೆಗಳನ್ನು ಬಳಸುತ್ತಾ, ಸ್ಥಳೀಯವಾಗಿ ಗಮನಕೊಡಬೇಕಾದ ಅಂಶಗಳನ್ನು ಚರ್ಚಿಸಿ. ಬೈಬಲ್ ವಾಚನಕ್ಕಾಗಿ ಒಂದು ಪುಸ್ತಕದ ಆರಂಭದ ಅಧ್ಯಾಯಗಳಿರುವಲ್ಲಿ, ಮುಖ್ಯಾಂಶಗಳನ್ನು ನಿರ್ವಹಿಸುವ ಸಹೋದರನು ಇನ್ನು ಮುಂದೆ “ಶಾಸ್ತ್ರವೆಲ್ಲವೂ” ಕಿರುಹೊತ್ತಗೆಯಿಂದ ವಿಷಯವನ್ನು ಚರ್ಚಿಸುವುದಿಲ್ಲವೆಂದು ವಿವರಿಸಿ. ತಮ್ಮ ನೇಮಕಗಳನ್ನು ನಿರ್ವಹಿಸುವುದರಲ್ಲಿ, ಬೈಬಲ್ ಮುಖ್ಯಾಂಶಗಳನ್ನು ತಿಳಿಸುವುದರಲ್ಲಿ, ಶುಶ್ರೂಷಾ ಶಾಲೆ ಪುಸ್ತಕದಿಂದ ಪ್ರತಿವಾರವೂ ಕೊಡಲಾಗುವ ಸಲಹೆಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಎಲ್ಲರೂ ಶ್ರದ್ಧೆ ತೋರಿಸಲು ಪ್ರೋತ್ಸಾಹಿಸಿ.
15 ನಿ: “ಪರಿಣಾಮಕಾರಿ ಪೀಠಿಕೆಗಳನ್ನು ತಯಾರಿಸುವುದು ಹೇಗೆ?” ಪ್ರಶ್ನೋತ್ತರ. ಬೈಬಲ್ ಬೋಧಿಸುತ್ತದೆ ಪುಸ್ತಕ ನೀಡಲಿಕ್ಕಾಗಿ ಎರಡು ಪ್ರಾತ್ಯಕ್ಷಿಕೆಗಳಿರಲಿ. ಮೊದಲು ಪರಿಣಾಮಕಾರಿಯಲ್ಲದ ಪೀಠಿಕೆಯದ್ದು, ನಂತರ ಪರಿಣಾಮಕಾರಿ ಪೀಠಿಕೆಯ ಪ್ರಾತ್ಯಕ್ಷಿಕೆ.
ಗೀತೆ 60 ಮತ್ತು ಪ್ರಾರ್ಥನೆ