ಜುಲೈ 7ರ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 7ರ ವಾರ
ಗೀತೆ 119 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಯೆಹೋವ ದೇವರ ಇಷ್ಟ ಪಾಠ 5-7 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 17-20 (10 ನಿ.)
ನಂ. 1: ಯಾಜಕಕಾಂಡ 19:19-32 (4 ನಿಮಿಷದೊಳಗೆ)
ನಂ. 2: ಪಿಶಾಚನು ಈ ಲೋಕದ ಅದೃಶ್ಯ ಅಧಿಪತಿಯಾಗಿದ್ದಾನೆ—ಬೈಬಲ್ ವಿಷಯಗಳು 16 ಬಿ (5 ನಿ.)
ನಂ. 3: ದೀನಳು ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತಾಳೆ—ಬೈಬಲ್ ಕಥೆಗಳು, ಕಥೆ 20 (5 ನಿ.)
ಸೇವಾ ಕೂಟ:
10 ನಿ: ಜುಲೈ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಿ. ಚರ್ಚೆ. ಆರಂಭದಲ್ಲೇ ಜುಲೈ-ಸೆಪ್ಟೆಂಬರ್ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಒಂದು ಪ್ರಾತ್ಯಕ್ಷಿಕೆ ಇರಲಿ. ಇದಕ್ಕಾಗಿ ಈ ಪುಟದಲ್ಲೇ ಇರುವ ಮಾದರಿ ನಿರೂಪಣೆಯನ್ನು ಬಳಸಿ. ನಂತರ ಇಡೀ ನಿರೂಪಣೆಯನ್ನು ವಿಶ್ಲೇಷಿಸಿ. ಈ ಭಾಗದ ಕೊನೆಯಲ್ಲಿ ಎಲ್ಲರಿಗೂ ಪತ್ರಿಕೆಗಳನ್ನು ಮೊದಲಿಂದ ಕೊನೆವರೆಗೂ ಓದುವಂತೆ ಮತ್ತು ಅದರ ವಿತರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಾವೇನು ಸಾಧಿಸಿದ್ದೇವೆ? ಸಭಾ ಸೆಕ್ರಿಟರಿಯಿಂದ ಚರ್ಚೆ. ಕ್ರಿಸ್ತನ ಸ್ಮರಣೆಯ ಸಮಯಾವಧಿಯಲ್ಲಿ ಏನೆಲ್ಲ ಸಾಧಿಸಲಾಗಿದೆ ಎಂದು ತಿಳಿಸಿ, ಅದಕ್ಕಾಗಿ ಸಭಿಕರನ್ನು ಶ್ಲಾಘಿಸಿ. ಆಮಂತ್ರಣ ಪತ್ರ ಕೊಡುವಾಗ ಅಥವಾ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವಾಗ ದೊರೆತ ಒಳ್ಳೇ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ. ತಮಗೆ ಸಿಕ್ಕಿದ ಆಸಕ್ತರನ್ನು ತಪ್ಪದೆ ಪುನಃ ಭೇಟಿ ಮಾಡುವಂತೆ ಪ್ರಚಾಕರನ್ನು ಪ್ರೋತ್ಸಾಹಿಸಿ.
ಗೀತೆ 123 ಮತ್ತು ಪ್ರಾರ್ಥನೆ