ಫೆಬ್ರವರಿ 3ರ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 3ರ ವಾರ
ಗೀತೆ 133 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 7 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 21-24 (10 ನಿ.)
ನಂ. 1: ಆದಿಕಾಂಡ 23:1-20 (4 ನಿಮಿಷದೊಳಗೆ)
ನಂ. 2: ದೀಕ್ಷಾಸ್ನಾನ ಒಂದು ಕ್ರಿಸ್ತೀಯ ಆವಶ್ಯಕತೆ—ಬೈಬಲ್ ವಿಷಯಗಳು 10 ಎ (5 ನಿ.)
ನಂ. 3: ಹೇಬೆಲ ದೇವರು ಇಷ್ಟಪಡುವಂಥ ನಂಬಿಕೆ ತೋರಿಸಿದನು—ಆದಿ. 4:2-8; ಇಬ್ರಿ. 11:4 (5 ನಿ.)
ಸೇವಾ ಕೂಟ:
10 ನಿ: ಫೆಬ್ರವರಿ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಿ. ಚರ್ಚೆ. ಆರಂಭದಲ್ಲೇ ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಒಂದು ಪ್ರಾತ್ಯಕ್ಷಿಕೆ ಇರಲಿ. ಇದಕ್ಕಾಗಿ ಈ ಪುಟದಲ್ಲೇ ಇರುವ ಮಾದರಿ ನಿರೂಪಣೆಯನ್ನು ಬಳಸಿ. ನಂತರ ಇಡೀ ನಿರೂಪಣೆಯನ್ನು ವಿಶ್ಲೇಷಿಸಿ. ಹೀಗೆ ಮಾಡಿ: ಒಂದೆರಡು ವಾಕ್ಯಗಳನ್ನು ಓದಿ ಸಭಿಕರಿಗೆ ಅದರ ಉದ್ದೇಶವೇನೆಂದು ಹೇಳುವಂತೆ ಕೇಳಿ. ಇಡೀ ನಿರೂಪಣೆಯನ್ನು ಹೀಗೆ ಮಾಡಿ. ಪ್ರಚಾರಕರು ಮಾದರಿ ನಿರೂಪಣೆಯನ್ನು ತಮ್ಮ ಸ್ವಂತ ಮಾತುಗಳಲ್ಲಿ ಹಾಕಬೇಕೆಂದು ನೆನಪು ಹುಟ್ಟಿಸಿ. ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಬಹುದು ಅಥವಾ ತಮ್ಮದೇ ಆದ ಇನ್ನೊಂದು ನಿರೂಪಣೆಯನ್ನು ತಯಾರಿಸಬಹುದು. ಈ ಭಾಗದ ಕೊನೆಯಲ್ಲಿ ಎಲ್ಲರಿಗೂ ಪತ್ರಿಕೆಗಳನ್ನು ಮೊದಲಿಂದ ಕೊನೆವರೆಗೂ ಓದುವಂತೆ ಮತ್ತು ಅದರ ವಿತರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಾವೇನನ್ನು ಸಾಧಿಸಿದ್ದೇವೆ? ಸೇವಾ ಮೇಲ್ವಿಚಾರಕರಿಂದ ಚರ್ಚೆ. ರಾಜ್ಯ ವಾರ್ತೆ ನಂ. 38ನ್ನು ವಿತರಿಸುವ ಅಭಿಯಾನದಲ್ಲಿ ಸಭೆ ಎಷ್ಟು ಸೇವಾಕ್ಷೇತ್ರವನ್ನು ಆವರಿಸಿದೆ ಎಂದು ತಿಳಿಸಿ. ಅಭಿಯಾನದಲ್ಲಿ ಪಾಲ್ಗೊಂಡದ್ದರಿಂದ ತಮಗೇನು ಪ್ರಯೋಜನವಾಗಿದೆ ಮತ್ತು ತಮಗೆ ಸಿಕ್ಕಿದ ಎದ್ದುಕಾಣುವ ಅನುಭವಗಳನ್ನು ತಿಳಿಸುವಂತೆ ಸಭಿಕರಿಗೆ ಹೇಳಿ.
ಗೀತೆ 25 ಮತ್ತು ಪ್ರಾರ್ಥನೆ