ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/14 ಪು. 2
  • ಮೌನ ಜೊತೆಗಾರರಾಗಿರಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೌನ ಜೊತೆಗಾರರಾಗಿರಬೇಡಿ
  • 2014 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಮನೆ-ಮನೆ ಸೇವೆಯಲ್ಲಿ ಒಳ್ಳೇ ಸಹಾಯಕರಾಗಿರಿ
    2010 ನಮ್ಮ ರಾಜ್ಯದ ಸೇವೆ
  • ಶುಶ್ರೂಷೆಯಲ್ಲಿ ತೊಡಗಿರುವಾಗ ಪರಸ್ಪರ ಭಕ್ತಿವೃದ್ಧಿ ಮಾಡುವುದು
    2008 ನಮ್ಮ ರಾಜ್ಯದ ಸೇವೆ
  • ಕ್ಷೇತ್ರಸೇವೆಯಲ್ಲಿರುವಾಗ ಇತರರಿಗೆ ಸಹಾಯ ಕೊಡುವುದು
    1991 ನಮ್ಮ ರಾಜ್ಯದ ಸೇವೆ
  • ನಿಮ್ಮ ಉತ್ಸಾಹ ಕಳಕೊಳ್ಳಬೇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
2014 ನಮ್ಮ ರಾಜ್ಯದ ಸೇವೆ
km 1/14 ಪು. 2

ಮೌನ ಜೊತೆಗಾರರಾಗಿರಬೇಡಿ

1. ಶುಶ್ರೂಷೆಯಲ್ಲಿ ಇತರರೊಂದಿಗೆ ಕೆಲಸಮಾಡುತ್ತಿರುವಾಗ ನಾವು ಅಪೊಸ್ತಲ ಪೌಲನ ಮನೋಭಾವವನ್ನು ಹೇಗೆ ಅನುಕರಿಸಬಹುದು?

1 ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳೊಂದಿಗೆ ಕಳೆಯುತ್ತಿದ್ದ ಸಮಯವನ್ನು ‘ಉತ್ತೇಜನದ ಪರಸ್ಪರ ವಿನಿಮಯ ಮಾಡಿಕೊಳ್ಳುವ’ ಸಂದರ್ಭಗಳಾಗಿ ಪರಿಗಣಿಸಿದನು. (ರೋಮ. 1:12) ನೀವು ಶುಶ್ರೂಷೆಯಲ್ಲಿ ಇನ್ನೊಬ್ಬ ಪ್ರಚಾರಕರೊಂದಿಗೆ ಕೆಲಸಮಾಡುವಾಗ ಅವರಿಗೆ ಪ್ರೋತ್ಸಾಹ, ನೆರವು ನೀಡಲು ಆ ಸಮಯವನ್ನು ಬಳಸುತ್ತೀರೊ? ಮೌನ ಜೊತೆಗಾರರಾಗಿರಬೇಡಿ. ಪರಿಣಾಮಕಾರಿ ಪ್ರಚಾರಕರಾಗಲು ನಿಮಗೆ ಸಹಾಯಮಾಡಿರುವ ಅಂಶಗಳನ್ನು ಅವರೊಂದಿಗೆ ಹಂಚಿಕೊಳ್ಳಿ.

2. ನಮ್ಮೊಟ್ಟಿಗಿರುವ ಪ್ರಚಾರಕರ ಆತ್ಮವಿಶ್ವಾಸ ಹೆಚ್ಚಿಸಲು ನಾವೇನು ಮಾಡಬಹುದು? ಇದೇಕೆ ಪ್ರಾಮುಖ್ಯ?

2 ಆತ್ಮವಿಶ್ವಾಸ ಮೂಡಿಸಿ: ಕೆಲವು ಪ್ರಚಾರಕರಿಗೆ ಆತ್ಮವಿಶ್ವಾಸದ ಕೊರತೆಯಿದೆ. ಇದು ಅವರ ಮುಖಭಾವದಿಂದ ಇಲ್ಲವೆ ಸ್ವರದಿಂದ ಗೊತ್ತಾಗುತ್ತದೆ. ಅವರನ್ನು ಮನಃಪೂರ್ವಕವಾಗಿ ಶ್ಲಾಘಿಸಿ ಅವರ ಆತ್ಮವಿಶ್ವಾಸವನ್ನು ನಾವು ಹೆಚ್ಚಿಸಬಹುದು. ಇನ್ಯಾವ ವಿಧಗಳಲ್ಲಿ ಇದನ್ನು ಮಾಡಬಹುದು? ಒಬ್ಬ ಸಂಚರಣಾ ಮೇಲ್ವಿಚಾರಕನು ತನ್ನೊಟ್ಟಿಗೆ ಕೆಲಸಮಾಡುತ್ತಿರುವವರಿಗೆ ಸ್ವತಃ ತನಗೆ ಯಾವ ರೀತಿಯ ಹೆದರಿಕೆ ಅಂಜಿಕೆಗಳಿವೆಯೆಂದು ಮುಚ್ಚುಮರೆಯಿಲ್ಲದೆ ತಿಳಿಸುತ್ತಾನೆ. ಅಲ್ಲದೆ ಆ ಭಾವನೆಗಳನ್ನು ಹೊಡೆದೊಡಿಸಲು ತಾನೆಷ್ಟೊ ಬಾರಿ ಪ್ರಾರ್ಥಿಸುತ್ತೇನೆ ಎಂದೂ ತಿಳಿಸುತ್ತಾನೆ. ಆತ್ಮವಿಶ್ವಾಸ ತೋರಿಸಲು ತನಗೆ ನೆರವಾದ ವಿಷಯದ ಬಗ್ಗೆ ಇನ್ನೊಬ್ಬ ಸಹೋದರನು ಹೀಗಂದನು: “ನಸುನಗು ಸಹಾಯಕಾರಿ. ಈ ಚಿಕ್ಕ ಸಂಗತಿ ಮಾಡಲಿಕ್ಕಾಗಿ ಸಹಾಯ ಕೋರುತ್ತಾ ಕೆಲವೊಮ್ಮೆ ನಾವು ಪ್ರಾರ್ಥನೆ ಮಾಡಬೇಕಾಗುತ್ತದೆ.” ಶುಶ್ರೂಷೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ನಿಮಗೆ ಯಾವುದು ಸಹಾಯಮಾಡಿತು? ಅದನ್ನು ನಿಮ್ಮ ಸೇವಾ ಜೊತೆಗಾರರೊಂದಿಗೆ ಹಂಚಿಕೊಳ್ಳಿ.

3. ಶುಶ್ರೂಷೆಯಲ್ಲಿ ಹೆಚ್ಚು ಪರಿಣಾಮಕಾರಿ ಆಗುವಂತೆ ಸಹಾಯಮಾಡುವ ಯಾವ ವಿಷಯಗಳನ್ನು ನಮ್ಮ ಜೊತೆಗಾರರಿಗೆ ತಿಳಿಸಬಹುದು?

3 ವಿಧಾನಗಳನ್ನು ತಿಳಿಸಿ: ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ (ಬಹುಶಃ ಒಂದು ಸ್ಥಳೀಯ ಘಟನೆ ಬಗ್ಗೆ) ನೀವು ಹೇಳಿದ ಒಂದು ವಾಕ್ಯ ಇಲ್ಲವೆ ಕೇಳಿದ ಪ್ರಶ್ನೆ ಸಂಭಾಷಣೆ ಆರಂಭಿಸಲು ತುಂಬ ಪರಿಣಾಮಕಾರಿ ಆಗಿತ್ತಾ? ಮಾದರಿ ನಿರೂಪಣೆಯೊಂದಕ್ಕೆ ನೀವು ಕೂಡಿಸಿರುವ ಒಂದು ಆಸಕ್ತಿಕರ ಅಂಶದಿಂದ ಒಳ್ಳೇ ಫಲಿತಾಂಶ ಸಿಕ್ಕಿದೆಯಾ? ಮನೆಯವರ ಸನ್ನಿವೇಶಕ್ಕೆ ತಕ್ಕಂತೆ ನಿಮ್ಮ ನಿರೂಪಣೆಯನ್ನು ಹೊಂದಿಸಿಕೊಳ್ಳಲು ಏನು ಮಾಡಿದ್ದೀರಿ? ಈ ವಿಷಯಗಳನ್ನು ನಿಮ್ಮ ಜೊತೆಗಾರರಿಗೆ ತಿಳಿಸಿ. (ಜ್ಞಾನೋ. 27:17) ಪುನರ್ಭೇಟಿಗೆ ಹೋಗುತ್ತಿರುವಾಗ ನಿಮ್ಮ ಭೇಟಿಯ ಉದ್ದೇಶ ಏನು, ಅದನ್ನು ಹೇಗೆ ಸಾಧಿಸಲು ಯೋಜಿಸಿದ್ದೀರೆಂದು ತಿಳಿಸಿ. ಒಂದು ಬೈಬಲ್‌ ಅಧ್ಯಯನ ಮುಗಿದ ನಂತರ, ವಿದ್ಯಾರ್ಥಿಯ ಅಗತ್ಯಕ್ಕೆ ತಕ್ಕಂತೆ ಒಂದು ನಿರ್ದಿಷ್ಟ ಅಂಶ, ವಚನ, ಬೋಧನಾ ವಿಧಾನವನ್ನು ನೀವೇಕೆ ಬಳಸಿದಿರೆಂದು ವಿವರಿಸಬಹುದು.

4. ಜೊತೆ ಸೌವಾರ್ತಿಕರಿಗೆ ಸಹಾಯಮಾಡಲು ನಾವೇಕೆ ಆಸಕ್ತರಾಗಿರಬೇಕು?

4 ಪ್ರಥಮ ಶತಮಾನದ ಸೌವಾರ್ತಿಕರು ಬರೇ ಅವಿಶ್ವಾಸಿಗಳಿಗೆ ಸಹಾಯಮಾಡುವುದರಲ್ಲಿ ಆಸಕ್ತರಾಗಿರಲಿಲ್ಲ. ಅವರು ಪರಸ್ಪರರನ್ನು ಪ್ರೋತ್ಸಾಹಿಸುವುದು ಮತ್ತು ಬಲಪಡಿಸುವುದನ್ನೂ ಮಹತ್ವದ್ದೆಂದು ಎಣಿಸಿದ್ದರು. (ಅ. ಕಾ. 11:23; 15:32) ಅಪೊಸ್ತಲ ಪೌಲನು ಯುವ ತಿಮೊಥೆಯನಿಗೆ ತರಬೇತಿ ಕೊಟ್ಟು, ಕಲಿತದ್ದನ್ನು ಇತರರಿಗೆ ಕಲಿಸುವಂತೆ ಪ್ರೋತ್ಸಾಹಿಸಿದನು. (2 ತಿಮೊ. 2:2) ಶುಶ್ರೂಷೆಯಲ್ಲಿ ಜೊತೆ ಕ್ರೈಸ್ತರಿಗೆ ಒಳ್ಳೇದನ್ನು ಮಾಡಲು ನಾವು ಮರೆಯದಿರುವಾಗ ಅವರ ಆನಂದ ಹಾಗೂ ಪರಿಣಾಮಕಾರಿತ್ವವನ್ನು ವರ್ಧಿಸುತ್ತೇವೆ. ಜೊತೆಗೆ, ಸ್ವರ್ಗದಲ್ಲಿರುವ ನಮ್ಮ ತಂದೆಯನ್ನೂ ಸಂತೋಷಪಡಿಸುತ್ತೇವೆ.—ಇಬ್ರಿ. 13:15, 16.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ