ಏಪ್ರಿಲ್ 21ರ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 21ರ ವಾರ
ಗೀತೆ 24 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 18 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 15-18 (10 ನಿ.)
ನಂ. 1: ವಿಮೋಚನಕಾಂಡ 15:20-16:5 (4 ನಿಮಿಷದೊಳಗೆ)
ನಂ. 2: ಸೃಷ್ಟಿ ವಿಜ್ಞಾನದೊಂದಿಗೆ ಒಪ್ಪುತ್ತದೆ; ವಿಕಾಸವಾದ ತಪ್ಪೆಂದು ರುಜುಪಡಿಸುತ್ತದೆ—ಬೈಬಲ್ ವಿಷಯಗಳು 44 ಎ (5 ನಿ.)
ನಂ. 3: ಗರ್ಭಪಾತದ ಬಗ್ಗೆ ದೇವರಿಗಿರುವ ನೋಟ ಜೀವಕ್ಕಿರುವ ಬೆಲೆಯನ್ನು ತೋರಿಸುತ್ತದೆ (5 ನಿ.)
ಸೇವಾ ಕೂಟ:
15 ನಿ: ಪ್ರಯಾಸಪಟ್ಟು ಕೆಲಸ ಮಾಡುವವರು. (1 ಥೆಸ. 5: 12, 13) ಇಬ್ಬರು ಹಿರಿಯರ ಸಂದರ್ಶನ ನಡೆಸಿ: ಅವರ ಸಭಾ ಮತ್ತು ದೇವಪ್ರಭುತ್ವಾತ್ಮಕ ನೇಮಕಗಳು ಯಾವುವು? ಇತರ ಜವಾಬ್ದಾರಿಗಳ ಮಧ್ಯೆ ಇವನ್ನು ಅವರು ಹೇಗೆ ನಿರ್ವಹಿಸುತ್ತಿದ್ದಾರೆ? ಸೇವೆಗೆ ಹೋಗುವುದನ್ನು ಅವರು ಹೇಗೆ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ? ಕುಟುಂಬದವರು ಹೇಗೆ ಸಹಾಯ ಮಾಡಿದ್ದಾರೆ?
15 ನಿ: ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ತಯಾರಿಸುವುದು ಹೇಗೆ? ಸಭಿಕರೊಂದಿಗೆ ಚರ್ಚೆ. ಶಾಲೆಗೆ ಹೋಗುವ ಕ್ರೈಸ್ತ ಮಕ್ಕಳಿಗೆ ಎದುರಾಗುವ ಕೆಲವು ಸವಾಲುಗಳೇನೆಂದು ಸಭಿಕರನ್ನು ಕೇಳಿ. ಪ್ರಲೋಭನೆಗಳನ್ನು ಪ್ರತಿರೋಧಿಸಲು ಮತ್ತು ನಂಬಿಕೆಗಳ ಬಗ್ಗೆ ವಿವರಿಸಲು ಮಕ್ಕಳನ್ನು ಸಿದ್ಧಗೊಳಿಸುವುದಕ್ಕಾಗಿ ಹೆತ್ತವರು ಕುಟುಂಬ ಆರಾಧನೆಯ ಸಮಯದಲ್ಲಿ ಸಂಶೋಧನಾ ಸಾಧನ, ಯುವ ಜನರ ಪ್ರಶ್ನೆಗಳು ಪುಸ್ತಕ ಹಾಗೂ ಸಂಘಟನೆ ಒದಗಿಸುವ ಮತ್ತಿತರ ಸಾಧನಗಳನ್ನು ಹೇಗೆ ಬಳಸಬಹುದೆಂದು ವಿವರಿಸಿ. (1 ಪೇತ್ರ 3:15) ಒಂದೆರಡು ವಿಷಯಗಳನ್ನು ಆರಿಸಿ, ಅದಕ್ಕೆ ಸಂಬಂಧಪಟ್ಟಂತೆ ನಮ್ಮ ಪ್ರಕಾಶನಗಳಲ್ಲಿರುವ ಸಹಾಯಕಾರಿ ಮಾಹಿತಿಯನ್ನು ವಿವರಿಸಿ. ಶಾಲೆಯಲ್ಲಿ ಹೇಗೆ ಸಾಕ್ಷಿಕೊಟ್ಟಿದ್ದಾರೆಂದು ತಿಳಿಸುವಂತೆ ಸಭಿಕರನ್ನು ಕೇಳಿ.
ಗೀತೆ 91 ಮತ್ತು ಪ್ರಾರ್ಥನೆ