ಸೆಪ್ಟೆಂಬರ್ 8ರ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 8ರ ವಾರ
ಗೀತೆ 87 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು ಕಥೆ 3, 4 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 22-25 (10 ನಿ.)
ನಂ. 1: ಅರಣ್ಯಕಾಂಡ 22:36-23:10 (4 ನಿಮಿಷದೊಳಗೆ)
ನಂ. 2: ವಿವಿಧ ಭಾಷೆಯಲ್ಲಿ ಮಾತಾಡುವುದು ಕೇವಲ ಒಂದು ತಾತ್ಕಾಲಿಕ ಒದಗಿಸುವಿಕೆ—ಬೈಬಲ್ ವಿಷಯಗಳು 34 ಡಿ (5 ನಿ.)
ನಂ. 3: ಒಬ್ಬ ಕೆಟ್ಟ ಅರಸ ಐಗುಪ್ತವನ್ನು ಆಳುತ್ತಾನೆ—ಬೈಬಲ್ ಕಥೆಗಳು, ಕಥೆ 27 (5 ನಿ.)
❑ ಸೇವಾ ಕೂಟ:
10 ನಿ: ಸಾರುವಾಗ ಸಭ್ಯವಾಗಿ ನಡೆದುಕೊಳ್ಳಿ. (2 ಕೊರಿಂ. 6:3) ಈ ಕೆಳಗಿನ ಪ್ರಶ್ನೆಗಳನ್ನು ಆಧರಿಸಿ ಚರ್ಚೆ: (1) ಸಾರುವಾಗ ಸಭ್ಯವಾಗಿ ನಡೆದುಕೊಳ್ಳುವುದು ಏಕೆ ಪ್ರಾಮುಖ್ಯ? (2) ಕೆಳಗೆ ಕೊಡಲಾದ ಈ ಸನ್ನಿವೇಶಗಳಲ್ಲಿ ಹೇಗೆ ಸಭ್ಯವಾಗಿ ನಡೆದುಕೊಳ್ಳಬಲ್ಲೆವು: (ಎ) ನಮ್ಮ ಗುಂಪು ಟೆರಿಟೊರಿಗೆ ಹೋದಾಗ? (ಬಿ) ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವ ಸಮಯದಲ್ಲಿ? (ಸಿ) ಮನೆಬಾಗಿಲಲ್ಲಿ ನಿಂತಿರುವಾಗ? (ಡಿ) ನಮ್ಮ ಸಂಗಡಿಗನು ಸಾಕ್ಷಿ ಕೊಡುತ್ತಿರುವಾಗ? (ಇ) ಮನೆಯವರು ನಮ್ಮೊಂದಿಗೆ ಮಾತಾಡುತ್ತಿರುವಾಗ? (ಎಫ್) ಮನೆಯವರಿಗೆ ಬಿಡುವಿಲ್ಲದಿದ್ದರೆ ಅಥವಾ ಹವಾಮಾನ ಪ್ರತಿಕೂಲವಾಗಿರುವಾಗ? (ಜಿ) ಮನೆಯವರು ಒರಟಾಗಿ ಮಾತಾಡಿದಾಗ?
10 ನಿ: ಅಗತ್ಯವಿದ್ದಲ್ಲಿ ಹೋಗಿ ಸಹಾಯಮಾಡಲು ನೀವು ಸಿದ್ಧರಿದ್ದೀರೋ? ಸೇವಾ ಮೇಲ್ವಿಚಾರಕನಿಂದ ಭಾಷಣ. ಜುಲೈ 2001ರ ನಮ್ಮ ರಾಜ್ಯ ಸೇವೆಯ ಪುಟ 4ರ ಆಧರಿತ. ಸಾಧ್ಯವಾದರೆ ಶುಶ್ರೂಷೆಯನ್ನು ವಿಸ್ತರಿಸಿದ ಅಥವಾ ವಿಸ್ತರಿಸುವ ಗುರಿಯನ್ನಿಟ್ಟಿರುವ ಒಬ್ಬ ಪಯನೀಯರನ್ನು ಸಂದರ್ಶನ ಮಾಡಿ.
10 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪುನ ರ್ಭೇಟಿಗಾಗಿ ತಳಪಾಯ ಹಾಕಿ.” ಚರ್ಚೆ. ಪ್ರಚಾರಕನೊಬ್ಬನು ಸೇವೆಗಾಗಿ ತಯಾರಿ ಮಾಡುತ್ತಾ ತಾನು ಕೊಡುವ ಪತ್ರಿಕೆಯನ್ನು ಮನೆಯವನು ತೆಗೆದುಕೊಂಡರೆ ಪುನರ್ಭೇಟಿಗಾಗಿ ಯಾವ ಸೂಕ್ತ ಪ್ರಶ್ನೆಯನ್ನು ಕೇಳಬೇಕೆಂದು ಯೋಚಿಸುವ ಸ್ವಗತವಿರಲಿ.
ಗೀತೆ 68 ಮತ್ತು ಪ್ರಾರ್ಥನೆ